ಬ್ರೇಕಿಂಗ್ ನ್ಯೂಸ್
08-03-22 07:09 pm HK new Desk ದೇಶ - ವಿದೇಶ
ಹೈದರಾಬಾದ್, ಮಾ.8 : ಕಳೆದ ಬಾರಿ ಲಾಕ್ಡೌನ್ ಮಧ್ಯೆ ಸಿಲುಕಿದ್ದ ಮಗನನ್ನು ಕರೆತರಲು ಸ್ವತಃ ತಾಯಿಯೇ 1400 ಕಿಮೀ ದೂರಕ್ಕೆ ಸ್ಕೂಟರಿನಲ್ಲಿ ಪ್ರಯಾಣಿಸಿದ್ದಳು. ಆದರೆ, ಈ ಬಾರಿ ಅದೇ ಹುಡುಗ ದೂರದ ಉಕ್ರೇನ್ ದೇಶದಲ್ಲಿ ಸಿಕ್ಕಿಬಿದ್ದಿದ್ದಾನೆ. ಅಂದು ಮೆಡಿಕಲ್ ಶಿಕ್ಷಣದ ನೀಟ್ ಪರೀಕ್ಷೆ ಬರೆಯಲು ಹೈದ್ರಾಬಾದ್ ಹೋಗಿದ್ದರೆ, ಈಗ ಮೆಡಿಕಲ್ ಶಿಕ್ಷಣ ಕಲಿಯಲು ಹುಡುಗ ಉಕ್ರೇನ್ ತೆರಳಿದ್ದಾನೆ.
ಕಳೆದ ಬಾರಿ ಲಾಕ್ಡೌನ್ ಆಗಿದ್ದಾಗ ಆಯಾ ಭಾಗದಲ್ಲಿ ಸಿಕ್ಕಿಬಿದ್ದವರು ಕಷ್ಟಕ್ಕೆ ಒಳಗಾಗಿದ್ದರು. ಮೆಡಿಕಲ್ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಮೊಹಮ್ಮದ್ ನಿಜಾಮುದ್ದೀನ್ ಎಂಬ 17 ವರ್ಷದ ಹುಡುಗ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸಿಕ್ಕಿಬಿದ್ದಿದ್ದ. ಹೈದ್ರಾಬಾದಿನಲ್ಲಿದ್ದುಕೊಂಡು ನೀಟ್ ಸಿದ್ಧತೆ ನಡೆಸುತ್ತಿದ್ದಾಗ, ತನ್ನ ಗೆಳೆಯನ ಜೊತೆಗೆ ನೆಲ್ಲೂರಿಗೆ ತೆರಳಿದ್ದಾಗಲೇ ಲಾಕ್ಡೌನ್ ಎದುರಾಗಿತ್ತು. ನೆಲ್ಲೂರಿನಲ್ಲಿ ಸಿಕ್ಕಿಬಿದ್ದ ಮಗನನ್ನು ಕರೆತರಲು 45 ವರ್ಷದ ತಾಯಿ ರಜಿಯಾ ಬೇಗಂ ಸ್ವತಃ ತನ್ನ ಸ್ಕೂಟರಿನಲ್ಲಿ 1400 ಕಿಮೀ ದೂರವನ್ನು ಮೂರು ದಿನಗಳ ಕಾಲ ಸಂಚರಿಸಿದ್ದು ಭಾರೀ ಸುದ್ದಿಯಾಗಿತ್ತು.
ಮಹಾರಾಷ್ಟ್ರ- ತೆಲಂಗಾಣ ರಾಜ್ಯಗಳ ಗಡಿಭಾಗ ಬೋಧನ್ ಎನ್ನುವ ಗ್ರಾಮದಲ್ಲಿ ರಜಿಯಾ ಬೇಗಂ ಶಾಲಾ ಶಿಕ್ಷಕಿಯಾಗಿದ್ದಾರೆ. ಮಗ ನಿಜಾಮುದ್ದೀನ್, ನೀಟ್ ತೇರ್ಗಡೆಯಾಗಿ ಮೆಡಿಕಲ್ ಶಿಕ್ಷಣ ಪಡೆಯಲು ಯುಕ್ರೇನ್ ತೆರಳಿದ್ದು, ಈಗ ಮರಳಿ ಬರಲು ಸಾಧ್ಯವಾಗದೇ ಸಿಕ್ಕಿಬಿದ್ದಿದ್ದಾನೆ. ಯುಕ್ರೇನಿನ ಉತ್ತರ ಪ್ರಾಂತ್ಯದ ಸುಮಿ ನಗರದಲ್ಲಿ 800 ಮಂದಿ ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎನ್ನಲಾಗುತ್ತಿದ್ದು, ಅವರನ್ನು ಅಲ್ಲಿಂದ ರಕ್ಷಿಸಿ ಕರೆತರಲು ರಾಯಭಾರ ಕಚೇರಿ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ.
ಹೀಗಾಗಿ ಎರಡು ವರ್ಷಗಳ ಹಿಂದೆ ಅದೇ ಹುಡುಗನನ್ನು ಕರೆತರಲು ಮೂರು ದಿನಗಳ ಕಾಲ ನಿರಂತರ ಸ್ಕೂಟರ್ ಸವಾರಿ ಮಾಡಿ ಗಮನಸೆಳೆದಿದ್ದ ತಾಯಿ ರಜಿಯಾ ಬೇಗಂ ಈಗ ಯುಕ್ರೇನಿಂದ ಮಗನನ್ನು ಕರೆತರಲು ಭಾರತದ ರಾಯಭಾರ ಕಚೇರಿಯ ಮೊರೆ ಹೋಗಿದ್ದಾರೆ.
The last time there was a lockdown, those caught in the respective area suffered. mohammad nizamuddin, a 17-year-old boy who was preparing for a medical neet exam, was trapped in nellore district of andhra pradesh. neet was preparing for hyderabad when she left for nellore with her friend when the lockdown came. it was a big news that 45-year-old mother razia begum herself travelled 1400 km on her scooter for three days to fetch her trapped son in nellore.
16-01-26 09:38 pm
Bangalore Correspondent
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
16-01-26 10:28 pm
Mangalore Correspondent
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಜಾಹಿರ...
16-01-26 12:31 pm
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm