ಬ್ರೇಕಿಂಗ್ ನ್ಯೂಸ್
24-09-21 03:09 pm Headline Karnataka News Network ದೇಶ - ವಿದೇಶ
ಲಕ್ನೋ, ಸೆ.24: ಅಖಿಲ ಭಾರತೀಯ ಆಖಾರ ಪರಿಷತ್ ಮುಖ್ಯಸ್ಥರಾಗಿದ್ದ ಮಹಾಂತ ನರೇಂದ್ರ ಗಿರಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಕೈಗೆತ್ತಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಹಲವು ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಸಿಬಿಐ ತನಿಖೆಗೆ ಒತ್ತಾಯಿಸಿದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಸರಕಾರ ಸಿಬಿಐ ವಶಕ್ಕೆ ಒಪ್ಪಿಸಿತ್ತು.
ಇದೇ ಸಂದರ್ಭದಲ್ಲಿ ಮಹಾಂತ ನರೇಂದ್ರ ಗಿರಿ ಸಾವಿಗೂ ಮುನ್ನ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಬಗ್ಗೆ ಭಾರೀ ಸಂಶಯ ಕೇಳಿಬಂದಿದೆ. ನಿರಂಜನಿ ಅಖಾರ ಸೇರಿದಂತೆ ವಿವಿಧ ಮಠಗಳ ಸಾಧುಗಳು ಡೆತ್ ನೋಟ್ ಮಹಾಂತ ನರೇಂದ್ರ ಗಿರಿ ಬರೆದಿದ್ದಲ್ಲ. ಅವರು ಅಕ್ಷರಸ್ಥರಾಗಿರಲಿಲ್ಲ. ಎಂಟು ಪುಟಗಳ ಡೆತ್ ನೋಟ್ ಬರೆಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಪತ್ರ ನಕಲಿಯಾದಲ್ಲಿ ಅದರಲ್ಲಿ ಸೂಚಿಸಿರುವ ವ್ಯಕ್ತಿಯನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಬಾರದು ಎಂದು ಹೇಳಿದ್ದಾರೆ.

ನಿರಂಜನಿ ಪೀಠದ ಸಾಧು ಕೈಲಾಸಾನಂದ ಗಿರಿ ಈ ಬಗ್ಗೆ ಹೇಳಿಕೆ ನೀಡಿದ್ದು, ಡೆತ್ ನೋಟ್ ನಕಲಿ ಆಗಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸಬೇಕು. ಸ್ವಾಮಿಗಳು ತಾವು ಶಾಲೆಗೆ ಹೋಗಿಲ್ಲ ಎಂದು ಹೇಳುತ್ತಿದ್ದರು. ಆದರೆ, ಕೆಲವರು ಹತ್ತನೇ ಕ್ಲಾಸ್ ಓದಿದ್ದರು ಎನ್ನುತ್ತಿದ್ದಾರೆ. ಆದರೆ, ಏನಿದ್ದರೂ ಇಷ್ಟು ದೀರ್ಘವಾಗಿ ಎಂಟು ಪುಟಗಳ ಡೆತ್ ನೋಟನ್ನು ಅವರು ಬರೆದಿರುವುದಕ್ಕೆ ಸಾಧ್ಯವಿಲ್ಲ. ಅವರು ರಿಜಿಸ್ಟರ್ ವಿಲ್ ಬರೆದಿದ್ದಾರೆ ಎನ್ನಲಾಗುತ್ತಿದೆ. ಅದನ್ನು ನಾವು ನೋಡಿಲ್ಲ. ವೀಲು ಬರೆದಿದ್ದು ಮತ್ತು ಡೆತ್ ನೋಟ್ ಸತ್ಯವಾದಲ್ಲಿ ಅದರಲ್ಲಿ ಬರೆದಿರುವ ವ್ಯಕ್ತಿ ಬಲಬೀರ್ ಗಿರಿ ಬಾಘಂಬರಿ ಪೀಠದ ಉತ್ತರಾಧಿಕಾರಿ ಆಗಬಹುದು. ಆದರೆ, ಇದು ನಕಲಿಯಾದಲ್ಲಿ ನಾವೆಲ್ಲ ಸೇರಿಕೊಂಡು ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಮಹಾಂತ ನರೇಂದ್ರ ಗಿರಿ ಸೆ.21ರಂದು ತಮ್ಮ ಬಾಘಂಬರಿ ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಆದರೆ, ಅವಪ ಶಿಷ್ಯರು ಸೇರಿದಂತೆ ಹಲವರು ಆತ್ಮಹತ್ಯೆ ಬಗ್ಗೆ ಸಂಶಯಪಟ್ಟಿದ್ದರು. ಇದು ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಿಕೆ ನೀಡಿದ್ದರು. ಈಗಾಗ್ಲೇ ಪೊಲೀಸರು ನರೇಂದ್ರ ಗಿರಿಯವರ ಶಿಷ್ಯರಾದ ಆನಂದ್ ಗಿರಿ, ಆದ್ಯಪ್ರಸಾದ್ ತಿವಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಅಖಾರ ಪರಿಷತ್ ದೇಶದಲ್ಲಿ ಅತಿ ದೊಡ್ಡ ಸಾಧುಗಳ ಸಂಘಟನೆಯಾಗಿದೆ. ಇತ್ತೀಚೆಗೆ ಪ್ರಯಾಗರಾತ್ ನಲ್ಲಿ ಕುಂಭ ಮೇಳ ಸಂಘಟಿಸಿದ್ದರಲ್ಲಿ ನರೇಂದ್ರ ಗಿರಿ ಪ್ರಮುಖರಾಗಿದ್ದರು.
With the death of Mahant Giri still shrouded in mystery, the head of the Niranjani Akhara and other saints on Thursday said the appointment of his successor as the mahant of Baghambari Gaddi Math and Bade Hanuman Mandir in Prayagraj will depend on the findings of the ongoing investigation.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm