ಬ್ರೇಕಿಂಗ್ ನ್ಯೂಸ್
17-09-21 10:28 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ.17 : ಜಿಎಸ್ಟಿ ಮಂಡಳಿ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲನ್ನು ಜಿಎಸ್ಟಿ ವ್ಯಾಪ್ತಿಗೆ ತರುವಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯಗಳು ಒಮ್ಮತಕ್ಕೆ ಬರಲು ವಿಫಲವಾಗಿವೆ. ಪೆಟ್ರೋಲಿಯಂ ಉತ್ಪನ್ನಗಳಿಂದ ರಾಜ್ಯ ಮತ್ತು ಕೇಂದ್ರಕ್ಕೆ ಭರಪೂರ ತೆರಿಗೆಯ ಲಾಭ ದಕ್ಕುತ್ತಿರುವುದರಿಂದ ಇದನ್ನು ಬಿಟ್ಟುಕೊಡಲು ರಾಜ್ಯಗಳು ಕೂಡ ಒಪ್ಪುತ್ತಿರಲಿಲ್ಲ.
ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಯಡಿ ಏಕರೂಪದ ತೆರಿಗೆಗೆ ಒಳಪಡಿಸುವ ಪ್ರಸ್ತಾವಕ್ಕೆ ಮೊದಲಿನಿಂದಲೂ ಕೆಲವು ರಾಜ್ಯಗಳು ವಿರೋಧ ಸೂಚಿಸಿದ್ದವು. ಒಂದೂವರೆ ವರ್ಷಗಳ ನಂತರ ಜಿಎಸ್ಟಿ ಮಂಡಳಿಯ ಸಭೆ ಇಂದು ಲಕ್ನೋದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದಿತ್ತು. ಸಭೆಯಲ್ಲಿ ಕೆಲವು ಔಷಧಿಗಳಿಗೆ ರಿಯಾಯ್ತಿ ನೀಡಿದರೆ, ಕೆಲವು ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ತೆರಿಗೆ ವಿಧಿಸಲಾಗಿದೆ.

ಆದರೆ, ಪೆಟ್ರೋಲ್, ಡೀಸೆಲ್ ಬಗ್ಗೆ ಅಭಿಪ್ರಾಯ ನೀಡುವುದಕ್ಕೆ ರಾಜ್ಯಗಳು ವಿರೋಧ ಸೂಚಿಸಿವೆ. ಹಾಗಾಗಿ, ಈ ಸಭೆಯಲ್ಲಿ ಇದರ ಬಗ್ಗೆ ಚರ್ಚೆಯೇ ಬೇಡವೆಂದು ಸಚಿವೆ ನಿರ್ಮಲಾ ಸೀತಾರಾಮನ್ ನಿರ್ಧಾರಕ್ಕೆ ಬಂದಿದ್ದಾರೆ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ ಅನ್ನುವ ನಿರೀಕ್ಷೆ ದೇಶಾದ್ಯಂತ ಇತ್ತು. ಕಳೆದ ನಾಲ್ಕು ತಿಂಗಳಿಂದ ಒಂದೇ ಸಮನೆ ತೈಲ ದರ ಏರಿಕೆ ಆಗಿದ್ದರಿಂದ ತೆರಿಗೆಯನ್ನು ಇಳಿಸಲೇಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು. ಜನ ಸಾಮಾನ್ಯರಿಗೂ ತೈಲ ದರ ಭಾರೀ ಹೊರೆ ಆಗಿರುವುದರಿಂದ ತೆರಿಗೆ ಇಳಿಸುವಂತೆ ಆಗ್ರಹ ಬಂದಿತ್ತು.
ಈ ನಡುವೆ, ಕೇರಳ ಹೈಕೋರ್ಟಿನಲ್ಲಿ ಇದೇ ವಿಚಾರದ ಅರ್ಜಿಯಲ್ಲಿ ವಿಚಾರಣೆ ನಡೆದು ಕೇಂದ್ರ ಸರಕಾರಕ್ಕೆ ನೋಟೀಸ್ ನೀಡಲಾಗಿತ್ತು. ಜಿಎಸ್ಟಿ ವ್ಯಾಪ್ತಿಗೆ ಯಾಕೆ ತರಲಾಗಿಲ್ಲ ಎಂದು ಪ್ರಶ್ನಿಸಿ, ಆರು ವಾರದಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿತ್ತು.
Finance Minister Nirmala Sitharaman is chairing the 45th Goods and Services Tax (GST) Council meeting today in Lucknow. The crucial meeting is expected to review over 50 items in the form of rate changes and clarifications.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm