ಬ್ರೇಕಿಂಗ್ ನ್ಯೂಸ್
17-01-22 09:42 pm HK News Desk ದೇಶ - ವಿದೇಶ
ಅಬುಧಾಬಿ, ಜ.17: ಯುಎಇ ದೇಶದ ರಾಜಧಾನಿ ಅಬುಧಾಬಿಯಲ್ಲಿ ಡ್ರೋಣ್ ದಾಳಿ ನಡೆದಿದ್ದು ಇಬ್ಬರು ಭಾರತೀಯರು ಸೇರಿದಂತೆ ಮೂರು ಮಂದಿ ಸಾವನ್ನಪ್ಪಿದ್ದಾರೆ.
ಅಬುಧಾಬಿಯ ಪ್ರಮುಖ ಏರ್ಪೋರ್ಟ್ ಮತ್ತು ಸ್ಥಳೀಯ ಮೂರು ತೈಲ ಸ್ಟೋರೇಜ್ ಟ್ಯಾಂಕರ್ ಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಬೆಂಕಿ ಹತ್ತಿಕೊಂಡಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಮೂರು ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಭಾರತ ಮೂಲದವರು ಮತ್ತು ಒಬ್ಬ ಪಾಕಿಸ್ಥಾನಿ ಪ್ರಜೆ ಅನ್ನುವ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತರ ಹೆಸರು ಇನ್ನೂ ಬಹಿರಂಗ ಆಗಿಲ್ಲ.
ಅಬುಧಾಬಿ ಸರಕಾರಿ ಅಧೀನದ ಮೂರು ತೈಲ ಸ್ಟೋರೇಜ್ ಟ್ಯಾಂಕ್ ಮೇಲೆ ದಾಳಿ ನಡೆದಿದೆ. ಯೆಮೆನ್ ಮೂಲದ ಹೌತಿ ಬಂಡುಕೋರರು ದಾಳಿ ನಡೆಸಿದ್ದಾರೆ ಎನ್ನುವ ಬಗ್ಗೆ ಮಾಹಿತಿಗಳಿವೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಹಾರುತ್ತಾ ಬಂದ ಡ್ರೋಣ್ ರೀತಿಯ ವಸ್ತು ಆಕಾಶದಲ್ಲಿ ಬಂದಿದ್ದು, ಆನಂತರ ಎರಡು ಕಡೆ ಸ್ಫೋಟಕ ವಸ್ತುವನ್ನು ಬೀಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿಯ ಸಂಜಯ್ ಸುಧೀರ್ ಈ ಬಗ್ಗೆ ಮಾಹಿತಿ ನೀಡಿದ್ದು, ಮೂರು ಮಂದಿಯಲ್ಲಿ ಇಬ್ಬರು ಭಾರತೀಯರು ಇರುವುದು ದೃಢಪಟ್ಟಿದೆ. ನಾವು ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ. ಏರ್ಪೋರ್ಟ್ ನಲ್ಲಿ ಯಾವುದೇ ಸ್ಫೋಟ ಆಗಿಲ್ಲ. ಅಬುಧಾಬಿ ಸರಕಾರಿ ಅಧೀನದ ಆಯಿಲ್ ಸ್ಟೋರೇಜ್ ಯಾರ್ಡ್ ಬಳಿ ಸ್ಫೋಟ ನಡೆದಿದೆ. ಮುಸ್ಸಫಾ ಎಂಬ ಜಾಗದಲ್ಲಿ ಘಟನೆ ನಡೆದಿದ್ದು ಆರು ಮಂದಿ ಗಾಯಗೊಂಡಿದ್ದಾರೆ ತಿಳಿಸಿದ್ದಾರೆ.
Yemen's Houthi rebel group claimed responsibility for a "qualitative military operation" that struck areas deep inside the United Arab Emirates (UAE) in which three people were feared killed including two Indians. Six others were reportedly injured. Another person who died in the attack may be a Pakistani.
13-09-25 08:46 pm
Bangalore Correspondent
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm