ಬ್ರೇಕಿಂಗ್ ನ್ಯೂಸ್
27-09-21 03:50 pm Headline Karnataka News Network ದೇಶ - ವಿದೇಶ
ಲಕ್ನೋ, ಸೆ.27: ಹಿಂದು ದೇವರಾದ ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರೇ ಆಗಿದ್ದಾರೆ. ಹಾಗಾಗಿ ಭಾರತೀಯ ಹಿಂದು ಪರಂಪರೆ, ಸಂಸ್ಕೃತಿಯನ್ನು ಮುಸ್ಲಿಮರು ಕೂಡ ಗೌರವಿಸಬೇಕಾಗಿದೆ ಎಂದು ಉತ್ತರ ಪ್ರದೇಶದ ಆನಂದ ಸ್ವರೂಪ್ ಶುಕ್ಲಾ ಹೇಳಿದ್ದಾರೆ.
ಸಂಸದೀಯ ಖಾತೆ ರಾಜ್ಯ ಸಚಿವರಾಗಿರುವ ಆನಂದ ಸ್ವರೂಪ್ ಶುಕ್ಲಾ ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ನಾಲ್ಕೂವರೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಾಲಿಯಾ ಜಿಲ್ಲೆಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ್ದಾರೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದಲ್ಲಿ ಹಿಂದುತ್ವದ ಬಾವುಟ ಹಾರಿಸಿದ್ದಾರೆ. ಹಿಂದು ಸಂಸ್ಕೃತಿಯನ್ನು ಮತ್ತೆ ಮೇಲೆತ್ತಿದ್ದಾರೆ. ಆಮೂಲಕ ದೇಶವನ್ನು ಇಸ್ಲಾಮೀಕರಣ ಮಾಡುವ ಮುಸ್ಲಿಮರ ಅಜೆಂಡಾವನ್ನು ಸೋಲಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆನಂದ ಸ್ವರೂಪ್, ಭಾರತದ ಮುಸ್ಲಿಮರಿಗೆ ರಾಮ, ಕೃಷ್ಣ, ಶಿವನೇ ಪೂರ್ವಜರು. ಇಲ್ಲಿನ ಮುಸ್ಲಿಮರು ದೇವರನ್ನು ಕಾಣಲು ಕಾಬಾಕ್ಕೆ ಹೋಗುವ ಅಗತ್ಯ ಇಲ್ಲ. ಅವರು ಇಲ್ಲಿನ ಭರತ ಭೂಮಿಯನ್ನು ಮತ್ತು ದೇಶದ ಸಂಸ್ಕೃತಿ ಗೌರವಿಸಬೇಕು. ಇಲ್ಲಿಯೇ ದೇವರನ್ನು ಕಾಣಬಹುದು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನ, ಸಿರಿಯಾದ ಬೆಳವಣಿಗೆಯ ನಂತರ ಜಗತ್ತಿನ ಇತರ ಕಡೆಗಳ ಕೆಲವು ಜನರು ಇಡೀ ಜಗತ್ತನ್ನು ಇಸ್ಲಾಮಿಕ್ ಮಾಡಲು ಬಯಸುತ್ತಿದ್ದಾರೆ. ಭಾರತದಲ್ಲಿ ಕೂಡ ಇದೇ ರೀತಿಯ ಮಾನಸಿಕತೆ ಹಲವರಲ್ಲಿದೆ. ಆದರೆ, ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಹಿಂದುತ್ವ ಮತ್ತು ದೇಶದ ಸಂಸ್ಕೃತಿಯ ಬಾವುಟವನ್ನು ಬಾನೆತ್ತರಕ್ಕೆ ಹಾರಿಸಿದ್ದು, ಇಸ್ಲಾಮಿಕ್ ದೇಶ ಮಾಡುವ ಹುನ್ನಾರವನ್ನು ಸೋಲಿಸಿದ್ದಾರೆ ಎಂದು ಹೇಳಿದರು.
ಸಂಭಾಲ್ ಜಿಲ್ಲೆಯಲ್ಲಿ ಇತ್ತೀಚೆಗೆ ಉಗ್ರವಾದಿಗಳ ಪರವಾಗಿ ಹಾಕಲಾಗಿದ್ದ ಪೋಸ್ಟ್ ವಿಚಾರದಲ್ಲಿ ಪ್ರತಿಕ್ರಿಯಿಸಿದ ಆನಂದ ಸ್ವರೂಪ್, ಸಮಾಜವಾದಿ ಪಾರ್ಟಿಯ ನಾಯಕರು ಇಸ್ಲಾಮಿಕ್ ಉಗ್ರರಿಗೆ ಬೆಂಬಲ ನೀಡಿದ್ದರ ಪರಿಣಾಮವದು. ಸಮಾಜವಾದಿ ಪಾರ್ಟಿಯ ಸಂಸದ ಶೈಫುರ್ ರೆಹ್ಮಾನ್ ಬಾರ್ಕ್ ಉಗ್ರರನ್ನು ಬೆಂಬಲಿಸಿ ಹೇಳಿಕೆಯನ್ನೂ ನೀಡಿದ್ದರು ಎಂದು ಹೇಳಿದರು. ಸಂಭಾಲ್ ಜಿಲ್ಲೆಯಲ್ಲಿ ಹಾಕಲಾಗಿದ್ದ ಪೋಸ್ಟರ್ ನಲ್ಲಿ ಇದು ಘಾಜಿಗಳ ಭೂಮಿ, ಇಸ್ಲಾಮಿಕ್ ಹೋರಾಟಗಾರರಿಗೆ ಸೇರಿದ್ದು ಎಂದು ಬರೆಯಲಾಗಿತ್ತು. ಎಐಎಂಐಎಂ ಪಾರ್ಟಿ ಮುಖ್ಯಸ್ಥ ಅಸಾದುದ್ದೀನ್ ಔವೈಸಿ ಸಂಭಾಲ್ ಜಿಲ್ಲೆಗೆ ಬರುವುದಕ್ಕೂ ಮುನ್ನ ಸ್ಥಳೀಯ ಕಿಡಿಗೇಡಿಗಳು ಈ ರೀತಿಯ ಪೋಸ್ಟರ್ ಹಾಕಿದ್ದರು.
ಆನಂತರ, ಬಿಜೆಪಿ ನಾಯಕರು ಪೋಸ್ಟರ್ ಬಗ್ಗೆ ಕಟುವಾಗಿ ಟೀಕಿಸಿದ್ದಲ್ಲದೆ, ಎಐಎಂಐಎಂ ಕಾರ್ಯಕರ್ತರಿಂದಲೇ ಪೋಸ್ಟರ್ ಅನ್ನು ತೆರವು ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆನಂದ ಸ್ವರೂಪ್, ರಾಜ್ಯದಲ್ಲಿರುವ ಘಾಜಿಗಳ ಎಲ್ಲ ನೆಲೆಗಳನ್ನು ನಿರ್ನಾಮ ಮಾಡುತ್ತೇವೆ. ಭವಿಷ್ಯದಲ್ಲಿ ಯಾವತ್ತೂ ಘಾಜಿಗಳು ತಲೆಯೆತ್ತಬಾರದು. ಹೈದ್ರಾಬಾದ್ ನಲ್ಲಿ ಓವೈಸಿಯ ಪೂರ್ವಜರು ಕೂಡ ಪ್ರತ್ಯೇಕ ರಾಷ್ಟ್ರ ಮಾಡಲು ಭಾರೀ ಪ್ರಯತ್ನ ಪಟ್ಟಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.
ಹೈದ್ರಾಬಾದ್ ನಲ್ಲಿ ಈ ರೀತಿಯ ಮಾನಸಿಕತೆ ಉಳ್ಳವರು ಇನ್ನೂ ಇದ್ದಾರೆ. ಅವರೆಲ್ಲ ಮೂರ್ಖರು ಅಷ್ಟೇ.. ಇವರ ಪೂರ್ವಜರು ಕೂಡ ಮುಸ್ಲಿಮರೇ ಆಗಿದ್ದರು. ಆದರೆ, ಮೋದಿ, ಯೋಗಿ ಆಡಳಿತದಲ್ಲಿ ಈ ರೀತಿಯ ಮಾನಸಿಕತೆಗೆ ಜಾಗ ಇರಲ್ಲ ಎಂದು ಹೇಳಿದರು.
Uttar Pradesh minister Anand Swaroop Shukla has said that Lord Ram, Krishna, and Shiva were the ancestors of Indian Muslims and they should bow to the “land and culture of India”.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm