ಬ್ರೇಕಿಂಗ್ ನ್ಯೂಸ್
11-09-20 10:41 am Headline Karnataka News Network ದೇಶ - ವಿದೇಶ
ವಾಷಿಂಗ್ಟನ್ ಸೆಪ್ಟೆಂಬರ್ 11: ಒಂದು ಸಾವಿರಕ್ಕೂ ಹೆಚ್ಚು ಚೀನಿ ರಾಷ್ಟ್ರೀಯರ ವೀಸಾಗಳನ್ನು ಅಮೆರಿಕ ರದ್ದು ಪಡಿಸಿದೆ. ಭದ್ರತಾ ಕಾರಣಗಳನ್ನು ಮುಂದೊಡ್ಡಿ ಈ ಕ್ರಮ ಕೈಗೊಂಡಿದೆ. ಈಗಾಗಲೇ ಹಳಸಿರುವ ಅಮೆರಿಕ-ಚೀನಾ ಬಾಂಧವ್ಯ ಇದರಿಂದ ಮತ್ತಷ್ಟು ಹದಗೆಡುವ ಸಂಭವವಿದೆ.
ಭದ್ರತಾ ಅಪಾಯವೊಡ್ಡುವ ಶಂಕೆಯಿರುವ ಚೀನಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಅಮೆರಿಕ ಪ್ರವೇಶಿಸುವ ಮೇಲೆ ನಿರ್ಬಂಧ ಹೇರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ 29ರಂದು ಆದೇಶ ಹೊರಡಿಸಿದ್ದರು. ಅದಕ್ಕನುಗುಣವಾಗಿ ವೀಸಾ ರದ್ದು ಪಡಿಸಲಾಗಿದೆ ಎಂದು ಗೃಹ ಇಲಾಖೆಯ ವಕ್ತಾರೆ ಬುಧವಾರ ತಿಳಿಸಿದ್ದಾರೆ.
ಚೀನಾದ ಮಿಲಿಟರಿಯೊಂದಿಗೆ ಸಂಬಧವಿರುವ ಚೀನಿ ಪದವಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ವೀಸಾಗಳನ್ನು ತಡೆ ಹಿಡಿಯುವುದಾಗಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ಪ್ರಭಾರ ಮುಖ್ಯಸ್ಥ ಚಾಡ್ ವೂ ಇದಕ್ಕೂ ಮುನ್ನ ಹೇಳಿದ್ದರು. ಸೂಕ್ಷ್ಮ ಸಂಶೋಧನಾ ವಿಚಾರಗಳನ್ನು ಕದ್ದು ದುರುಪಯೋಗ ಮಾಡುವುದನ್ನು ತಡೆಯಲು ಈ ಕ್ರಮ ಎಂದವರು ವಿವರಿಸಿದ್ದರು.
ಕರೊನಾ ವೈರಸ್ ಸಂಶೋಧನೆ ಸಹಿತ ಚೀನಾ ಹಲವು ಕಾನೂನು ಬಾಹಿರ ವ್ಯಾವಹಾರಿಕ ಚಟುವಟಿಕೆ ನಡೆಸುತ್ತಿದೆ ಹಾಗೂ ಕೈಗಾರಿಕಾ ಅಂಶಗಳಿಗೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಅಮೆರಿಕದ ಆರೋಪವನ್ನು ಪುನರುಚ್ಚರಿಸಿದ್ದಾರೆ. ಅಮೆರಿಕದ ಶೈಕ್ಷಣಿಕ ವಿಚಾರಗಳನ್ನು ಶೋಷಿಸಲು ವಿದ್ಯಾರ್ಥಿ ವೀಸಾಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದಿದ್ದರು. ಗುಲಾಮಿ ಶ್ರಮದಿಂದ ತಯಾರಾಗುವ ಉತ್ಪನ್ನಗಳು ಅಮೆರಿಕದ ಮಾರುಕಟ್ಟೆ ಪ್ರವೇಶಿಸುವುದನ್ನು ತಡೆಯುವ ಉದ್ದೇಶವೂ ಇದೆ ಎನ್ನುವ ಮೂಲಕ ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪರೋಕ್ಷವಾಗಿ ಹೇಳಿದ್ದರು. ‘ಪ್ರತಿಯೊಬ್ಬ ಮನುಷ್ಯರ ಅಂತರ್ಗತ ಮಾನವ ಘನತೆಯನ್ನು ಚೀನಾ ಗೌರವಿಸಬೇಕು’ ಎಂದೂ ತಾಕೀತು ಮಾಡಿದ್ದಾರೆ. ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದನ್ನು ಉಲ್ಲೇಖಿಸಿ ಅವರು ಈ ಟಿಪ್ಪಣಿ ಮಾಡಿದ್ದಾರೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm