ಬ್ರೇಕಿಂಗ್ ನ್ಯೂಸ್
11-10-21 11:43 am Headline Karnataka News Network ದೇಶ - ವಿದೇಶ
ಮಾಸ್ಕೋ, ಅಕ್ಟೋಬರ್ 11: ರಷ್ಯಾದ ವಿಮಾನವೊಂದು ಪತನವಾಗಿದ್ದು ಈ ವಿಮಾನ ಅಪಘಾತದಿಂದ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸುಮಾರು 23 ಮಂದಿ ಈ ರಷ್ಯಾದ ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಈ ಪೈಕಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಏಳು ಮಂದಿಗೆ ಗಾಯವಾಗಿದೆ ಎಂದು ಕೂಡಾ ವರದಿಯು ಹೇಳಿದೆ.
ರಷ್ಯಾದ ಮೆನ್ಜೆಲಿನ್ಸ್ಕ್ ನಗರದ ಟಾಟರ್ಜ್ತಾನ್ ಎಂಬಲ್ಲಿ 23 ಮಂದಿ ಪ್ರಯಾಣಿಕರು ಇದ್ದ ಲೆಟ್ ಎಲ್-410 ಟರ್ಬೋಲೆಟ್ ವಿಮಾನ ಪತನಗೊಂಡಿದೆ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ಸುಮಾರು 9:11 (ಮಾಸ್ಕೋ ಸಮಯ) ಕ್ಕೆ ಈ ಲೆಟ್ ಎಲ್-410 ಟರ್ಬೋಲೆಟ್ ವಿಮಾನ ಪತನಗೊಂಡಿದೆ ಎಂದು ವರದಿಯು ಮಾಹಿತಿ ನೀಡಿದೆ.
ರಷ್ಯಾದ ಲೆಟ್ ಎಲ್-410 ಟರ್ಬೋಲೆಟ್ ವಿಮಾನದಲ್ಲಿದ್ದ 23 ಮಂದಿ ಪ್ರಯಾಣಿಕರ ಪೈಕಿ 21 ಮಂದಿ ಡೈವರ್ಗಳಾಗಿದ್ದರು ಎಂದು ಹೇಳಲಾಗಿದೆ. ಈ ವಿಮಾನ ದುರಂತದಲ್ಲಿ ಏಳು ಮಂದಿಗೆ ಗಾಯವಾಗಿದೆ.
ಈ ವಿಮಾನ ಪತನಗೊಂಡ ಚಿತ್ರವನ್ನು ರಷ್ಯಾದ ತುರ್ತು ಪರಿಸ್ಥಿತಿ ಸಚಿವಾಲಯವು ಬಿಡುಗಡೆ ಮಾಡಿದ್ದು, ಬದುಕುಳಿದ ಏಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವಿವರಿಸಿದೆ.
"ರಷ್ಯಾದ ಮೆನ್ಜೆಲಿನ್ಸ್ಕ್ ನಗರದ ಟಾಟರ್ಜ್ತಾನ್ ಎಂಬಲ್ಲಿ ಪತನಗೊಂಡ ಈ ರಷ್ಯಾದ ವಿಮಾನವು ಸಂಪೂರ್ಣವಾಗಿ ಜಖಂ ಆಗಿದೆ. ಬದುಕುಳಿದ ಏಳು ಮಂದಿಯನ್ನು ಕೂಡಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಓರ್ವ ಗಾಯಾಳುವಿನ ಸ್ಥಿತಿಯು ಚಿಂತಾಜನಕವಾಗಿದೆ," ಎಂದು ರಷ್ಯಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನು ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ ಈ ವಿಡಿಯೋವು ರಷ್ಯಾದ ಸೇನೆ, ನಾಗರಿಕ ಯಾನ ಮತ್ತು ನೌಕಾಪಡೆಗೆ ಸಹಾಯ ಮಾಡಲು ಇರುವ ಒಂದು ಸ್ವಯಂ ಸೇವಕ ಸಂಸ್ಥೆಗೆ ಸೇರಿದ್ದು ಆಗಿದೆ. ಹಾಗೆಯೇ ಇದು ಕ್ರೀಡಾ ಮತ್ತು ರಕ್ಷಣಾ ಸಂಸ್ಥೆಯಾಗಿದೆ ಎಂದು ಕೂಡಾ ರಷ್ಯಾದ ಸ್ಥಳೀಯ ಮಾಧ್ಯಮಗಳು ವಿವರಿಸಿದೆ.
ಈ ವರ್ಷದ ಆರಂಭದಲ್ಲಿ ರಷ್ಯಾದಲ್ಲಿ ಎರಡು ಎಲ್-410 ವಿಮಾನಗಳು ಪತನವಾಗಿದೆ.
Sixteen people were killed after an aircraft carrying parachutists crashed in central Russia on Sunday, the emergencies ministry said. The L-410 plane carrying 22 people crashed around 9:23 a.m. local time (0623 GMT) during a flight over the republic of Tatarstan, the ministry said on its Telegram channel.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm