ಬ್ರೇಕಿಂಗ್ ನ್ಯೂಸ್
29-10-21 04:55 pm Headline Karnataka News Network ದೇಶ - ವಿದೇಶ
ಪಣಜಿ, ಅ.29: ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಟಿಎಂಸಿ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಗೋವಾದಲ್ಲಿ ಚುನಾವಣೆಗೆ ಸಿದ್ಧವಾಗುತ್ತಿದ್ದು, ಲಿಯಾಂಡರ್ ಪೇಸ್, ನಟಿ ನಫೀಸಾ ಆಲಿ ಸೇರಿದಂತೆ ಹಲವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಲಿಯಾಂಡರ್ ಪೇಸ್ ಪಕ್ಷ ಸೇರ್ಪಡೆಯಾಗುತ್ತಿರುವುದನ್ನು ಹೇಳಲು ಸಂತಸ ಪಡುತ್ತೇನೆ. ಲಿಯಾಂಡರ್ ನನ್ನ ಕಿರಿಯ ಸೋದರನಾಗಿದ್ದು ನಾನು ಯೂತ್ ಮಿನಿಸ್ಟರ್ ಆಗಿದ್ದಾಗಿನಿಂದಲೂ ಆತನ ಪರಿಚಯದಲ್ಲಿದ್ದೇನೆ. ಆಗ ಆತ ಸಣ್ಣ ಯುವಕನಾಗಿದ್ದ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ಪ್ರಾಬಲ್ಯದ ಗೋವಾದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಕೇಸರಿ ಪಕ್ಷವನ್ನು ಎದುರಿಸಲು ಟಿಎಂಸಿ ಸಿದ್ಧತೆ ನಡೆಸಿದೆ. ಚುನಾವಣೆಗೆ ಪ್ರಚಾರ ಮತ್ತು ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಮೂರು ದಿನಗಳ ಪ್ರವಾಸಕ್ಕಾಗಿ ಮಮತಾ ಬ್ಯಾನರ್ಜಿ ಗುರುವಾರ ಗೋವಾಕ್ಕೆ ಆಗಮಿಸಿದ್ದಾರೆ. ಮಮತಾ ಗೋವಾಕ್ಕೆ ಬರುತ್ತಲೇ ಬಿಜೆಪಿ, ಹಿಂದು ವಿರೋಧಿ ಎಂದು ಟೀಕಿಸಿದೆ.
ಪ್ರತಿಯಾಗಿ ಟಿಎಂಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ, ಬಿಜೆಪಿಯವರು ತನ್ನ ಮೇಲೆ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ. ನಮ್ಮ ಪಾರ್ಟಿಯ ಟಿಎಂಸಿ ಹೆಸರಲ್ಲಿ ಟೆಂಪಲ್, ಮೋಸ್ಕ್ಯು, ಚರ್ಚ್ ಇದೆ ಎಂದು ಕೌಂಟರ್ ಕೊಟ್ಟಿದ್ದಾರೆ. ನಾವು ಗೋವಾದಲ್ಲಿ ಜನರನ್ನು ಮತದ ಆಧಾರದಲ್ಲಿ ವಿಭಜಿಸಲು ಬಯಸಲ್ಲ. ಸದೃಢ ಮತ್ತು ಸ್ವಾವಲಂಬಿ ಗೋವಾಕ್ಕಾಗಿ ನಾವು ಮತ ಕೇಳುತ್ತೇವೆ ಎಂದಿದ್ದಾರೆ.
2022ರ ಆರಂಭದಲ್ಲಿ ಗೋವಾದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಎಲ್ಲ 40 ಕ್ಷೇತ್ರಗಳಿಗೂ ಟಿಎಂಸಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದೆ. ಇದಕ್ಕಾಗಿ ಆಯಾ ಭಾಗದಲ್ಲಿ ಇತರ ಪಕ್ಷದ ನಾಯಕರನ್ನು ಮಮತಾ ಸೆಳೆಯುತ್ತಿದ್ದು, ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.
West Bengal chief minister and Trinamool Congress (TMC) supremo Mamata Banerjee will begin her three-day visit to Goa from Thursday, months ahead of the assembly elections in the state.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm