ಬ್ರೇಕಿಂಗ್ ನ್ಯೂಸ್
09-12-21 01:04 pm HK Desk news ದೇಶ - ವಿದೇಶ
ನವದೆಹಲಿ, ಡಿ.9 : ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ದುರಂತ ಸಾವಿನ ಬಗ್ಗೆ ಇಡೀ ದೇಶ ಕಂಬನಿ ಮಿಡಿಯುತ್ತಿದ್ದಂತೆಯೇ ಕಳೆದ ಐದಾರು ವರ್ಷಗಳಲ್ಲಿ ಭಾರತೀಯ ಸೇನೆಗೆ ಆಧುನಿಕ ಸ್ಪರ್ಶ ನೀಡುವಲ್ಲಿ ಶ್ರಮಿಸಿದ ಅವರ ಸೇವೆಯನ್ನೂ ಸ್ಮರಿಸಲಾಗುತ್ತಿದೆ. ಕಾಶ್ಮೀರ ಕಣಿವೆ ಮತ್ತು ಮ್ಯಾನ್ಮಾರ್ ಗಡಿಗಳಲ್ಲಿ ಉಗ್ರರ ಉಪಟಳವನ್ನು ಹತ್ತಿಕ್ಕಿದ್ದ ಮುಂಚೂಣಿ ಅಧಿಕಾರಿಗಳಲ್ಲಿ ಬಿಪಿನ್ ರಾವತ್ ಒಬ್ಬರಾಗಿದ್ದರು. ಚೀನಾದ ಗಡಿ ಸಂಘರ್ಷದ ವಿಚಾರದಲ್ಲಿಯೂ ತಕ್ಕ ಮದ್ದರೆಯಲು ಬಿಪಿನ್ ರಾವತ್ ಶ್ರಮಿಸಿದ್ದರು.
ಇಂಥ ಅಧಿಕಾರಿ ಈಗ ಯಾರೂ ಊಹಿಸದ ರೀತಿ ನಿರ್ಗಮಿಸಿದ್ದಾರೆ. ತುಂಬ ಬಲಿಶಾಲಿಯಾಗಿದ್ದ ಅಧಿಕಾರಿ ಕಾಪ್ಟರ್ ದುರಂತದಲ್ಲಿ ಸಾವು ಕಂಡಿದ್ದು ಸೇನಾ ಯೋಧರನ್ನೇ ಅರಗಿಸಿಕೊಳ್ಳದ ಸ್ಥಿತಿಯಾಗಿದೆ. ಆದರೆ, ಚೀಫ್ ಡಿಫೆನ್ಸ್ ಸ್ಟಾಫ್ ಎನ್ನುವ ಹೊಸ ಹುದ್ದೆಯನ್ನು 2019ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಅದರಂತೆ, 2020ರ ಜನವರಿ ಮೊದಲ ದಿನವೇ ಹೊಸ ಹುದ್ದೆಗೆ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿತ್ತು. ಅದಕ್ಕೂ ಹಿಂದೆ ರಾವತ್ ಇಂಡಿಯನ್ ಆರ್ಮಿ ಚೀಫ್ ಆಗಿದ್ದರೂ, ಸರಕಾರಕ್ಕೆ ಮಿಲಿಟರಿ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಬಲ್ಲ ಪ್ರತ್ಯೇಕ ಸಮರ್ಥ ಅಧಿಕಾರಿ ಇರಲಿಲ್ಲ. ಅದದಕ್ಕಾಗಿ ಹೊಸದಾಗಿ ಹುದ್ದೆಯನ್ನು ಸೃಜಿಸಿ, ಹೊಸ ಹುದ್ದೆಗೆ ಬಿಪಿನ್ ರಾವತ್ ಅವರನ್ನೇ ನೇಮಕ ಮಾಡಲಾಗಿತ್ತು.
ಇದೀಗ ಬಿಪಿನ್ ರಾವತ್ ಹುದ್ದೆಯನ್ನು ತುಂಬಬಲ್ಲ ಹೊಸ ಅಧಿಕಾರಿ ಯಾರು ಎನ್ನುವ ಬಗ್ಗೆ ಚರ್ಚೆ ಆರಂಭಗೊಂಡಿದೆ. ಮಾಹಿತಿ ಪ್ರಕಾರ, ಏಳೆಂಟು ದಿನಗಳಲ್ಲಿ ಹೊಸ ಅಧಿಕಾರಿಯ ನೇಮಕ ಆಗಲಿದೆ. ಸದ್ಯಕ್ಕೆ ಆರ್ಮಿ ಚೀಫ್ ಆಗಿರುವ ಎಂ.ಎಂ.ನರವಾಣೆ ಮತ್ತು ವಾಯುಪಡೆ ಮುಖ್ಯಸ್ಥರಾಗಿ ಕಳೆದ ವರ್ಷ ನಿವೃತ್ತಿಯಾಗಿರುವ ಆರ್.ಕೆ.ಎಸ್ ಭದೌರಿಯಾ ಹೊಸ ಚೀಫ್ ಡಿಫೆನ್ಸ್ ಸ್ಟಾಫ್ ಆಗಲು ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ. ನಿಯಮದಂತೆ, ಈ ಹುದ್ದೆಯನ್ನು ನಿರ್ವಹಿಸಲು ಯಾವುದೇ ಕಮಾಂಡಿಂಗ್ ಅಧಿಕಾರಿ ಅಥವಾ 54 ಸಶಸ್ತ್ರ ಪಡೆಗಳ ಮುಂಚೂಣಿ ಅಧಿಕಾರಿಗೆ (ಫ್ಲಾಗ್ ಆಫೀಸರ್) ಅರ್ಹತೆ ಇರುತ್ತದೆ. ಇವರ ಗರಿಷ್ಠ ವಯಸ್ಸು 65 ವರ್ಷ ಮೀರುವಂತಿಲ್ಲ.
ಕಳೆದ ಬಾರಿ ಜನರಲ್ ಬಿಪಿನ್ ರಾವತ್ ದಂಡನಾಯಕರಾಗಿ ನಿವೃತ್ತಿಯಾಗಲು ಒಂದು ದಿವಸ ಇರುವಾಗಲೇ ಹೊಸ ಹುದ್ದೆಗೆ ನೇಮಕಗೊಂಡಿದ್ದರು. ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯಿಂದ ಈ ಹುದ್ದೆ ಹೆಚ್ಚಿನದಾಗಿದ್ದು, ಆರ್ಮಿ ಚೀಫ್ ಹುದ್ದೆಗ ಸಮಾನವಾಗಿ ಮಿಲಿಟರಿಯ ಎಲ್ಲ ವಿಭಾಗಗಳ ಬೇಕು- ಬೇಡಗಳ ಬಗ್ಗೆ ಸರಕಾರಕ್ಕೆ ಸಲಹೆ ನೀಡಬಲ್ಲ ಜವಾಬ್ದಾರಿ ಹೊಂದಿರುತ್ತಾರೆ. ಗಡಿ ವಿವಾದ, ಸಂಘರ್ಷ ಸ್ಥಿತಿಯ ನಿಭಾವಣೆ ಬಗ್ಗೆ ಸರಕಾರಕ್ಕೆ ಸಲಹೆಗಳನ್ನು ನೀಡುತ್ತಾರೆ.
2019ರ ಡಿಸೆಂಬರ್ 31ರಂದು 27ನೇ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ಜನರಲ್ ಮನೋಜ್ ಮುಕುಂದ್ ನರವಾಣೆ, ಆರ್ಮಿ ಮತ್ತು ವಾಯುಪಡೆಯಲ್ಲಿ ಕರ್ತವ್ಯದಲ್ಲಿರುವ ಇತರೇ ಅಧಿಕಾರಿಗಳಿಗಿಂತ ಅತ್ಯಂತ ಹಿರಿಯ ಅಧಿಕಾರಿ. ಈ ಹಿಂದೆ ಸೇನೆಯ ಉಪ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದ್ದ ನರವಾಣೆ, ಅದಕ್ಕೂ ಹಿಂದೆ ನಾಲ್ಕು ಸಾವಿರ ಕಿಮೀ ಉದ್ದದ ಚೀನಾ ಗಡಿಯನ್ನು ಹೊಂದಿಕೊಂಡಿರುವ ಈಸ್ಟರ್ನ್ ಕಮಾಂಡಿಂಗ್ ವಿಭಾಗದ ಚೀಫ್ ಆಗಿ ಹುದ್ದೆ ನಿಭಾಯಿಸಿದ್ದರು.
1980ರಲ್ಲಿ ವಾಯುಪಡೆ ಸೇರಿದ್ದ ಆರ್.ಕೆ.ಎಸ್ ಭದೌರಿಯಾ, ಸುದೀರ್ಘ 42 ವರ್ಷಗಳ ಸೇವೆಯ ಬಳಿಕ ಕಳೆದ ಡಿಸೆಂಬರ್ ನಲ್ಲಿ ನಿವೃತ್ತಿಯಾಗಿದ್ದರು. ಕಳೆದ ಬಾರಿ ವಾಯುಪಡೆಗೆ ಅತ್ಯಾಧುನಿಕ 36 ರಫೇಲ್ ಫೈಟರ್ ಜೆಟ್ ಮತ್ತು ತೇಜಸ್ ಫೈಟರ್ ಜೆಟ್ ಖರೀದಿಸುವ ಬಗ್ಗೆ ರೂಪುರೇಷೆ ತಯಾರಿಸಿದ್ದವರಲ್ಲಿ ಭದೌರಿಯಾ ಒಬ್ಬರು. 26 ವಿವಿಧ ಮಾದರಿಯ ಫೈಟರ್ ಜೆಟ್ ಗಳನ್ನು ಹಾರಿಸಿದ ಮತ್ತು 4250 ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿದ ಅನುಭವ ಹೊಂದಿದ್ದಾರೆ. ಭದೌರಿಯಾ ವಾಯುಪಡೆ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಚೀನಾ ಗಡಿಭಾಗ ಲಡಾಖ್ ಪ್ರಾಂತ್ಯದಲ್ಲಿ ಸುದೀರ್ಘ ಕಾಲ ಸಂಘರ್ಷದ ವಾತಾವರಣ ನೆಲೆಸಿತ್ತು. ಮುಂಚೂಣಿ ಫೈಟರ್ ಜೆಟ್ ಗಳನ್ನು ಗಡಿಯಲ್ಲಿ ಸನ್ನದ್ಧ ಇರಿಸಿ, ಚೀನಾ ಪಡೆ ಗಡಿಯಿಂದ ಹಿಮ್ಮೆಟ್ಟುವಂತೆ ಮಾಡಿದ್ದರು.
ಇವರಿಬ್ಬರಲ್ಲದೆ, ಸೇನೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಯಾವುದೇ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಅಧಿಕಾರಿಯನ್ನು ಸಿಡಿಎಸ್ ಹುದ್ದೆಗೆ ನಿಯೋಜಿಸಲು ಕೇಂದ್ರ ಸರಕಾರ ಅಧಿಕಾರ ಹೊಂದಿರುತ್ತದೆ.
As the nation mourns the sudden demise of Chief of Defence Staff (CDS) General Bipin Rawat in a military helicopter crash, the question of who will fill Rawat’s big boots is on everyone’s minds. Top sources had told News18 that the post will be filled in the next seven to ten days and the frontrunners for the same are Chief of Army Staff (COAS) General Manoj Mukund Naravane and former IAF chief Air Chief Marshal RKS Bhadauria (Retd).
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm