ಬ್ರೇಕಿಂಗ್ ನ್ಯೂಸ್
01-09-21 09:17 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆಪ್ಟೆಂಬರ್ 01: ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ರಾಜಧಾನಿ ದೆಹಲಿ ಅಕ್ಷರಶಃ ಮಳೆ ನೀರಲ್ಲಿ ತೊಯ್ದು ತೊಪ್ಪೆಯಾಗಿದೆ. ಬುಧವಾರ ಸುರಿದ ವಿಪರೀತ ಮಳೆಯಿಂದ ಬೆಳಗಿನ ಜನ ಓಡಾಟದ ಅವಧಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ನೀರು ನುಗ್ಗಿದ ಪರಿಣಾಮ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ರಾಜಧಾನಿ ಹಾಗೂ ನೆರೆಯ ಗುರ್ಗಾಂವ್ ಹಾಗೂ ನೋಯ್ಡಾಗಳಲ್ಲಿನ ಅನೇಕ ಭಾಗಗಳಲ್ಲಿ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.

ಫ್ಲೈ ಓವರ್ಗಳು ನದಿಯಂತಾಗಿ ರಭಸದಿಂದ ನೀರು ಸಾಗಿಸುತ್ತಿದ್ದರೆ, ಅನೇಕ ರಸ್ತೆಗಳು, ವಸತಿ ಪ್ರದೇಶಗಳು ಕೆರೆಯಂತಾಗಿದ್ದವು. ಮನೆಗಳ ಒಳಗೆ ನೀರು ನುಗ್ಗಿದ ಪರಿಣಾಮ ಜನರು ಏನು ಮಾಡುವುದೆಂದು ತೋಚದೆ ದಿಕ್ಕೆಟ್ಟರು. ಮನೆ, ಅಂಗಡಿಗಳಿಂದ ಬೆಲೆ ಬಾಳುವ ವಸ್ತುಗಳು ನೀರು ಪಾಲಾಗಿವೆ. ಪೀಠೋಪಕರಣ, ಎಲೆಕ್ಟ್ರಾನಿಕ್ಸ್ ವಸ್ತುಗಳು ಮುಂತಾದವು ನೀರು ನುಗ್ಗಿ ಹಾಳಾಗಿವೆ. ಕಟ್ಟಡದೊಳಗೆ ತುಂಬಿದ ಕೆಸರು ನೀರನ್ನು ಹೊರಹಾಕಲು ಹರಸಾಹಸ ಮಾಡುವಂತಾಗಿದೆ.






ರಾಜ್ಘಾಟ್ಗೆ ತೆರಳುವ ಯಮುನಾ ಸೇತುವೆ ಪ್ರದೇಶದಲ್ಲಿ ನೀರು ತುಂಬಿದ ಪರಿಣಾಮ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದ್ದು, ಬಹಳ ನಿಧಾನಗತಿಯ ಸಂಚಾರ ಕಂಡುಬಂದಿದೆ.
1963ರ ಸೆಪ್ಟೆಂಬರ್ 16ರಂದು ಸುರಿದ 172.6 ಮಿಮೀ ಮಳೆ ಸಾರ್ವಕಾಲಿಕ ದಾಖಲೆಯಾಗಿದೆ. ಬುಧವಾರ ಬೆಳಿಗ್ಗೆ 8.30ರ ಬಳಿಕ ಕೇವಲ ಮೂರು ಗಂಟೆಯಲ್ಲಿ 75.6 ಮಿಮೀ ಮಳೆಯಾಗಿದೆ. ಇಡೀ ತಿಂಗಳ ವಾಡಿಕೆ ಮಳೆ ಮೊದಲ ಎರಡು ದಿನಗಳಲ್ಲಿಯೇ ಸುರಿದಿದೆ ಎಂದು ಐಎಂಡಿ ತಿಳಿಸಿದೆ.
ಗುರ್ಗಾಂವ್ನಲ್ಲಿ ಕೂಡ ಇದೇ ರೀತಿಯ ಸನ್ನಿವೇಶ ಉಂಟಾಗಿದೆ. ಇಲ್ಲಿ ಕಳೆದ 24 ಗಂಟೆಗಳಲ್ಲಿ 64.2 ಮಿಮೀ ಮಳೆ ಸುರಿದಿದೆ. ರಸ್ತೆಗಳು, ಮಾರುಕಟ್ಟೆಗಳು ಜಲಾವೃತವಾಗಿವೆ. ರಾಜಧಾನಿಯಲ್ಲಿ 2002ರ ಸೆಪ್ಟೆಂಬರ್ 13ರಂದು 126.8 ಮಿಮೀ ಮಳೆ ಸುರಿದಿತ್ತು.
Delhi on Wednesday received the highest single-day rain in September in 19 years. Visuals of inundated streets, huge traffic jams, and even boats on the streets, flooded social media.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm