ಬ್ರೇಕಿಂಗ್ ನ್ಯೂಸ್
30-09-21 03:42 pm Headline Karnataka News Network ದೇಶ - ವಿದೇಶ
ಚಂಡೀಗಢ, ಸೆ.30: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ಬಳಿಕ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಅಮಿತ್ ಷಾ ಭೇಟಿಯ ಮರುದಿನವೇ ಅಮರಿಂದರ್ ಸಿಂಗ್ ಹೇಳಿಕೆ ನೀಡಿದ್ದು, ಬಿಜೆಪಿ ಸೇರುವುದಿಲ್ಲ. ಹಾಗೆಂದು ಕಾಂಗ್ರೆಸ್ ನಲ್ಲಿ ಮುಂದುವರಿಯೋದೂ ಇಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ನಾನು ಈವಾಗಲೂ ಕಾಂಗ್ರೆಸಿನಲ್ಲೇ ಇದ್ದೇನೆ. ಹಾಗಂತ, ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯೋದಿಲ್ಲ. ಈ ರೀತಿಯ ವಾತಾವರಣದಲ್ಲಿ ನಾನು ಕಾಂಗ್ರೆಸಿನಲ್ಲಿ ಇರಲಾರೆ ಎಂದು ಅಮರಿಂದರ್ ಸಿಂಗ್ ಎನ್ ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ವಾರದ ಹಿಂದೆ ಸಿಎಂ ಸ್ಥಾನದಿಂದ ಇಳಿದಿದ್ದ ಅಮರಿಂದರ್ ಸಿಂಗ್, ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿದ್ದು ನಾನಾ ಊಹೋಪೋಹಗಳಿಗೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಅಮರಿಂದರ್ ಸಿಂಗ್ ಭೇಟಿಯಾಗಿದ್ದರು. ಅಮಿತ್ ಷಾ ಭೇಟಿಯ ಬಳಿಕ ಟ್ವೀಟ್ ಮಾಡಿದ್ದ ಅಮರಿಂದರ್ ಸಿಂಗ್, ಕೇಂದ್ರ ಸಚಿವರನ್ನು ಭೇಟಿಯಾಗಿ ಕೃಷಿ ಮಸೂದೆಯ ಕುರಿತ ಜಟಾಪಟಿಗೆ ಕೊನೆ ಹಾಡುವಂತೆ ಕೇಳಿಕೊಂಡಿದ್ದೇನೆ. ಪಂಜಾಬ್ ನಲ್ಲಿ ಈ ಮಸೂದೆಯ ಕಾರಣದಿಂದ ರೈತರು ಸಂಕಷ್ಟಕ್ಕೀಡಾಗಿರುವುದನ್ನು ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದರು.
ಇದರ ನಡುವಲ್ಲೇ ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಪಂಜಾಬ್ ಕಾಂಗ್ರೆಸ್ ನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದರು. ಇವೆಲ್ಲ ಬೆಳವಣಿಗೆಯ ಮಧ್ಯೆ ಅಮರಿಂದ್ ಸಿಂಗ್ ತಾನೂ ಕಾಂಗ್ರೆಸಿನಲ್ಲಿ ಉಳಿಯಲ್ಲ, ಬಿಜೆಪಿ ಸೇರಲ್ಲ ಎನ್ನುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ. ಕಾಂಗ್ರೆಸಿನಲ್ಲೇ ಮಹತ್ವದ ಸ್ಥಾನ ಸಿಕ್ಕರೆ ಉಳಿಯುತ್ತಾರೆಯೇ ಅಥವಾ ಆಪ್ ಪಕ್ಷದತ್ತ ಮುಖ ಮಾಡಿದ್ದಾರೆಯೇ ಎನ್ನುವ ಕುತೂಹಲಕ್ಕೆ ಕಾರಣವಾಗಿದೆ. ಪಂಜಾಬ್ ನಲ್ಲಿ ಮುಂದಿನ ವರ್ಷದಲ್ಲೇ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಆಪ್ ಪಕ್ಷಗಳು ಭಾರೀ ಕಸರತ್ತಿನಲ್ಲಿ ತೊಡಗಿವೆ.
A day after meeting Union Home Minister Amit Shah at his residence in Delhi, former Punjab CM Capt Amarinder Singh has said that he is not joining the Bharatiya Janata Party (BJP).
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm