ಬ್ರೇಕಿಂಗ್ ನ್ಯೂಸ್
07-12-21 01:46 pm HK Desk news ದೇಶ - ವಿದೇಶ
ನ್ಯೂಯಾರ್ಕ್, ಡಿ.7 : ಕೊರೊನಾ ಸಂಕಷ್ಟ ಕಾಲದಲ್ಲಿ ಮ್ಯಾನೇಜ್ಮೆಂಟ್ ಸಂಸ್ಥೆಗಳ ಪಾಲಿಗೆ ಆಸರೆಯಾಗಿದ್ದ ಜೂಮ್ ಮೀಟ್ ಅಮೆರಿಕ ಮತ್ತು ಭಾರತದಲ್ಲಿ ನೂರಾರು ಉದ್ಯೋಗಿಗಳ ತುತ್ತಿಗೇ ಸಂಕಷ್ಟ ತಂದಿಟ್ಟ ಪ್ರಕರಣ ನಡೆದಿದೆ. ಕೇವಲ 3 ನಿಮಿಷದ ಜೂಮ್ ಮೀಟಿಂಗ್‌ನಲ್ಲಿ 900 ಮಂದಿಯನ್ನು ಕೆಲಸ ತೊರೆಯುವಂತೆ ಮಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ.
ನ್ಯೂಯಾರ್ಕ್ ಮೂಲದ ಅಡಮಾನ ಸಾಲ ನೀಡುವ ಬೆಟರ್ ಡಾಟ್ ಕಾಂ ಎಂಬ ಸಂಸ್ಥೆಯ ಸಿಇಓ ಆಗಿರುವ ಭಾರತೀಯ ಮೂಲದ ವಿಶಾಲ್ ಗರ್ಗ್ ಜೂಮ್ ಮೀಟಿಂಗ್ ಕರೆದು 900 ಮಂದಿಯನ್ನು ಕೆಲ ನಿಮಿಷದಲ್ಲೇ ಕೆಲಸ ತೊರೆಯಿರಿ ಎಂದಿದ್ದು ಅಚ್ಚರಿ ಸೃಷ್ಟಿಸಿದೆ.
ಅಮೆರಿಕದಲ್ಲಿ ಈಗ ಚಳಿಗಾಲದ ರಜಾದಿನಗಳು ಆರಂಭವಾಗಿದ್ದು, ಸುದೀರ್ಘ ರಜೆಗಾಗಿ ನೌಕರರು ಎದುರು ನೋಡುತ್ತಿದ್ದರು. ಇದಕ್ಕೂ ಮುನ್ನ ಕಂಪನಿಯಿಂದ ಏನಾದರೂ ಸೌಲಭ್ಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮೀಟಿಂಗ್ ನಲ್ಲಿ ಭಾಗವಹಿಸಿದ್ದ ಸಿಬ್ಬಂದಿಗಳಿಗೆ ಸಿಇಓ ವಾರ್ನಿಂಗ್ ಶಾಕ್ ಮೂಡಿಸಿದೆ. ಬೆಟರ್ ಡಾಟ್ ಕಾಂ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ. 9ರಷ್ಟು ಕಡಿತ ಮಾಡಿದ್ದು ಎಲ್ಲರನ್ನು ಜೂಮ್ ಮೀಟಿಂಗ್ ನಲ್ಲೇ ವಜಾಗೊಳಿಸಲಾಗಿದೆ.
ಮೀಟಿಂಗ್ ವೇಳೆ ತನ್ನ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಗರ್ಗ್ , ನಾನು ನಿಮ್ಮ ಬಳಿಗೆ ಉತ್ತಮ ಸುದ್ದಿಯೊಂದಿಗೆ ಬಂದಿಲ್ಲ. ಮಾರುಕಟ್ಟೆ ಬದಲಾಗಿದೆ ಮತ್ತು ಬದುಕಲು ನಾವು ಅದರೊಂದಿಗೆ ಚಲಿಸಬೇಕಾಗುತ್ತದೆ, ಆಶಾದಾಯಕವಾಗಿ, ನಾವು ನಮ್ಮ ಗುರಿಯನ್ನು ಸಾಧಿಸಲು ಮುಂದುವರಿಯಬೇಕು. ಇದು ನೀವು ಕೇಳಲು ಬಯಸುವ ಸುದ್ದಿ ಅಲ್ಲ. ಆದರೆ ಅಂತಿಮವಾಗಿ, ಇದು ನನ್ನ ನಿರ್ಧಾರವಾಗಿತ್ತು ಮತ್ತು ನೀವು ಅದನ್ನು ನನ್ನಿಂದ ಕೇಳಬೇಕೆಂದು ನಾನು ಬಯಸುತ್ತೇನೆ. ಇದು ನಿಜವಾಗಿಯೂ, ನಿಜವಾಗಿಯೂ ಸವಾಲಿನ ನಿರ್ಧಾರವಾಗಿದೆ. ನನ್ನ ವೃತ್ತಿಜೀವನದಲ್ಲಿ ಇದು ಎರಡನೇ ಬಾರಿಗೆ ಈ ರೀತಿ ಮಾಡುತ್ತಿದ್ದೇನೆ. ಮಾರುಕಟ್ಟೆ, ದಕ್ಷತೆ ಮತ್ತು ಕಾರ್ಯಕ್ಷಮತೆ ಮತ್ತು ಉತ್ಪಾದಕತೆಗಾಗಿ ಇಲ್ಲಿ ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗಿದೆ ಎಂದಿದ್ದಾರೆ.
ಜೂಮ್ ಕರೆ ಸಭೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ವಜಾಗೊಂಡ ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ.
ನ್ಯೂಯಾರ್ಕ್ ವಿವಿಯಲ್ಲಿ ಬಿಸಿನೆಸ್ ಸ್ಟಡಿ ಅಧ್ಯಯನ ಮಾಡಿರುವ ಗರ್ಗ್, 2016ರಲ್ಲಿ ಸಂಸ್ಥೆ ಸ್ಥಾಪಿಸಿದರು. ಗೋಲ್ಡ್ ಮನ್ ಸಾಚ್ಸ್, ಕ್ಲಿನರ್ ಪರ್ಕಿನ್ಸ್ ಆರ್ಥಿಕ ಬೆಂಬಲ ಪಡೆದುಕೊಂಡಿತ್ತು. 2020ರಲ್ಲಿ ತಮ್ಮ ಸಂಸ್ಥೆ ಶೇ 400ರಷ್ಟು ಪ್ರಗತಿ ಕಂಡಿದ್ದು, 2021ರಲ್ಲಿ 3 ಪಟ್ಟು ಅಧಿಕ ಲಾಭ ಗಳಿಸಲಿದೆ ಎಂದು ಗರ್ಗ್ ಹೇಳಿದ್ದರು.
An Indian-American CEO has caused shock waves and outrage in the American workplace by summarily firing 900 employees in a Zoom call citing difficult.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm