ಬ್ರೇಕಿಂಗ್ ನ್ಯೂಸ್
15-02-22 12:38 pm HK Desk news ದೇಶ - ವಿದೇಶ
ಕೊಚ್ಚಿ , ಫೆ.15 : ಕೊರೊನಾ ಲಾಕ್ಡೌನ್ ಸಂಕಷ್ಟದಿಂದ ತೀವ್ರ ನಷ್ಟಕ್ಕೆ ತುತ್ತಾದ ಬಸ್ ಮಾಲೀಕರೊಬ್ಬರು ಕೇಜಿಗೆ 45 ರೂ.ನಂತೆ ತಮ್ಮ ಬಸ್ ಗಳನ್ನು ಗುಜರಿ ಬೆಲೆಗೆ ಮಾರಾಟಕ್ಕಿಟ್ಟಿದ್ದಾರೆ.
ಎರಡು ವರ್ಷಗಳ ಸತತ ಲಾಕ್ಡೌನ್ ಕಾರಣದಿಂದ ಬೇಸತ್ತ ಮಾಲೀಕ ತನ್ನಲ್ಲಿರುವ ವಾಹನಗಳನ್ನು ಗುಜರಿ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಕೊಚ್ಚಿಯಲ್ಲಿ ರಾಯಲ್ ಟ್ರಾವೆಲ್ಸ್ ಹೆಸರಿನಲ್ಲಿ ಟೂರಿಸ್ಟ್ ವಾಹನಗಳನ್ನು ನಡೆಸುತ್ತಿರುವ ರಾಯ್ಸನ್ ಜೋಸೆಫ್ ಈ ರೀತಿಯ ನಿರ್ಧಾರಕ್ಕೆ ಬಂದವರು. ಈಗ ಉಳಿದಿರುವ ಹತ್ತು ಬಸ್ ಗಳ ಪೈಕಿ ಮೂರನ್ನು ಸದ್ಯಕ್ಕೆ ಕೇಜಿ ರೂ. 45 ರಂತೆ ಮಾರಾಟಕ್ಕೆ ಇಟ್ಟಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದಾಗಿ ಟ್ರಾವೆಲ್ ಏಜನ್ಸಿಗೆ ತುಂಬ ನಷ್ಟವಾಗಿದೆ. ಈಗ ಸ್ವಲ್ಪ ಮಟ್ಟಿಗೆ ಸುಧಾರಣೆ ಆದರೂ, ಜನರು ಬಾಡಿಗೆ ವಾಹನಗಳತ್ತ ಬರುವುದಿಲ್ಲ. ಹೆಚ್ಚಿನವರು ಸ್ವಂತ ವಾಹನಗಳಲ್ಲಿ ತೆರಳುತ್ತಿದ್ದಾರೆ. ಬಸ್ ಗಳಿಗಂತೂ ಜನರೇ ಇಲ್ಲವಾಗಿದೆ ಎಂದು ರಾಯ್ಸನ್ ಹೇಳುತ್ತಾರೆ. ಈ ಟೂರಿಸ್ಟ್ ಬಿಸಿನೆಸ್ ಮುಂದುವರಿಸಲು ಸಾಧ್ಯವಿಲ್ಲ. ಈಗಾಗಲೇ ಇಪ್ಪತ್ತು ಬಸ್ ಗಳಲ್ಲಿ ಹತ್ತನ್ನು ಮಾರಿದ್ದೇನೆ. ಉಳಿದಿರುವ ಬಸ್ ಗಳನ್ನು ಕೂಡ ಗುಜರಿ ರೇಟಿಗೆ ಮಾರಾಟಕ್ಕೆ ಮುಂದಾಗಿದ್ದೇನೆ. ನನ್ನ ಕುಟುಂಬ ಬದುಕಲು ಇದರ ಹೊರತು ಬೇರೆ ಗತಿಯಿಲ್ಲ. ನಮ್ಮ ನೌಕರರು ಕೂಡ ಸಂಕಷ್ಟದಲ್ಲಿದ್ದಾರೆ ಎಂದು ರಾಯ್ಸನ್ ತನ್ನ ಕಷ್ಟ ಹೇಳಿಕೊಂಡಿದ್ದಾರೆ.
ಲಾಕ್ಡೌನ್ ಇದ್ದಾಗ ಬುಕ್ ಆಗಿದ್ದ ಟೂರನ್ನು ನಡೆಸಬಹುದೇ ಎನ್ನುವ ಬಗ್ಗೆಯೂ ಕ್ಲಾರಿಟಿ ಇಲ್ಲ. ಇತ್ತೀಚೆಗೆ ಕೋವಳಂ ಟೂರಿಗೆ ಹೊರಟಿದ್ದ ಬಸ್ಸನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿತ್ತು. ಪೊಲೀಸರು ನಮ್ಮ ಬಸ್ ಮೇಲೆ ನಾಲ್ಕು ಸಾವಿರ ದಂಡ ಹಾಕಿದ್ದರು. ಇದರ ಹೊರತಾಗಿ ವರ್ಷಕ್ಕೆ ಹತ್ತು ಹಲವು ತೆರಿಗೆಯನ್ನು ಪಾವತಿ ಮಾಡಬೇಕು. ಪ್ರತೀ ಬಸ್ ಮೇಲೆ ವರ್ಷಕ್ಕೆ 40 ಸಾವಿರ ರೋಡ್ ಟ್ಯಾಕ್ಸ್ ಕಟ್ಟಬೇಕು. ಇದೆಲ್ಲವನ್ನೂ ಮಾಡಿಕೊಂಡು ಬಿಸಿನೆಸ್ ಇಲ್ಲದೆ ಬಸ್ ನಡೆಸುವುದು ಹೇಗೆ ಎಂದು ಕೇಳುತ್ತಾರೆ ರಾಯ್ಸನ್.
Because of the Covid-19 pandemic, many businesses have run into a loss. A similar event took place with a Luxury bus owner in Kochi, Kerala Where, a distraught Kochi bus owner made his intentions apparent by planning to sell his remaining ten luxury coaches for Rs 45 per kilo. Things have been tough for Kochi resident Royson Joseph, and before the pandemic, he had 20 buses of various sizes. Now, after two years, he is left with ten buses. The Contract Carriage Owners Association (CCOA) is in severe circumstances after two years of the Covid-19 outbreak. In Kerala, the CCOA has 3,500 members who own around 14,000 buses.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am