ಬ್ರೇಕಿಂಗ್ ನ್ಯೂಸ್
30-10-21 02:21 pm Headline Karnataka News Network ದೇಶ - ವಿದೇಶ
ಮುಂಬೈ, ಅ.30: ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಾರುಖ್ ಖಾನ್ ಪುತ್ರ ಆರ್ಯನ್, ಮೂರು ವಾರಗಳ ಬಳಿಕ ಅಂತೂ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಇಂದು ಬೆಳಗ್ಗೆ 11 ಗಂಟೆಗೆ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗುತ್ತಲೇ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಆರ್ಯನ್ ಪರವಾಗಿ ಘೋಷಣೆ ಕೂಗುತ್ತಾ ಹೀರೋ ರೀತಿಯಲ್ಲಿ ಸ್ವಾಗತಿಸಿದ್ದಾರೆ.
ಆರ್ಯನ್ ಖಾನ್ ಬಾಂದ್ರಾದಲ್ಲಿರುವ ಮನೆಗೆ ಆಗಮಿಸುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಹರ್ಷಾಚರಣೆ ನಡೆಸಿದ್ದಾರೆ. ಸಾಗರ ತೀರದಲ್ಲಿರುವ ಮನೆಯ ಮುಂಭಾಗದಲ್ಲಿ ಜನರು ಸೇರಿದ್ದು, ಕುಣಿದು ಕುಪ್ಪಳಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಆದರೆ, ಜಾಮೀನು ನೀಡಿರುವ ಕೋರ್ಟ್ ಆರ್ಯನ್ ಖಾನ್ ಹರ್ಷಾಚರಣೆಗೆ ಬ್ರೇಕ್ ನೀಡಿದೆ. ಒಬ್ಬಂಟಿಯಾಗಿ ಹೊರಗಡೆ ಅಡ್ಡಾಡುವುದಕ್ಕೂ ಕೋರ್ಟ್ ಷರತ್ತುಗಳನ್ನು ವಿಧಿಸಿದೆ. ಜೈಲಿನಿಂದ ಬಿಡುಗಡೆ ಆಗೋದಕ್ಕೂ ಮುನ್ನ ಪಾಸ್ಪೋರ್ಟ್ ಅನ್ನು ಎನ್ ಡಿಪಿಎಸ್ ಸ್ಪೆಷಲ್ ಕೋರ್ಟಿಗೆ ಒಪ್ಪಿಸುವುದಕ್ಕೆ ಆದೇಶ ಮಾಡಲಾಗಿತ್ತು. ಅಲ್ಲದೆ, ಕೋರ್ಟ್ ಪರ್ಮಿಷನ್ ಇಲ್ಲದೆ ಭಾರತ ಬಿಟ್ಟು ಹೋಗುವಂತಿಲ್ಲ. ಮುಂಬೈ ಬಿಟ್ಟು ಹೊರಗೆ ತೆರಳುವುದಕ್ಕೂ ಎನ್ ಸಿಬಿ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಬೇಕು. ಇದನ್ನು ಉಲ್ಲಂಘಿಸಿದರೆ ಜಾಮೀನು ರದ್ದುಗೊಳಿಸಲು ಅವಕಾಶ ಇರುತ್ತದೆ.
ಇದಲ್ಲದೆ, ಆರೋಪಿ ಆರ್ಯನ್ ಖಾನ್ ಸೇರಿದಂತೆ ಯಾರು ಕೂಡ ಸಾಕ್ಷಿಗಳನ್ನು ಬೆದರಿಸುವುದಾಗಲೀ, ಅವರಿಗೆ ಆಮಿಷ ನೀಡುವುದಾಗಲೀ ಮಾಡುವಂತಿಲ್ಲ. ಎನ್ ಡಿಪಿಎಸ್ ಕಾಯ್ದೆಯಡಿ ಒಳಗೊಳ್ಳುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಇದರ ಜೊತೆಗೆ, ಪ್ರಕರಣದ ಇತರ ಆರೋಪಿಗಳ ಜೊತೆ ಮಾತನಾಡುವುದು ಅಥವಾ ಪ್ರಕರಣದ ಬಗ್ಗೆ ಚರ್ಚೆ ನಡೆಸುವುದು, ಇದೇ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮಾಡುವಂತಿಲ್ಲ. ಆರ್ಯನ್ ಖಾನ್ ಜೊತೆಗೆ, ಅರ್ಬಾಜ್ ಖಾನ್ ಮತ್ತು ಮುನ್ ಮುನ್ ಧಮೇಚಾ ಕೂಡ ಇದೇ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
Aryan Khan, the son of superstar Shah Rukh Khan, today left a Mumbai jail after nearly four weeks. The 23-year-old was granted bail on Thursday by the Bombay High Court in the drugs-on-cruise case but spent two additional nights in jail as his bail papers missed the 5:30 pm deadline on Friday after an anxious wait that went down to seconds.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm