ಬ್ರೇಕಿಂಗ್ ನ್ಯೂಸ್
08-09-20 07:10 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆಪ್ಟೆಂಬರ್ 8: ಪಬ್ ಜಿ ವಿಡಿಯೋ ಗೇಮ್ ಹುಚ್ಚು ಕೆಲವರಿಗೆ ಅದೆಷ್ಟು ಹಚ್ಚಿಕೊಂಡಿತ್ತು ಅಂದ್ರೆ, ಎಷ್ಟು ಹಣ ಖಾಲಿಯಾದ್ರೂ ಹಣದ ಬೆಲೆ ಗೊತ್ತಾಗ್ತಾನೇ ಇರ್ತಿರಲಿಲ್ಲ. ಇಲ್ಲೊಬ್ಬ 15 ವರ್ಷದ ಹುಡುಗ ಪಬ್ ಜಿ ಆಟವಾಡುತ್ತಾ ತನ್ನ ಅಜ್ಜನ ಖಾತೆಯಲ್ಲಿದ್ದ ಎರಡು ಲಕ್ಷ ರೂಪಾಯಿ ಪಿಂಚಣಿ ಹಣವನ್ನೇ ಖಾಲಿ ಮಾಡಿದ್ದಾನೆ.
65 ವರ್ಷದ ವೃದ್ಧ ವ್ಯಕ್ತಿಗೆ ತನ್ನ ಮೊಬೈಲ್ ಬಳಸುವುದು ಅಷ್ಟಾಗಿ ಗೊತ್ತಿರಲಿಲ್ಲ. ಪೇಟಿಎಂ ಇತ್ತಾದರೂ ಅವನ್ನೆಲ್ಲ ಆಪರೇಟ್ ಮಾಡುತ್ತಿದ್ದುದು ಮೊಮ್ಮಕ್ಕಳೇ ಆಗಿದ್ದರು. ಸಣ್ಣ ಪುಟ್ಟ ಏನಾದ್ರೂ ತಗೊಳ್ಳೋದಕ್ಕೆ ಅಜ್ಜನ ಪೇಟಿಎಂ ನಿಂದಲೇ ಮಾಡಿಕೊಳ್ತಿದ್ದರು. ಹಾಗಾಗಿ, ಅಜ್ಜನೂ ತನ್ನ ಖಾತೆಯ ದುಡ್ಡಿನ ಬಗ್ಗೆ ಚಿಂತೆ ಮಾಡಿರಲಿಲ್ಲ. ಮೊನ್ನೆ ಒಂದು ದಿನ ಅಜ್ಜನ ಮೊಬೈಲಿಗೆ ಮೆಸೇಜ್ ಬಂದಿತ್ತು. ನಿಮ್ಮ ಖಾತೆಯಲ್ಲಿ ರೂಪಾಯಿ 275 ಮಾತ್ರ ಇದ್ದು ಬ್ಯಾಲೆನ್ಸ್ ಎಮೌಂಟ್ ಉಳಿಸುವಂತೆ ಸೂಚನೆ ನೀಡಿತ್ತು. ಅಜ್ಜನಿಗೆ ಇದನ್ನು ನೋಡಿ ಶಾಕ್ ಆಗಿತ್ತು. ಎರಡು ಲಕ್ಷಕ್ಕೂ ಹೆಚ್ಚು ಹಣ ಇತ್ತು. ಏನಾಯ್ತು ಅಂತ ಗಾಬರಿಗೊಂಡು ಏನೋ ಕಿತಾಪತಿ ಆಗಿರಬೇಕು ಅಂತ ಪೊಲೀಸ್ ದೂರು ಕೊಟ್ಟರು. ಪೊಲೀಸರು ಅಜ್ಜನ ದೂರನ್ನು ತಗೊಂಡು ಚೆಕ್ ಮಾಡಿದ್ರು. ತಪಾಸಣೆ ಮಾಡಿದಾಗ, ಪೇಟಿಎಂ ಮೂಲಕವೇ ಹಣ ಖಾಲಿಯಾಗಿದ್ದು ಪೊಲೀಸರಿಗೆ ಗೊತ್ತಾಗಿತ್ತು. ಅಲ್ಲದೆ, ಅಜ್ಜನ ಅಕೌಂಟ್ ಬಗ್ಗೆ ತಿಳಿದುಕೊಂಡಿದ್ದ 15 ವರ್ಷದ ಮೊಮ್ಮಗನದ್ದೇ ಕಿತಾಪತಿ ಅನ್ನುವುದೂ ಪೊಲೀಸರಿಗೆ ಗೊತ್ತಾಯ್ತು.

ಅಲ್ಲೀವರೆಗೂ ತನಗೇನು ಗೊತ್ತೇ ಇಲ್ಲ ಎಂದು ನಾಟಕ ಆಡುತ್ತಿದ್ದ ಹುಡುಗನೂ ಪೊಲೀಸರಲ್ಲಿ ಸತ್ಯ ಬಾಯಿಬಿಟ್ಟ. ಕೆಲವು ತಿಂಗಳಿಂದ ಪಬ್ ಜಿ ಆಡುತ್ತಿದ್ದೆ. ಏಪ್ ಡೌನ್ಲೋಡ್ ಮಾಡಿಕೊಳ್ಳಲು ಅಜ್ಜನ ಪೇಟಿಎಂ ಯೂಸ್ ಮಾಡ್ತಿದ್ದೆ. ಆನಂತ್ರ ಗೆಳೆಯನೂ ಇದೇ ಪೇಟಿಎಂ ಬಳಕೆ ಮಾಡುತ್ತಿದ್ದರು. ಹುಡುಗನ ಗೆಳೆಯ 23 ವರ್ಷದ ಪಂಕಜ್ ಕುಮಾರ್ ಎನ್ನುವಾತ ಒಂದಷ್ಟು ಹಣವನ್ನು ಆತನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದೂ ವಿಚಾರಣೆಯಲ್ಲಿ ತಿಳಿದುಬಂತು. ಅಷ್ಟೇ ಅಲ್ಲ, ಪೇಟಿಎಂ ಯೂಸ್ ಮಾಡಿ, ಬಳಿಕ ಒಟಿಪಿಯನ್ನು ಡಿಲೀಟ್ ಮಾಡ್ತಿದ್ದೆ ಎನ್ನುವುದನ್ನೂ ಒಪ್ಪಿಕೊಂಡಿದ್ದಾನೆ. ಮೊಮ್ಮಗನ ನಂಬಿದ ಅಜ್ಜ ತನ್ನ ತಲೆಗೆ ತಾನೇ ಚಪ್ಪಡಿ ಕಲ್ಲು ಹಾಕ್ಕೊಂಡಿದ್ದ. ಪಬ್ ಜಿ ಲೋಕದಲ್ಲಿ ಮುಳುಗಿದ್ದ ಹುಡುಗ ಹಣದ ಬೆಲೆಯನ್ನೂ ಅರಿಯದೇ ಹೋಗಿದ್ದ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm