ಬ್ರೇಕಿಂಗ್ ನ್ಯೂಸ್
07-10-21 02:13 pm Headline Karnataka News Network ದೇಶ - ವಿದೇಶ
ಹೃಷಿಕೇಶ್, ಅ.7: ಸಾರ್ವಜನಿಕ ಜೀವನ ಪ್ರವೇಶಿಸಿ ಹಲವು ದಶಕಗಳಾಗಿವೆ. 2001ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಲಭಿಸಿತ್ತು. ಜನರ ಬೆಂಬಲದಿಂದ ಪ್ರಧಾನಿಯೂ ಆಗಿದ್ದೇನೆ. ಆದರೆ, ಮುಂದೊಂದು ದಿನ ಪ್ರಧಾನಿಯಾಗುತ್ತೇನೆಂದು ಯಾವತ್ತೂ ಕನಸಲ್ಲೂ ಅನ್ಕೊಂಡಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ, ಸಾಂವಿಧಾನಿಕ ಹುದ್ದೆ ಸ್ವೀಕರಿಸಿ ಅ.7ಕ್ಕೆ 20 ವರ್ಷ ಪೂರೈಸುತ್ತಿದ್ದು, ದೇಶಾದ್ಯಂತ ಇದೇ ದಿನ ಆಕ್ಸಿಜನ್ ಘಟಕಗಳ ಉದ್ಘಾಟನೆ ನಡೆಸಲಾಗುತ್ತಿದೆ.
ಆಕ್ಸಿಜನ್ ಘಟಕದ ಉದ್ಘಾಟನೆ ನಿಮಿತ್ತ ಉತ್ತರಾಖಂಡ್ ರಾಜ್ಯದ ಹೃಷಿಕೇಶಕ್ಕೆ ತೆರಳಿರುವ ಮೋದಿ, ಏಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿ ಮಾತನಾಡಿದರು. ಪಿಎಂ ಕೇರ್ ಫಂಡ್ ಅಡಿ ದೇಶದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಕ್ಸಿಜನ್ ಪ್ಲಾಂಟ್ ಏಕಕಾಲದಲ್ಲಿ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ ನೆರವೇರಿಸಲಾಗಿದೆ.
ಕಡಿಮೆ ಅವಧಿಯಲ್ಲಿ ದೇಶದಲ್ಲೀಗ ಆಕ್ಸಿಜನ್ ಪ್ಲಾಂಟ್, ಕೋವಿನ್ ಟೆಸ್ಟಿಂಗ್ ಲ್ಯಾಬ್ ಆಗಿದೆ. ಅಗತ್ಯ ಮೂಲಸೌಲಭ್ಯಗಳನ್ನು ಪೂರೈಸಿಕೊಂಡಿದ್ದು ದೇಶದ ಸಾಮರ್ಥ್ಯವನ್ನು ತೋರಿಸಿದ್ದೇವೆ. ಭಾರತ ಈಗ ಕೋವಿಡ್ ಲಸಿಕೆ, ಕಿಟ್, ಮಾಸ್ಕ್ ಇನ್ನಿತರ ಉತ್ಪನ್ನಗಳನ್ನು ವಿದೇಶಗಳಿಗೆ ಪೂರೆಕೆಯನ್ನೂ ಮಾಡುತ್ತಿದೆ. ದೇಶಾದ್ಯಂತ ಕೋವಿಡ್ ಲಸಿಕೆಯನ್ನೂ ನೀಡಿದ್ದಲ್ಲದೆ, ಸಾಗರ ಮತ್ತು ಕಾಡಿನ ಮಧ್ಯೆ ಇರುವ ಜನರಿಗೂ ಲಸಿಕೆ ತಲುಪಿಸಿದ್ದೇವೆ ಎಂದು ಮೋದಿ ಹೇಳಿದರು.
ಇದೇ ವೇಳೆ, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮೋದಿಯವರನ್ನು ಶ್ಲಾಘಿಸುತ್ತಾ ಸಾರ್ವಜನಿಕ ಜೀವನದ 20 ವರ್ಷಗಳನ್ನು ಪೂರೈಸಿದ ದಿನವೇ ನಮ್ಮಲ್ಲಿಗೆ ಆಗಮಿಸಿದ್ದು ಹೆಮ್ಮೆಯ ಕ್ಷಣ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಈಗ ಜಗತ್ತಿನ ಅತ್ಯಂತ ಪ್ರಭಾವಿ ನಾಯಕ. ಅವರು ಇಂದು ದೇವಭೂಮಿಗೆ ಬಂದಿದ್ದು ಶುಭದ ಸೂಚನೆ. ಈ ಕ್ಷಣಕ್ಕಾಗಿ ನಾವು ಕಾಯುತ್ತಿದ್ದೆವು ಎಂದು ಧಾಮಿ ಹೇಳಿದರು.
2001ರಲ್ಲಿ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಆ ಹುದ್ದೆಯಲ್ಲಿ 13 ವರ್ಷ ಪೂರೈಸಿದ್ದರು. ಆನಂತರ, ಮುಖ್ಯಮಂತ್ರಿಯಾಗಿದ್ದೇ ಪ್ರಧಾನಿ ಹುದ್ದೆಗೇರಿದ್ದು ಈಗ ಏಳು ವರ್ಷ ಪೂರೈಸಿದ್ದಾರೆ. ಇದೇ ಕಾರಣಕ್ಕೆ, ಮೋದಿ ತಮ್ಮ ಭಾಷಣದ ನಡುವೆ 21ನೇ ವರ್ಷವನ್ನು ನಾನು ಹೃಷಿಕೇಶದಿಂದ ಆರಂಭಿಸುತ್ತೇನೆ ಎಂದು ಹೇಳಿದ್ದು ವಿಶೇಷ.
Prime Minister Narendra Modi completed 20 years of public life and on Thursday he said that he had never thought that he will be the Prime Minister one day. PM Modi was speaking at AIIMS Rishikesh where he dedicated 35 Pressure Swing Adsorption (PSA) oxygen plants that were installed under the PM-CARES fund across 35 States and Union Territories.
22-05-25 11:09 pm
HK News Desk
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
BJP Chalavadi Narayanaswamy, Congress, Priyan...
22-05-25 06:31 pm
Hassan, Bangalore, Heart Attack: ಪ್ರತ್ಯೇಕ ಪ್ರ...
22-05-25 01:09 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm