ಬ್ರೇಕಿಂಗ್ ನ್ಯೂಸ್
22-09-21 03:02 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಸೆ.21: ಕೆಲವೊಮ್ಮೆ ಅದೃಷ್ಟ ಲಕ್ಷ್ಮಿ ಒಲಿದರೆ ಬಡವನೂ ಕೋಟ್ಯಧಿಪತಿ ಆಗುತ್ತಾನೆ. ಹೌದು, ಈ ಬಾರಿ ಕೇರಳದ ಓಣಂ ಹಬ್ಬದ ಬಂಪರ್ ಲಾಟರಿ ಬಡ ಆಟೋ ಚಾಲಕನಿಗೆ ಒಲಿದಿದೆ. 12 ಕೋಟಿ ರೂ. ತಿರುವೋಣಂ ಬಂಪರ್ ಲಾಟರಿಯನ್ನು ಎರ್ನಾಕುಲಂ ಜಿಲ್ಲೆಯ ಆಟೋ ಚಾಲಕ ಜಯಪಾಲನ್ ಎಂಬಾತ ಗೆದ್ದಿದ್ದಾನೆ.
ಆಟೋರಿಕ್ಷಾ ಓಡಿಸುತ್ತಾ ಸಂಕಷ್ಟದಲ್ಲಿ ಜೀವನ ಸಾಗಿಸ್ತಿದ್ದ ಜಯಪಾಲನ್ಗೆ ದಿಢೀರ್ ಅದೃಷ್ಟ ಒಲಿದು ಬಂದಿದೆ. ಸಾಕಷ್ಟು ಜನರಿಗೆ ಲಕ್ ತಂದಿರುವ ಮೀನಾಕ್ಷಿ ಲಕ್ಕಿ ಸೆಂಟರ್ನಲ್ಲಿ ಜಯಪಾಲನ್ ಲಾಟರಿ ಖರೀದಿ ಮಾಡಿದ್ದರು. 12 ಕೋಟಿ ರೂ. ಮೊತ್ತದ ಲಾಟರಿಯಲ್ಲಿ ತೆರಿಗೆ ಎಲ್ಲಾ ಕಳೆದು ಸುಮಾರು 7.4 ಕೋಟಿ ರೂಪಾಯಿ ಜಯಪಾಲನ್ಗೆ ಸಿಗಲಿದೆ.
ಲಾಟರಿ ಟಿಕೆಟ್ ಪಡೆದಿದ್ದ ಜಯಪಾಲನ್ಗೆ ತನ್ನ ಟಿಕೆಟ್ ಫ್ಯಾನ್ಸಿ ನಂಬರ್ ಅನ್ನೋದು ತಿಳಿದಿರಲಿಲ್ಲ. ಟಿಕೆಟ್ ಸಂಖ್ಯೆ TE 645465 ಲಾಟರಿ ಗೆದ್ದಿದೆ ಎಂದು ಘೋಷಿಸಲಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಜಯಪಾಲನ್ ಕುಣಿದು ಕುಪ್ಪಳಿಸಿದ್ದಾರೆ. 300 ರೂ. ಬೆಲೆಯ ಲಾಟರಿ ಟಿಕೆಟ್ ಖರೀದಿಸಿ, 7 ಕೋಟಿ ಬಾಚಿದ್ದನ್ನು ಜಯಪಾಲನ್ ಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಹಣವನ್ನು ಏನು ಮಾಡುತ್ತೀರಿ ಎಂದು ಕೇಳಿದ್ದಕ್ಕೆ, ಕೆಲವೊಂದು ಸಾಲ ಇದೆ, ಅದನ್ನು ತೀರಿಸ್ತೀನಿ. ಆನಂತರ ಮಕ್ಕಳ ಶಿಕ್ಷಣಕ್ಕೆ ವ್ಯಯ ಮಾಡ್ತೀನಿ ಎಂದು ಹೇಳಿದ್ದಾರೆ.
ದೇವಸ್ಥಾನದ ಗುಮಾಸ್ತ ಗೆದ್ದಿದ್ದ ಲಾಟರಿ !
2020ರಲ್ಲಿ ತಿರುವೋಣಂ ಲಾಟರಿಯನ್ನು ದೇವಸ್ಥಾನದ ಗುಮಾಸ್ತ ಗೆದ್ದಿದ್ದರು. ಇಡುಕ್ಕಿ ಮೂಲದ ಅನಂತು ವಿಜಯನ್ ಬರೋಬ್ಬರಿ 12 ಕೋಟಿ ಗೆದಿದ್ದರು. ತೆರಿಗೆ ಎಲ್ಲಾ ಕಡಿತಗೊಂಡು 7.56 ಕೋಟಿ ರು. ಅಂತೂ ವಿಜಯನ್ ಕೈಸೇರಿತ್ತು. ಕೇರಳದ ಇಡುಕ್ಕಿಯಲ್ಲಿ ಬಡತನದಲ್ಲೇ ನರಳುತ್ತಿದ್ದ ಅನಂತು ಕುಟುಂಬಕ್ಕೆ ಮನೆ ರಿಪೇರಿ ಮಾಡಿಸಲು ಕೂಡ ಹಣವಿರಲಿಲ್ಲ. ಆದರೆ, ಲಾಟರಿ ಮೂಲಕ ಭಾಗ್ಯದ ಬಾಗಿಲು ತೆರೆದಿತ್ತು.
The lucky winner of the Thiruvonam bumper lottery has finally been identified Jayapalan, an auto driver from Maradu, Thrippunithura, has won the first prize of Rs 12 crore Jayapalan bought the ticket on the 10th of this month.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm