ಬ್ರೇಕಿಂಗ್ ನ್ಯೂಸ್
15-09-21 08:53 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ.15 : ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಕಲಿ ಹಿಂದೂಗಳು ಎಂದು ಜರೆದಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ ನವರು ನಕಲಿ ಹಿಂದೂಗಳು. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಲಕ್ಷ್ಮಿ ದೇವಿ ಒಬ್ಬರ ಗುರಿ ಸಾಧಿಸಲು ಸಹಾಯ ಮಾಡುತ್ತಾರೆ. ದುರ್ಗಾ ದೇವಿಯು ಎಲ್ಲರ ರಕ್ಷಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದ ರಾಹುಲ್, ಅವರು ಯಾವ ರೀತಿಯ ಹಿಂದುಗಳು? ಅವರು ನಕಲಿ ಹಿಂದುಗಳು. ಅವರು ಹಿಂದೂ ಧರ್ಮವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ಧರ್ಮದ ದಲ್ಲಾಳಿಗಳು. ಆದರೆ ಅವರು ಹಿಂದುಗಳೇ ಅಲ್ಲ ಎಂದು ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸ್ಥಾಪನಾ ದಿನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸಿದ್ಧಾಂತವು ಬಿಜೆಪಿ-ಆರ್ಎಸ್ಎಸ್ಗೆ ಸಂಪೂರ್ಣ ವಿರುದ್ಧವಾಗಿದೆ. ಮತ್ತು ಎರಡು ಸಿದ್ಧಾಂತಗಳಲ್ಲಿ ಒಂದು ಮಾತ್ರ ದೇಶವನ್ನು ಆಳಬಲ್ಲದು ಎಂದರು.
ಮಹಾತ್ಮ ಗಾಂಧಿ ಅವರ ಚಿತ್ರವನ್ನು ನೀವು ನೋಡಿದರೆ, ಅವರ ಸುತ್ತಲೂ 2-3 ಮಹಿಳೆಯರು ಇರುವುದನ್ನು ಕಾಣುತ್ತೀರಿ. ಮೋಹನ್ ಭಾಗವತ್ (ಆರೆಸ್ಸೆಸ್ ಮುಖ್ಯಸ್ಥ) ಹೀಗೆ ಯಾವುದಾದರೂ ಮಹಿಳೆ ಜತೆಗೆ ಇರುವ ಚಿತ್ರವನ್ನು ನೋಡಿದ್ದೀರಾ? ಇದು ಏಕೆಂದರೆ, ಅವರ ಸಂಘಟನೆಯು ಮಹಿಳೆಯರನ್ನು ಶೋಷಿಸುತ್ತದೆ. ಮತ್ತು ನಮ್ಮ ಸಂಘಟನೆ ಮಹಿಳೆಯರಿಗೆ ವೇದಿಕೆ ಕಲ್ಪಿಸುತ್ತದೆ. ಮೋದಿ- ಆರೆಸ್ಸೆಸ್ ಯಾವುದೇ ಮಹಿಳೆಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಮಾಡಿತ್ತು ಎಂದಿದ್ದಾರೆ.
ತಮ್ಮದು ಹಿಂದುಗಳ ಪಕ್ಷ ಎಂದು ಬಿಜೆಪಿ ಹಾಗೂ ಆರೆಸ್ಸೆಸ್ ಹೇಳುತ್ತಿವೆ. ಕಳೆದ 100-200 ವರ್ಷಗಳಲ್ಲಿ ಹಿಂದು ಧರ್ಮವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಮತ್ತು ಅಭ್ಯಾಸ ಮಾಡಿದವರೆಂದರೆ ಅದು ಮಹಾತ್ಮ ಗಾಂಧಿ. ನಾವು ಅದನ್ನು ಗುರುತಿಸಿದ್ದೇವೆ ಎಂದಿದ್ದಾರೆ.
ಮಹಾತ್ಮ ಗಾಂಧಿ ಅವರು ತಮ್ಮ ಇಡೀ ಜೀವನವನ್ನು ಹಿಂದೂ ಧರ್ಮಕ್ಕಾಗಿ ಮುಡಿಪಾಗಿಟ್ಟಿದ್ದರೆ, ಗೋಡ್ಸೆ ಏಕೆ ಅವರನ್ನು ಕೊಲ್ಲಬೇಕಿತ್ತು? ಇದು ಒಂದು ವಿರೋಧಾಭಾಸ. ಇದರ ಬಗ್ಗೆ ನೀವು ಯೋಚಿಸಬೇಕು ಎಂದು ಹೇಳಿದ್ದಾರೆ.
Congress leader Rahul Gandhi on Wednesday attacked the BJP-RSS, alleging that they were "fake Hindus" who use religion for their benefit. Addressing the foundation day of the All India Mahila Congress, Gandhi said that the ideology of the Congress was completely opposite of the BJP-RSS and only one of the two ideologies can rule the country.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm