ಬ್ರೇಕಿಂಗ್ ನ್ಯೂಸ್
04-01-22 07:35 pm HK Desk news ದೇಶ - ವಿದೇಶ
ನವದೆಹಲಿ, ಜ.4 : ಒಂದೆಡೆ 15ರಿಂದ 18ರ ನಡುವಿನ ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವುದನ್ನು ದೇಶಾದ್ಯಂತ ಆರಂಭಿಸಲಾಗಿದೆ. ಇದೇ ವೇಳೆ, ಲಸಿಕೆಯ ಬಳಕೆಯ ಅವಧಿಯನ್ನು ಏಕಾಏಕಿ 9ರಿಂದ 12 ತಿಂಗಳಿಗೆ ಹೆಚ್ಚಿಸಲಾಗಿದೆ. ಹೀಗಾಗಿ ಭಾರತ್ ಬಯೋಟೆಕ್ ಕಂಪನಿ ತನ್ನಲ್ಲಿ ಉತ್ಪಾದಿಸಿ ಬಳಕೆಯಾಗದೇ ಅವಧಿ ಮೀರಿದ್ದ ಕೋವ್ಯಾಕ್ಸಿನ್ ಲಸಿಕೆಗಳನ್ನು ಹಿಂಪಡೆದು ಬಳಕೆ ಅವಧಿ (Expiry) ದಿನಾಂಕವನ್ನು ಮರು ಮುದ್ರಿಸಿ ಲೇಬಲ್ ಮಾಡುತ್ತಿದೆ ಎಂಬುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಭಾರತೀಯ ಔಷಧಿ ನಿಯಂತ್ರಕ ಸಂಸ್ಥೆಯು ಕೋವಿಡ್ ಲಸಿಕೆಯ ಅವಧಿಯನ್ನು 9ರಿಂದ 12 ತಿಂಗಳಿಗೆ ಹೆಚ್ಚಿಸಿದ ಬೆನ್ನಲ್ಲೇ ಕಂಪನಿಗಳು ತಮ್ಮಲ್ಲಿ ಉಳಿದಿರುವ ಲಸಿಕೆಯ ಬಾಟಲಿಗಳ ಲೇಬಲ್ ಬದಲಿಸಿ, ಮತ್ತೆ ಮಾರುಕಟ್ಟೆಗೆ ಬಿಡಲು ಚಿಂತನೆ ನಡೆಸಿವೆ. ಲಸಿಕೆಯ ಸಾಮರ್ಥ್ಯ ಪರಿಶೀಲನೆಯ ಬಳಿಕ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅಧಿಕಾರಿಗಳು, ಲಸಿಕೆಯನ್ನು 12 ತಿಂಗಳ ವರೆಗೂ ಬಳಸಲು ಯೋಗ್ಯವಾಗಿದೆ ಎಂದು ವರದಿ ನೀಡಿದ್ದರು.
ಈ ಹಿಂದೆ ಕೋವಿಡ್ ಲಸಿಕೆಯನ್ನು ಕೇವಲ ಆರು ತಿಂಗಳಿಗೆ ಮಾತ್ರ ಬಳಸಲು ಅವಕಾಶ ನೀಡಲಾಗಿತ್ತು. ಯಾವುದೇ ಔಷಧಿ ಅಥವಾ ಲಸಿಕೆಗಳು ತನ್ನ ಬಳಕೆಯ ಅವಧಿಯ ಬಗ್ಗೆ ಮೊದಲೇ ಘೋಷಣೆ ಮಾಡಿರುತ್ತವೆ. ಅದಕ್ಕಾಗಿ ಎಕ್ಸ್ ಪೈರಿ ದಿನಾಂಕವನ್ನು ಔಷಧಿ ಬಾಟಲಿಯ ಹೊರಮೈಯಲ್ಲಿ ಹಾಕಲಾಗಿರುತ್ತದೆ. ವಿವಿಧ ರೀತಿಯ ಪರಿಸರ ಮತ್ತು ಉಷ್ಣತೆಯ ನಡುವೆ ಎಷ್ಟು ಸಮಯ ಕಾಲ ಲಸಿಕೆ ಬಾಳಿಕೆ ಬರಬಹುದು ಎನ್ನುವುದನ್ನು ಪರಿಶೀಲಿಸಿ ಮೊದಲೇ ಈ ದಿನಾಂಕ ನಿಗದಿ ಪಡಿಸಲಾಗಿರುತ್ತದೆ.
ಈ ನಡುವೆ, ಕಳೆದ ನವೆಂಬರ್ ತಿಂಗಳಲ್ಲಿ ಭಾರತ್ ಬಯೋಟೆಕ್ ಉತ್ಪಾದಿತ ಕೋವ್ಯಾಕ್ಸಿನ್ ಬಳಕೆಯನ್ನು 12 ತಿಂಗಳಿಗೆ ಹೆಚ್ಚಿಸುವ ಬಗ್ಗೆ ಸರಕಾರದಿಂದಲೇ ಗ್ರೀನ್ ಸಿಗ್ನಲ್ ಪಡೆದಿತ್ತು. ಇದರ ಬೆನ್ನಲ್ಲೇ ದೇಶದ ವಿವಿಧ ಕಡೆ ಬಳಕೆಯಾಗದೇ ಬಾಕಿ ಉಳಿದಿದ್ದ ಕೋವ್ಯಾಕ್ಸಿನ್ ಲಸಿಕೆಯನ್ನು ಹಿಂಪಡೆದು ಅದರ ಲೇಬಲನ್ನು ತೆಗೆದು, ಹೊಸತಾಗಿ ಎಕ್ಸ್ ಪೈರಿ ದಿನಾಂಕ ಮುದ್ರಿಸಲು ಕಂಪನಿ ತೊಡಗಿದೆ. ಹೀಗೆ ಉಳಿದಿದ್ದ ಲಸಿಕೆಯ ಸಂಗ್ರಹವನ್ನು 15ರಿಂದ 18ರ ಒಳಗಿನ ಮಕ್ಕಳಿಗೆ ನೀಡಲು ಸರಕಾರ ಮುಂದಾಗಿದೆ. ಈಗಾಗ್ಲೇ ಮಕ್ಕಳ ಲಸಿಕಾ ಅಭಿಯಾನಕ್ಕೆ 6 ಲಕ್ಷಕ್ಕೂ ಹೆಚ್ಚು ಮಂದಿ ಕೋವಿನ್ ಏಪ್ ನಲ್ಲಿ ನೋಂದಣಿ ಮಾಡಿಕೊಂಡಿದ್ದು, ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲು ಶಿಫಾರಸು ಮಾಡಲಾಗಿದೆ.
Bharat Biotech is picking up unused stocks of Covaxin and updating the expiry date on the labels after the vaccine's shelf life was extended.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am