ಬ್ರೇಕಿಂಗ್ ನ್ಯೂಸ್
29-09-21 05:15 pm Headline Karnataka News Network ದೇಶ - ವಿದೇಶ
ಲಕ್ನೋ, ಸೆ.29: ಬಿಟೆಕ್ ಓದುತ್ತಿದ್ದ ವಿದ್ಯಾರ್ಥಿಯನ್ನು ಮುಖಕ್ಕೆ ಏಸಿಡ್ ಎರಚಿ, ಸುಟ್ಟು ಹಾಕಿದ್ದಲ್ಲದೆ ಚೂರಿಯಿಂದ ತಿವಿದು ಭೀಕರವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಯ ಶವ ಇತ್ತೀಚೆಗೆ ಪತ್ತೆಯಾಗಿತ್ತು. ಮುಖ, ದೇಹ ಅರೆಸುಟ್ಟ ಸ್ಥಿತಿಯಲ್ಲಿತ್ತು. ಹೀಗಾಗಿ ಪೋಸ್ಟ್ ಮಾರ್ಟಂ ಮಾಡಿದ್ದು ಅದರ ವರದಿಯಲ್ಲಿ ಯುವಕನನ್ನು ಭೀಕರವಾಗಿ ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ವೈದ್ಯರ ವರದಿ ಪ್ರಕಾರ, ಆತನ ದೇಹದಲ್ಲಿ 16 ಕಡೆಗಳಲ್ಲಿ ಚೂರಿಯಿಂದ ತಿವಿದ ಗಾಯಗಳಿದ್ದವು. ಅಲ್ಲದೆ, ಹೊಟ್ಟೆಯಲ್ಲಿ ಗ್ಲಾಸ್ ಚೂರು ಸಿಕ್ಕಿದ್ದು, ಬಾಟಲಿಯನ್ನು ಒಡೆದು ಹೊಟ್ಟೆಗೆ ಇರಿದಿರುವ ಬಗ್ಗೆ ಶಂಕಿಸಲಾಗಿದೆ.

23 ವರ್ಷದ ಸುಧೀರ್ ಸೈನಿ ಎನ್ನುವ ಯುವಕ ಕೊಲೆಯಾದ ವಿದ್ಯಾರ್ಥಿಯಾಗಿದ್ದು ಆತನಿಗೆ ಸಹಪಾಠಿ ವಿದ್ಯಾರ್ಥಿನಿ ಜೊತೆ ಪ್ರೀತಿ ಇತ್ತು ಎನ್ನಲಾಗಿತ್ತು. ಆಕೆಯ ಜೊತೆ ಮಾತನಾಡುವುದಕ್ಕಾಗಿ ಮೊರದಾಬಾದ್ ಜಿಲ್ಲೆಯ ಮಜೋಲಾ ಎಂಬಲ್ಲಿಗೆ ತೆರಳಿದ್ದು, ಆ ಸಂದರ್ಭದಲ್ಲಿ ಹುಡುಗಿಯ ಸಂಬಂಧಿಕರು ಸೇರಿ ಹಲ್ಲೆ ನಡೆಸಿದ್ದಾರೆ. ಆನಂತರ, ಯುವಕನ ಶವ ಮುಂಧಾ ಪಾಂಡೆ ಎನ್ನುವ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಕೊಲೆಗೂ ಮುನ್ನ ಯುವಕನಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಮುಖ ಪೂರ್ತಿ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಜೇಬಿನಲ್ಲಿದ್ದ ಐಡೆಂಟಿ ಕಾರ್ಡ್ ಆಧಾರದಲ್ಲಿ ಪತ್ತೆ ಕಾರ್ಯ ನಡೆಸಲಾಗಿತ್ತು. ಬರೇಲಿ ನಿವಾಸಿಯಾಗಿದ್ದ ಸುಧೀರ್ ಸೈನಿ, ಕಾಲೇಜಿಗೆ ತೆರಳಿದ್ದಾತ ನಾಪತ್ತೆಯಾಗಿದ್ದ. ಆನಂತರ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
A BTech student was allegedly killed by the family members of a woman he was in a relationship in Uttar Pradesh's Moradabad district. He was stabbed at least 16 times while his face was burnt with acid and glass pieces were found in his stomach, his post-mortem report revealed, police said.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm