ಬ್ರೇಕಿಂಗ್ ನ್ಯೂಸ್
25-11-21 12:45 pm HK news Desk ದೇಶ - ವಿದೇಶ
ನವದೆಹಲಿ, ನ.25: ಇಂಡಿಯನ್ ಮುಜಾಹಿದೀನ್ ಉಗ್ರವಾದಿ ಸಂಘಟನೆಯ ಕಾರ್ಯಕರ್ತರ ಬ್ಯಾಂಕ್ ಖಾತೆಗಳಿಗೆ ಹಣದ ಪೂರೈಕೆ ಮಾಡುತ್ತಿದ್ದ ಮಂಗಳೂರಿನ ದಂಪತಿ ಸೇರಿದಂತೆ ನಾಲ್ವರಿಗೆ ಛತ್ತೀಸ್ ಗಢ ಕೋರ್ಟ್ ಹತ್ತು ವರ್ಷಗಳ ಶಿಕ್ಷೆ ಘೋಷಿಸಿದೆ.
ಧೀರಜ್ ಸಾವೋ(21), ಪಪ್ಪು ಮಂಡಲ್, ಜುಬೈರ್ ಹುಸೇನ್(42) ಮತ್ತು ಆತನ ಪತ್ನಿ ಆಯೆಷಾ ಬಾನೋ(38) ಶಿಕ್ಷೆಗೊಳಗಾದವರು. 2013ರ ಡಿಸೆಂಬರ್ ನಲ್ಲಿ ಇವರನ್ನು ಬಿಹಾರದ ಎಟಿಎಸ್ ಪೊಲೀಸರು ಬಂಧಿಸಿದ್ದರು. ಜುಬೇರ್ ಹುಸೇನ್ ಮತ್ತು ಆಯೆಷಾ ಬಾನೋ ಮಂಗಳೂರಿನ ಪಂಜಿಮೊಗರಿನ ನಿವಾಸಿಗಳಾಗಿದ್ದು, ತಮಗೆ ಬರುತ್ತಿದ್ದ ಹವಾಲಾ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಧೀರಜ್ ಸಾವೋ ಬಿಹಾರದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರಿಯಾಗಿದ್ದು, ಹವಾಲಾ ಹಣದ ವಹಿವಾಟಿನಲ್ಲಿ ಮೊದಲಿಗೆ ಸಿಕ್ಕಿಬಿದ್ದಿದ್ದ. ಆನಂತರ ಆತನ ಮಾಹಿತಿ ಮೇರೆಗೆ ಬಿಹಾರ ಪೊಲೀಸರು ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಧೀರಜ್ ಸಾವೋ ಬ್ಯಾಂಕ್ ಖಾತೆಗೆ ವಿವಿಧ ಕಡೆಗಳಿಂದ ಕ್ಯಾಶ್ ಡಿಪಾಸಿಟ್ ಆಗುತ್ತಿದ್ದುದನ್ನು ಇಡಿ ಅಧಿಕಾರಿಗಳು ಮೊದಲು ಪತ್ತೆ ಮಾಡಿದ್ದರು. ಕೋಟ್ಯಂತರ ರೂಪಾಯಿ ವಹಿವಾಟು ಆಗುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪೊಲೀಸರ ನೆರವಿನಿಂದ ತನಿಖೆ ಆರಂಭಿಸಿದ್ದರು. ತನಿಖೆಯಲ್ಲಿ ಧೀರಜ್ ಸಾವೋ ತನಗೆ ಬರುತ್ತಿದ್ದ ಕ್ಯಾಶ್ ಡಿಪಾಸಿಟನ್ನು ಸಿಮಿ ಸಂಘಟನೆಯ ಕೆಲವರ ಸೂಚನೆಯಂತೆ ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ರವಾನಿಸುತ್ತಿದ್ದ ಎಂದು ಮಾಹಿತಿ ನೀಡಿದ್ದ. ಅದಕ್ಕಾಗಿ ಕಮಿಷನ್ ಕೂಡ ಪಡೆಯುತ್ತಿದ್ದ. ಜುಬೈರ್ ಹುಸೇನ್, ಆಯೇಷಾ ಬಾನೋ, ರಾಜು ಖಾನ್ ಸೇರಿದಂತೆ ಹಲವರ ಖಾತೆಗಳಿಗೆ ಸಾವೋ ಹಣ ವರ್ಗಾವಣೆ ಮಾಡುತ್ತಿದ್ದ.
ಹೀಗೆ ಬರುತ್ತಿದ್ದ ಹಣವನ್ನು ಜುಬೇರ್ ಹುಸೇನ್, ಆಯೆಷಾ ಬಾನೋ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಕಾರ್ಯಕರ್ತರಿಗೆ ಪೂರೈಕೆ ಮಾಡುತ್ತಿದ್ದರು. ಕೇವಲ ಎಂಟು ತಿಂಗಳ ಅವಧಿಯಲ್ಲಿ ಮೂರು ಕೋಟಿ ರೂಪಾಯಿ ಮೊತ್ತ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಪೂರೈಕೆ ಆಗಿದ್ದು ಕಂಡುಬಂದಿತ್ತು. ಧೀರಜ್ ಸಾವೋ ಬಿಹಾರ ಮತ್ತು ಛತ್ತೀಸ್ ಗಢದ ಐಸಿಐಸಿಐ ಬ್ಯಾಂಕ್ ಶಾಖೆಗಳ ಖಾತೆಯಿಂದ ಹಣ ರವಾನಿಸುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು. ಇದರಂತೆ, ಛತ್ತೀಸ್ ಗಢ ಪೊಲೀಸರು ಧೀರಜ್ ಸಾವೋನನ್ನು 2013ರ ಡಿ.25ರಂದು ಬಂಧಿಸಿದ್ದರು. ಬಿಹಾರ ಮೂಲದ ಧೀರಜ್ ಸಾವೋ, ಆ ಸಂದರ್ಭದಲ್ಲಿ ರಾಯ್ ಪುರದಲ್ಲಿ ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ.
ಇದೇ ಸಂದರ್ಭದಲ್ಲಿ ಹಣದ ವಹಿವಾಟಿನ ಬಗ್ಗೆ ಖಚಿತ ಮಾಹಿತಿ ಪಡೆದು ಬಿಹಾರ ಪೊಲೀಸರು ಮಂಗಳೂರಿಗೆ ತೆರಳಿದ್ದು, ಅಲ್ಲಿನ ಪಂಜಿಮೊಗರಿನಲ್ಲಿ ವಾಸವಿದ್ದ ಜುಬೇರ್ ಹುಸೇನ್ ಮತ್ತು ಆಯೆಷಾ ಬಾನೋ ದಂಪತಿಯನ್ನು ವಶಕ್ಕೆ ಪಡೆದಿದ್ದರು. ಪಾಕಿಸ್ಥಾನ ಮೂಲದ ಇಂಡಿಯನ್ ಮುಜಾಹಿದೀನ್ ಉಗ್ರ ಖಾಲಿದ್ ಎಂಬಾತನ ಸೂಚನೆಯಂತೆ ಇವರು ಕೆಲಸ ಮಾಡುತ್ತಿದ್ದರು. ಖಾಲಿದ್ ಭಾರತದ ವಿವಿಧೆಡೆಗಳಲ್ಲಿ ಬೇನಾಮಿ ಹೆಸರಲ್ಲಿ ಖಾತೆಗಳನ್ನು ಮಾಡಿಕೊಂಡಿದ್ದು, ಅದಕ್ಕೆ ಹಣ ಪೂರೈಕೆ ಆಗುತ್ತಿದ್ದುದನ್ನು ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದರು. ಭಾರತದ ವಿವಿಧ ಕಡೆಗಳಿಂದ ಖಾಲಿದ್ ಖಾತೆಗಳಿಗೆ ಕ್ಯಾಶ್ ಡಿಪಾಸಿಟ್ ಮಾಡಲಾಗುತ್ತಿತ್ತು. ಅದಕ್ಕಾಗಿ ನಿರ್ದಿಷ್ಟ ಮೊತ್ತದ ಕಮಿಷನ್ ಕೂಡ ಈತನೇ ನೀಡುತ್ತಿದ್ದ. ಅಲ್ಲದೆ, ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಲೇ ಅದನ್ನು ವಿವಿಧ ಕಡೆಗಳಲ್ಲಿ ಎಟಿಎಂ ಮೂಲಕ ಡ್ರಾ ಮಾಡುತ್ತಿದ್ದುದನ್ನೂ ಅಧಿಕಾರಿಗಳು ಪತ್ತೆ ಮಾಡಿದ್ದರು.
ಇದಕ್ಕೂ ಮುನ್ನ 2013ರ ನವೆಂಬರ್ ನಲ್ಲಿ ಬಿಹಾರ ಮತ್ತು ಛತ್ತೀಸ್ ಗಢದಲ್ಲಿ ಹತ್ತಕ್ಕೂ ಹೆಚ್ಚು ನಿಷೇಧಿತ ಸಿಮಿ ಸಂಘಟನೆಗೆ ಸೇರಿದ ಕಾರ್ಯಕರ್ತರನ್ನು ಎಟಿಎಸ್ ಪೊಲೀಸರು ವಶಕ್ಕೆ ಪಡೆದಿದ್ದರು. ಇವರಿಗೆ ಹಣದ ಪೂರೈಕೆ ಆಗುತ್ತಿದ್ದ ಬಗ್ಗೆ ಇಡಿ ಅಧಿಕಾರಿಗಳು ತಪಾಸಣೆಯಲ್ಲಿ ತೊಡಗಿದಾಗ, ದೇಶದ ವಿವಿಧ ಕಡೆಗಳಲ್ಲಿ ಹಣದ ಪೂರೈಕೆಯನ್ನು ನಿಗೂಢವಾಗಿ ನಡೆಸುತ್ತಿದ್ದುದು ಪತ್ತೆಯಾಗಿತ್ತು.
ಮಂಗಳೂರಿನ ದಂಪತಿ ತಮ್ಮ ಖಾತೆಯಿಂದ 5 ಕೋಟಿಗೂ ಹೆಚ್ಚು ಹಣವನ್ನು ಇಂಡಿಯನ್ ಮುಜಾಹಿದೀನ್ ಉಗ್ರರಿಗೆ ಪೂರೈಕೆ ಮಾಡಿದ್ದಾಗಿ ಪೊಲೀಸರು ಕೋರ್ಟಿನಲ್ಲಿ ಹೇಳಿಕೆ ನೀಡಿದ್ದರು. ಸಣ್ಣ ಮಗುವನ್ನು ಎತ್ತಿಕೊಂಡು ಬಂದಿದ್ದ ಆಯೆಷಾ ಬಾನುವನ್ನು ಬಿಹಾರ ಪೊಲೀಸರು ಮೊದಲು ಮಂಗಳೂರಿನ ಕೋರ್ಟಿಗೆ ಹಾಜರುಪಡಿಸಿ, ಆಬಳಿಕ ತಮ್ಮ ವಶಕ್ಕೆ ಪಡೆದಿದ್ದರು. ಇವರ ವಿರುದ್ಧ ದೇಶದ್ರೋಹ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿ ಕೇಸು ದಾಖಲಿಸಲಾಗಿತ್ತು. ಇದೀಗ ಛತ್ತೀಸ್ ಗಢದ ರಾಯಪುರ ಕೋರ್ಟ್ ಮಂಗಳೂರಿನ ದಂಪತಿ ಸೇರಿ ನಾಲ್ಕು ಮಂದಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ರಾಜು ಖಾನ್ ಒಬ್ಬನನ್ನು ಮಾತ್ರ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಿದೆ.
A court in Chhattisgarh's Raipur on Wednesday sentenced four persons, including a couple linked to banned groups SIMI and Indian Mujahideen, to 10 years of rigorous imprisonment (RI) for channeling funds for terror activities, observing their act intended to ''disrupt sovereignty and integrity'' of India.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm