ಬ್ರೇಕಿಂಗ್ ನ್ಯೂಸ್
16-09-21 05:21 pm Headline Karnataka News Network ದೇಶ - ವಿದೇಶ
ಅಹ್ಮದಾಬಾದ್, ಸೆ.16: ಗುಜರಾತ್ ನಲ್ಲಿ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ವಿಜಯ್ ರೂಪಾನಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದ ಬಿಜೆಪಿ, ಇದೀಗ ಅಲ್ಲಿ ಈ ಹಿಂದೆ ಇದ್ದ ಸಚಿವರಿಗೂ ಶಾಕ್ ನೀಡಿದೆ. ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂಪುಟದಲ್ಲಿ ಪೂರ್ತಿಯಾಗಿ ಹೊಸಬರನ್ನೇ ಸಚಿವರನ್ನಾಗಿ ಮಾಡಲಾಗಿದೆ.
ಈ ಹಿಂದೆ ವಿಧಾನಸಭೆ ಸ್ಪೀಕರ್ ಆಗಿದ್ದ ರಾಜೇಂದ್ರ ತ್ರಿವೇದಿ, ಗುಜರಾತ್ ಘಟಕದ ಮಾಜಿ ಅಧ್ಯಕ್ಷ ಜಿತು ವಘಾನಿ ಸೇರಿದಂತೆ 24 ಶಾಸಕರು ನೂತನ ಮಂತ್ರಿಮಂಡಲದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಂದಿನ ವಿಜಯ್ ರೂಪಾನಿ ಸಚಿವ ಸಂಪುಟದಲ್ಲಿದ್ದ ಯಾರಿಗೂ ಸಚಿವ ಸ್ಥಾನ ದೊರೆತಿಲ್ಲ.



ರಾಜ್ಯಪಾಲ ದೇವವ್ರತ್ ಆಚಾರ್ಯ ಅವರು ಹತ್ತು ಸಂಪುಟ ದರ್ಜೆ ಸಚಿವರಿಗೆ ಮತ್ತು 14 ಮಂದಿ ಸಹಾಯಕ ಖಾತೆ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಗುಜರಾತ್ ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಭೂಪೇಂದ್ರ ಪಟೇಲ್ ಮತ್ತು ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಳೆದ ಬಾರಿ ಡಿಸಿಎಂ ಆಗಿದ್ದ ಮತ್ತು ಸಿಎಂ ಆಗುತ್ತಾರೆಂದು ಹೆಸರು ಕೇಳಿಬಂದಿದ್ದ ನಿತಿನ್ ಪಟೇಲ್ ಸಚಿವ ಸ್ಥಾನವನ್ನೇ ಪಡೆದಿಲ್ಲ.
ಕಳೆದ ಬಾರಿಯ ಅಷ್ಟೂ ಸಚಿವರು ಮತ್ತು ಇಡೀ ಬಿಜೆಪಿ ರಾಜ್ಯ ಘಟಕಕ್ಕೆ ಶಾಕ್ ನೀಡಿದ ರೀತಿಯಲ್ಲಿ ಹೊಸ ಸರಕಾರವನ್ನೇ ಬಿಜೆಪಿ ಅಸ್ತಿತ್ವಕ್ಕೆ ತಂದಿದ್ದು, ಗುಜರಾತ್ ಪಾಲಿಗೆ ದೊಡ್ಡ ಬೆಳವಣಿಗೆಯೇ ಸರಿ.
The new cabinet of Gujarat's Chief Minister Bhupendra Patel was sworn in on Thursday. Over 20 MLAs including Nareshbhai Patel, Manisha Vakil and Kiritsinh Jitubha Rana took oath as ministers.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm