ಬ್ರೇಕಿಂಗ್ ನ್ಯೂಸ್
17-08-21 10:29 pm Headline Karnataka Newz ದೇಶ - ವಿದೇಶ
ನವದೆಹಲಿ, ಆ.17: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ಮಧ್ಯೆ ಜನರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಅಲ್ಲಿನ ಮೂಲ ನಿವಾಸಿಗಳು ಸೇರಿ ಮುಸ್ಲಿಮರು, ಇತರ ಧರ್ಮೀಯರು ಮತ ಭೇದ ಇಲ್ಲದೆ ದೇಶ ಬಿಟ್ಟು ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ, ರಾಜಧಾನಿ ಕಾಬೂಲ್ನಲ್ಲಿರುವ ಹಿಂದು ದೇವಾಲಯದ ಅರ್ಚಕರೊಬ್ಬರು ಮಾತ್ರ ಏನೇ ಆದ್ರೂ ದೇವಸ್ಥಾನ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ರತನ್ ನಾಥ್ ಎಂಬ ದೇವಸ್ಥಾನದ ಈ ಅರ್ಚಕನ ಹೆಸರು ಪಂಡಿತ್ ರಾಜೇಶ್ ಕುಮಾರ್. ಭಾರತಕ್ಕೆ ಹೋಗಿ ನೆಲಸುವಂತೆ ಹೇಳಿ, ಎಲ್ಲಾ ಖರ್ಚುಗಳನ್ನ ನೋಡಿಕೊಳ್ಳುವುದಾಗಿ ಸ್ನೇಹಿತರು ಹೇಳಿದರೂ ಇವರು ಮಾತ್ರ ತಾನು ಎಲ್ಲಿಯೂ ಹೋಗುವುದಿಲ್ಲ ಎನ್ನುತ್ತಿದ್ದಾರೆ.
ನನ್ನ ಪೂರ್ವಜರ ಕಾಲದಿಂದ ನೂರಾರು ವರ್ಷಗಳಿಂದ ಇದೇ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ತಾಲಿಬಾನಿಗರು ನನ್ನನ್ನು ಕೊಂದರೂ, ಅದನ್ನ ಸೇವೆ ಎಂದೇ ಪರಿಗಣಿಸುತ್ತೇನೆ. ನಾನು ಈ ದೇವಸ್ಥಾನವನ್ನು ಬಿಟ್ಟು ಬರುವುದಿಲ್ಲ ಎಂದು ಪಂಡಿತ್ ರಾಜೇಶ್ ಕುಮಾರ್ ಹೇಳಿದ್ದಾಗಿ ಭಾರದ್ವಜ್ ಎಂಬವರು ಟ್ವೀಟ್ ಮಾಡಿದ್ದಾರೆ.
ರಾಜೇಶ್ ಕುಮಾರ್ ಆಫ್ಘಾನಿಸ್ತಾನದಲ್ಲಿರುವ ಏಕೈಕ ಹಿಂದೂ ಮಂದಿರದ ಅರ್ಚಕ. ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾದು ಸಿಖ್ ಮತ್ತು ಹಿಂದುಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಆಫ್ಘಾನಿಸ್ತಾನದಲ್ಲಿ ಸಿಖ್ ಮತ್ತು ಹಿಂದುಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸಹಾಯ ಮಾಡಲು ಭಾರತ ಸರ್ಕಾರ ಮುಂದಾಗಿದೆ. ಆಫ್ಘಾನ್ನಿಂದ ಹೊರಬರಲು ಬಯಸುವ ಜನರಿಗೆ ಸೂಕ್ತ ನೆರವು ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಉಳಿದುಕೊಂಡಿರುವ ಸಿಖ್ ಮತ್ತು ಹಿಂದು ಸಮುದಾಯದ ಹೆಚ್ಚಿನ ಮಂದಿ ಕಾಬೂಲ್ ನಗರದಲ್ಲಿದ್ದಾರೆ. ಕಾಬೂಲ್ ನಗರ ತಾಲಿಬಾನ್ ವಶವಾಗುತ್ತಿದ್ದಂತೆ ಈ ಪೈಕಿ ಅನೇಕರು ಸಿಖ್ ಗುರುದ್ವಾರ ಒಂದರಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ 320 ಮಂದಿ ಇದ್ದಾರೆಂದು ಹೇಳಲಾಗುತ್ತಿದೆ.
With chaos unfolding in Kabul, thousands of people are fleeing Afghanistan, fearful of what lies ahead in the second Taliban regime. Heart-wrenching visuals from the airport in the capital city show people crowding airplanes leaving the war-torn country. While many minorities are fleeing Afghanistan fearing atrocities by the incoming Taliban regime, few are choosing to stay and face whatever fate comes their way. One such person is the last Hindu priest in the country, Pt. Rajesh Kumar of the Rattan Nath temple in Kabul. Several of his Hindu acquaintances have reportedly offered to arrange for Pandit Kumar to leave Afghanistan. But the loyal priest is preferring to stay put and keep the prayer bells in his temple ringing for as long as possible.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 03:30 pm
HK News Staffer
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm