ಬ್ರೇಕಿಂಗ್ ನ್ಯೂಸ್
17-08-21 03:00 pm Headline Karnataka News Network ದೇಶ - ವಿದೇಶ
ಕಾಬೂಲ್, ಆಗಸ್ಟ್ 17: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಯಾವ ಪರಿಸ್ಥಿತಿ ಎದುರಾಗಿದೆ ಅಂದ್ರೆ, ಅಲ್ಲಿನ ಜನ ಭೀತಿಯಿಂದ ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಇದಕ್ಕಾಗಿ ರಾಜಧಾನಿ ಕಾಬೂಲ್ ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಸಿಕ್ಕ ಸಿಕ್ಕ ವಿಮಾನಗಳನ್ನು ಏರುತ್ತಿದ್ದಾರೆ. ಬಸ್ ಏರಿದಂತೆ ವಿಮಾನಗಳ ರೆಕ್ಕೆಯಲ್ಲಿ ಹತ್ತಿ ಕುಳಿತು ಕೆಳಗೆ ಬೀಳುತ್ತಿರುವ ವಿಡಿಯೋ ವೈರಲ್ ಆಗಿದ್ದವು. ಇದೀಗ ಅಲ್ಲಿನ ಒಟ್ಟು ಚಿತ್ರಣದ ಬಗ್ಗೆ ಸ್ಯಾಟಲೈಟ್ ಫೋಟೋಗಳು ಲಭ್ಯವಾಗಿವೆ.
ಜನರು ಆತಂಕಗೊಂಡು ಕಾಬೂಲಿನ ಹಮೀದ್ ಕರ್ಜಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿರುವುದು, ವಿಮಾನಗಳ ಹಿಂದೆ ಓಡುತ್ತಿರುವ ಸ್ಯಾಟಲೈಟ್ ಚಿತ್ರಗಳನ್ನು ಮಾಕ್ಸರ್ ಟೆಕ್ನಾಲಜೀಸ್ ಎನ್ನುವ ಸಂಸ್ಥೆಯೊಂದು ಬಿಡುಗಡೆ ಮಾಡಿದೆ. ಭೀತಿಯಿಂದ ಒಳಗೆ ಓಡಿಬರುತ್ತಿರುವ ಜನರನ್ನು ನಿಯಂತ್ರಣ ಮಾಡಲು ಅಲ್ಲಿನ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಏರ್ಪೋರ್ಟ್ ಹೊರಗಡೆ ಭಾರೀ ಸಂಖ್ಯೆಯಲ್ಲಿ ಕಾರುಗಳು ಮುತ್ತಿಕೊಂಡಿದ್ದು ಒಳಗೆ ಬರಲು ಕ್ಯೂ ನಿಂತಿವೆ. ಇದೇ ವೇಳೆ, ಕಾರನ್ನು ರಸ್ತೆಯಲ್ಲೇ ನಿಲ್ಲಿಸಿ ಜನರು ಟರ್ಮಿನಲ್ ಒಳಗೆ ನುಗ್ಗುತ್ತಿದ್ದಾರೆ. ಅದಲ್ಲದೆ, ರಸ್ತೆಯಲ್ಲಿ ಕಾರುಗಳ ನಡುವೆಯೇ ಜನರು ಓಡಿಕೊಂಡು ಬರುತ್ತಿರುವುದು ಚಿತ್ರದಲ್ಲಿ ಸೆರೆಯಾಗಿದೆ.
ಏರ್ಪೋರ್ಟ್ ಟರ್ಮಿನಲ್ ಒಳಗೆ ವಿಮಾನ ಲ್ಯಾಂಡ್ ಆಗುವಲ್ಲಿ ಜನರ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ. ಆದರೆ, ಟರ್ಮಿನಲ್ ಒಳಗಡೆಯೇ ಸಾವಿರಾರು ಜನರು ಸೇರಿರುವುದು ಸ್ಯಾಟಲೈಟ್ ಚಿತ್ರದಲ್ಲಿ ಸೆರೆಯಾಗಿದೆ.
Satellite images of the Kabul airport have captured how the desperate Afghans scrambled for rescue as chaos unfolded in the country.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 12:58 pm
Mangalore Correspondent
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm