ಬ್ರೇಕಿಂಗ್ ನ್ಯೂಸ್
08-01-22 07:03 pm HK Desk news ದೇಶ - ವಿದೇಶ
ನವದೆಹಲಿ, ಜ.8 : ಬಹು ನಿರೀಕ್ಷಿತ ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳಲ್ಲಿ ಏಳು ಹಂತದ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ಫೆಬ್ರವರಿ 7ರಿಂದ ತೊಡಗಿ ಮಾರ್ಚ್ 7ರ ವರೆಗೆ ಚುನಾವಣೆ ನಡೆಯಲಿದ್ದು, ಐದು ರಾಜ್ಯಗಳ ಫಲಿತಾಂಶ ಮಾರ್ಚ್ 10ರಂದು ಒಂದೇ ದಿನ ಪ್ರಕಟವಾಗಲಿದೆ.
ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಫೆ.7ರಿಂದ ಮಾರ್ಚ್ 7ರ ನಡುವೆ ಏಳು ಹಂತಗಳಲ್ಲಿ ಚುನಾವಣೆ ನಡೆದರೆ, ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆ.14ರಂದು ಒಂದೇ ದಿನ ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆ.27 ಮತ್ತು ಮಾರ್ಚ್ 3ರಂದು ಚುನಾವಣೆ ನಡೆಯಲಿದೆ. ಮತ ಎಣಿಕೆಯನ್ನು ಮಾರ್ಚ್ 10ರಂದು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಇದೇ ವೇಳೆ, ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಜನವರಿ 15ರ ವರೆಗೆ ಯಾವುದೇ ರೀತಿಯ ರಾಜಕೀಯ ರ್ಯಾಲಿ, ಸಭೆ, ರೋಡ್ ಶೋ ನಡೆಸುವುದನ್ನು ಆಯೋಗ ನಿಷೇಧಿಸಿದೆ. ಆನಂತರ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ತಿಳಿಸಿದ್ದಾರೆ. ಈ ಐದು ರಾಜ್ಯಗಳಲ್ಲಿ 2017ರಲ್ಲಿ ಇದೇ ತಿಂಗಳಲ್ಲಿ ಚುನಾವಣೆ ನಡೆದಿತ್ತು.
ಚುನಾವಣೆಗಳಲ್ಲಿ ಪಾಲ್ಗೊಳ್ಳುವ ಸಿಬಂದಿ ಎರಡು ಡೋಸ್ ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಡೋಸ್ ಪಡೆದಿರಬೇಕು. ಅಲ್ಲದೆ, ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ತಜ್ಞರ ಪ್ರಕಾರ, ಫೆಬ್ರವರಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರಲಿದ್ದಾರೆ ಎನ್ನಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ 403 ಅಸೆಂಬ್ಲಿ ಕ್ಷೇತ್ರಗಳು, ಪಂಜಾಬ್ ನಲ್ಲಿ 117, ಉತ್ತರಾಖಂಡದಲ್ಲಿ 70, ಮಣಿಪುರದಲ್ಲಿ 60, ಗೋವಾದಲ್ಲಿ 40 ವಿಧಾನಸಭೆ ಕ್ಷೇತ್ರಗಳಲ್ಲಿ ಶಾಸಕರ ಆಯ್ಕೆ ನಡೆಯಲಿದೆ. ಐದು ರಾಜ್ಯಗಳಲ್ಲಿ ಅಂದಾಜು 18.34 ಕೋಟಿ ಮತದಾರರಿದ್ದು, ಅಲ್ಲಿನ ಆಡಳಿತದ ಭವಿಷ್ಯ ನಿರ್ಧರಿಸಲಿದ್ದಾರೆ. ಕಳೆದ ಬಾರಿ ಪಶ್ಚಿಮ ಬಂಗಾಳ ಚುನಾವಣೆ ಬಳಿ ಕೋವಿಡ್ ಸ್ಥಿತಿ ಬಿಗಡಾಯಿಸಿದ್ದರಿಂದ ಈ ಬಾರಿ ಆಯೋಗ ಮುನ್ನೆಚ್ಚರಿಕೆ ವಹಿಸಿದೆ. ಚುನಾವಣಾ ರ್ಯಾಲಿಯನ್ನು ಪೂರ್ತಿಯಾಗಿ ನಿಷೇಧಿಸುವ ಸಾಧ್ಯತೆ ಹೆಚ್ಚಿದೆ.
The Election Commission of India (ECI) Saturday announced the schedule for the assembly elections in Goa, Punjab, Manipur, Uttarakhand and Uttar Pradesh. While UP will go to polls in seven phases from February 10 to March 7, Punjab, Uttarakhand and Goa will vote in a single phase on February 14. Manipur, on the other hand, will vote in two phases on Feb 27 and March 3. The counting of votes will be held on March 10, the poll body added.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am