ಬ್ರೇಕಿಂಗ್ ನ್ಯೂಸ್
02-09-21 11:29 am Headline Karnataka News Network ದೇಶ - ವಿದೇಶ
ಲಕ್ನೋ, ಸೆ.2: ಗೋವು ಭಾರತೀಯ ಸಂಸ್ಕೃತಿಯ ಒಂದು ಭಾಗ. ಅವುಗಳಿಗೆ ಮೂಲಭೂತ ಹಕ್ಕನ್ನು ನೀಡಬೇಕು. ಅಷ್ಟೇ ಅಲ್ಲಾ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಉತ್ತರ ಪ್ರದೇಶದಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯದಡಿ ಬಂಧಿತನಾಗಿದ್ದ ವ್ಯಕ್ತಿಯೊಬ್ಬ ಜಾಮೀನು ಕೋರಿ ಸಲ್ಲಿಸಿದ್ದ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಅಭಿಪ್ರಾಯ ನೀಡಿದೆ. ಜಬ್ ಗಾಯೆ ಕಲ್ಯಾಣ್ ಹೋಗಾ, ತಬ್ ದೇಶ್ ಕಾ ಕಲ್ಯಾಣ್ ಹೋಗಾ(ಗೋವಿನ ರಕ್ಷಣೆ ಯಾವಾಗ ಆಗುತ್ತದೋ ಆವಾಗ ದೇಶದ ಕಲ್ಯಾಣವೂ ಆಗುತ್ತದೆ) ಎಂದು ಕೋರ್ಟ್ ಹೇಳಿದೆ.
ಗೋವಿನ ರಕ್ಷಣೆ ಮಾಡುವುದು ಯಾವುದೇ ಒಂದು ಸಮುದಾಯದ ಹೊಣೆಯಲ್ಲ. ಗೋವು ಭಾರತೀಯರ ಸಂಸ್ಕೃತಿಯಲ್ಲಿ ಅಡಕವಾಗಿದೆ. ಗೋವನ್ನು ರಕ್ಷಣೆ ಮಾಡುವುದು ಪ್ರತಿ ಭಾರತೀಯನ ಕರ್ತವ್ಯ. ಅದಕ್ಕೆ ಮತ- ಧರ್ಮದ ಭೇದ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಶೇಖರ್ ಕುಮಾರ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ನೀಡಿದ್ದು, ಗೋವಿನ ರಕ್ಷಣೆಗಾಗಿ ಭಾರತದ ಸಂಸತ್ತು ನಿರ್ಣಯ ಸ್ವೀಕರಿಸಬೇಕು. ರಾಷ್ಟ್ರೀಯ ಪ್ರಾಣಿಯೆಂದು ಗುರುತಿಸಿ, ಅದರ ರಕ್ಷಣೆಗೆ ಮೂಲಭೂತ ಹಕ್ಕು ನೀಡಬೇಕು. ಗೋವಿನ ಹತ್ಯೆ ಅಥವಾ ಹಿಂಸೆ ಮಾಡುವುದರ ವಿರುದ್ಧ ಮಸೂದೆ ತರಬೇಕು ಎಂದು ಹೇಳಿದೆ.
ಗೋಹತ್ಯೆ ನಿಷೇಧ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಜಾವೇದ್ ಎಂಬವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಜಾಮೀನು ಅರ್ಜಿಯನ್ನು ನಿರಾಕರಿಸಿ, ಭಾರತದಲ್ಲಿ ಮಾತ್ರ ವಿವಿಧ ಮತ ಮತ್ತು ಧರ್ಮದ ಜನರು ವಾಸಿಸುತ್ತಾರೆ. ಆದರೆ, ಅವರೆಲ್ಲರ ನಂಬಿಕೆ ಬೇರೆ ಬೇರೆ ಇದ್ದರೂ ದೇಶಕ್ಕಾಗಿ ಎಲ್ಲರ ಅಭಿಪ್ರಾಯ ಒಂದೇ ಇರುತ್ತದೆ ಎಂದು ಹೇಳಿದರು.
Cow is part of India's culture, should be given fundamental rights and declared national animal, the Allahabad High Court observed on Wednesday while denying bail to a person charged under the Uttar Pradesh Prevention of Cow Slaughter Act.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm