ಬ್ರೇಕಿಂಗ್ ನ್ಯೂಸ್
28-10-21 05:11 pm H K News Desk ದೇಶ - ವಿದೇಶ
ಮುಂಬೈ, ಅ.28: ಬಾಲಿವುಡ್ ಡ್ರಗ್ಸ್ ಕೇಸ್ ಬೆನ್ನು ಬಿದ್ದಿರುವ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಬಗ್ಗೆ ಆರೋಪ- ವಿವಾದಗಳು ಸುತ್ತಿಕೊಂಡ ಬೆನ್ನಲ್ಲೇ ಸಮೀರ್ ಮುಸ್ಲಿಂ ಆಗಿದ್ದರು ಎನ್ನುವ ಹೊಸ ವಿಚಾರ ಮುನ್ನೆಲೆಗೆ ಬಂದಿದೆ. ಸಮೀರ್ ವಾಂಖೇಡೆ ಮೊದಲ ಪತ್ನಿಯಾಗಿದ್ದ ಡಾ.ಶಬಾನಾ ಖುರೇಷಿಯವರ ತಂದೆ ಡಾ.ಝಾಯೇದ್ ಖುರೇಷಿ ಈ ಮಾಹಿತಿ ಬಿಚ್ಚಿಟ್ಟಿದ್ದು, ಸಮೀರ್ ಮೊದಲಿನಿಂದಲೂ ಇಸ್ಲಾಂ ಅನುಸರಿಸುತ್ತಿದ್ದರು. ಇಸ್ಲಾಂ ಪ್ರಕಾರ ಎಲ್ಲ ಸಂಪ್ರದಾಯ, ಆಚರಣೆಗಳನ್ನು ಪಾಲಿಸುತ್ತಿದ್ದರು ಎಂದು ಹೇಳಿದ್ದಾರೆ.
ನನ್ನ ಮಗಳನ್ನು ಮುಸ್ಲಿಂ ಕುಟುಂಬಕ್ಕೆ ಮದುವೆ ಮಾಡಿಕೊಡಲಾಗಿತ್ತು. ಮೇಲಾಗಿ ಅದು ಎರೇಂಜ್ಡ್ ಮ್ಯಾರೇಜ್ ಆಗಿತ್ತು. ಮೂರು ವರ್ಷಗಳಿಂದ ಮಾತುಕತೆ ನಡೆದು, ಕೊನೆಗೆ ಅಂತಿಮಗೊಳಿಸಲಾಗಿತ್ತು. ದಾವೂದ್ ವಾಂಖೇಡೆ ಮತ್ತು ಅವರ ಪತ್ನಿ ಮುಸ್ಲಿಮ್ ಸಂಪ್ರದಾಯಗಳನ್ನು ಪಾಲಿಸುತ್ತಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದಲ್ಲೇ ನಾವು ಎಂಗೇಜ್ಮೆಂಟ್ ಮಾಡಿದ್ದೆವು. ಹತ್ತು ತಿಂಗಳ ನಂತರ ಮದುವೆಯನ್ನೂ ಇಸ್ಲಾಂ ಪ್ರಕಾರ ಮಾಡಲಾಗಿತ್ತು ಎಂದು ಝಾಯೇದ್ ಖುರೇಷಿ ತಿಳಿಸಿದ್ದಾರೆ.

ದಾವೂದ್ ವಾಂಖೇಡೆ ನಿಖಾಹ್ ಮಾಡಿಕೊಂಡಿದ್ದಕ್ಕೂ ಸಹಿ ಹಾಕಿದ್ದರು. ಉರ್ದು ಮತ್ತು ಇಂಗ್ಲಿಷ್ ನಲ್ಲಿ ನಿಖಾಹ್ ಪತ್ರವನ್ನು ಬರೆಯಲಾಗಿತ್ತು. ಅವರ ಕುಟುಂಬ ಮುಸ್ಲಿಂ ಅನ್ನುವುದು ಎಲ್ಲರಿಗೂ ತಿಳಿದಿತ್ತು. ಸಮೀರ್ ತಾಯಿ ಕಟ್ಟರ್ ಪಂಥೀಯ ಮುಸ್ಲಿಮ್ ಆಗಿದ್ದರು. ಎಲ್ಲ ಸಂಪ್ರದಾಯಗಳನ್ನು ಪಾಲಿಸುತ್ತಿದ್ದರು. ಸಮೀರ್ ಕೂಡ ದಿನವೂ ನಮಾಜ್, ರಮ್ಜಾನ್ ತಿಂಗಳಲ್ಲಿ ಉಪವಾಸವನ್ನೂ ಮಾಡುತ್ತಿದ್ದರು ಎಂದು ಝಾಯೇದ್ ಹೇಳಿದ್ದಾರೆ. ಆದರೆ, ಮಗಳು ಶಬಾನಾ ಮತ್ತು ಸಮೀರ್ ನಡುವೆ ವಿಚ್ಚೇದನ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2006ರಲ್ಲಿ ಸಮೀರ್ – ಶಬಾನಾ ಮದುವೆ ನಡೆದಿತ್ತು.

ಮಹಾರಾಷ್ಟ್ರ ಸರಕಾರದ ಸಚಿವ ಮತ್ತು ಎನ್ ಸಿಪಿ ನಾಯಕ ನವಾಬ್ ಮಲಿಕ್, ಸಮೀರ್ ವಾಂಖೇಡೆ ಮುಸ್ಲಿಂ ಆಗಿಯೇ ಜನಿಸಿದ್ದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಹಿಂದು ಎಸ್ಸಿ ಕೆಟಗರಿ ಎಂದು ನಕಲಿ ದಾಖಲೆ ಸೃಷ್ಟಿಸಿ, ಉದ್ಯೋಗ ಪಡೆದಿದ್ದರು ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಮೀರ್ ವಾಂಖೇಡೆ, ತನ್ನ ತಾಯಿ ಮುಸ್ಲಿಂ. ತಂದೆ ಹಿಂದುವಾಗಿದ್ದರು. ಹೀಗಾಗಿ ನಮ್ಮದು ಬಹು ಸಂಸ್ಕೃತಿಯನ್ನು ಪಾಲಿಸುವ ಕುಟುಂಬ ಎಂದಿದ್ದಾರೆ. ಆದರೆ, ಸಮೀರ್ ಪತ್ನಿ ಮರಾಠಿ ನಟಿ ಕ್ರಾಂತಿ ರೇಡ್ಕರ್ ಮಾತ್ರ, ತನ್ನ ಗಂಡ ಸಮೀರ್ ಹಿಂದುವಾಗಿಯೇ ಜನಿಸಿದ್ದಾರೆ. ಅವರು ಮುಸ್ಲಿಂ ಅಲ್ಲ. ನಾವಿಬ್ಬರೂ ಹಿಂದು ಸಂಪ್ರದಾಯವನ್ನೇ ಪಾಲನೆ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಕ್ರಾಂತಿ ರೇಡ್ಕರ್ ಮುಂಬೈನಲ್ಲಿ ಜನಪ್ರಿಯ ನಟಿಯಾಗಿದ್ದು, ಸಮೀರ್ ಎರಡನೇ ಪತ್ನಿಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತಿಚೆಗೆ, ಸಮೀರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಬಳಿಕ ಪ್ರತಿಕ್ರಿಯಿಸಿದ್ದ ಕ್ರಾಂತಿ ರೇಡ್ಕರ್, ತನ್ನ ಗಂಡನ ವಿರುದ್ಧ ಕೇಳಿಬಂದ ಎಲ್ಲ ಆರೋಪವನ್ನು ನಿರಾಕರಿಸಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಶಾರುಖ್ ಪುತ್ರ ಆರ್ಯನ್ ಖಾನ್ ಬಿಡುಗಡೆಗಾಗಿ ಎನ್ ಸಿಬಿ ಅಧಿಕಾರಿಗಳು 25 ಕೋಟಿ ಲಂಚ ಕೇಳಿದ್ದರು ಎಂದು ಆರೋಪ ಮಾಡಲಾಗಿತ್ತು. ಆನಂತರ, 18 ಕೋಟಿಗೆ ಇಳಿಸಲಾಗಿತ್ತು. ಎಂಟು ಕೋಟಿ ಸಮೀರ್ ವಾಂಖೇಡೆಗೆ ಸಂದಾಯ ಆಗಿದೆ ಎಂದು ಆರೋಪಿಸಿದ್ದು ದೊಡ್ಡ ಸಂಚಲನ ಎಬ್ಬಿಸಿತ್ತು. ಈ ವಿಚಾರ ಚರ್ಚೆಗೀಡಾಗುತ್ತಲೇ ದೆಹಲಿ ಮಟ್ಟದ ಅಧಿಕಾರಿಗಳು ಸಮೀರ್ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.
Dr Zayed Qureshi, the father of NCB officer Sameer Wankhede's ex-wife Dr Shabana Qureshi, has claimed that he is a practising Muslim who follows all rituals. “My daughter was married into a Muslim family. It was an arranged marriage. We were in talks for three years. Since then, I knew Dawood Wankhede and his wife, who were also practising Muslims,” said Dr Zayed Qureshi.
16-01-26 09:38 pm
Bangalore Correspondent
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
16-01-26 06:33 pm
HK News Desk
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
16-01-26 10:28 pm
Mangalore Correspondent
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಜಾಹಿರ...
16-01-26 12:31 pm
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm