ಬ್ರೇಕಿಂಗ್ ನ್ಯೂಸ್
06-09-20 11:53 am Headline Karnataka News Network ದೇಶ - ವಿದೇಶ
ಲಕ್ನೋ, ಸೆಪ್ಟೆಂಬರ್ 5: ಅಯೋಧ್ಯೆಯ ಧನ್ನೀಪುರ್ ನಲ್ಲಿ ನಿರ್ಮಾಣ ಆಗಲಿರುವ ಮಸೀದಿ ಸಮುಚ್ಚಯ ಮತ್ತಿತರ ಸಾರ್ವಜನಿಕ ಸೌಲಭ್ಯಗಳಿಗೆ ಶಿಲಾನ್ಯಾಸ ನೆರವೇರಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲಾಗಿದೆ.
ಈ ವಿಚಾರವನ್ನು ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ರಚಿಸಿರುವ ಟ್ರಸ್ಟ್ ಪದಾಧಿಕಾರಿಗಳು ಖಚಿತಪಡಿಸಿದ್ದಾರೆ. ಐದು ಎಕರೆ ಜಾಗದಲ್ಲಿ ಮಸೀದಿ, ಆಸ್ಪತ್ರೆ, ಮ್ಯೂಸಿಯಂ ಮತ್ತಿತರ ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸಲಾಗುವುದು. ಸಾರ್ವಜನಿಕ ಉಪಯೋಗದ ಕಾಮಗಾರಿಗಳಿಗೆ ಸಿಎಂ ಯೋಗಿ ಶಿಲಾನ್ಯಾಸ ಮಾಡಲಿದ್ದಾರೆಂದು ಟ್ರಸ್ಟ್ ವಕ್ತಾರ ಅಥರ್ ಹುಸೇನ್ ತಿಳಿಸಿದ್ದಾರೆ. ಸಿಎಂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮಾತ್ರ ಅಲ್ಲ, ಸಾರ್ವಜನಿಕ ಸೌಲಭ್ಯದ ಯೋಜನೆಗಳಿಗೆ ಮಾರ್ಗದರ್ಶನವನ್ನೂ ಮಾಡಲಿದ್ದಾರೆ ಎಂದು ಹುಸೇನ್ ತಿಳಿಸಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಮಸೀದಿಗೂ ಶಿಲಾನ್ಯಾಸ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ, ಇಸ್ಲಾಂ ಪದ್ಧತಿಯ ಪ್ರಕಾರ ಮಸೀದಿಗೆ ಶಿಲಾನ್ಯಾಸ ನೆರವೇರಿಸುವ ಕ್ರಮ ಇಲ್ಲ. ಹನಫಿ, ಹನ್ ಬಲಿ, ಶಫಿ ಮತ್ತು ಮಾಲಿಕಿ ಎನ್ನುವ ನಾಲ್ಕು ನಂಬಿಕೆಗಳಲ್ಲೂ ಶಿಲಾನ್ಯಾಸ ಪದ್ಧತಿ ಇಲ್ಲ ಎಂದಿದ್ದಾರೆ.
ಇನ್ನು ಹೊಸ ಮಸೀದಿಗೆ ಬಾಬ್ರಿ ಮಸೀದಿ ಅಂತ ಹೆಸರಿಡುತ್ತೀರಾ ಎಂಬ ಪ್ರಶ್ನೆಗೆ, ಅಂಥ ಚಿಂತನೆ ಏನೂ ಇಲ್ಲ. ಹೆಸರು ಇನ್ನಷ್ಟೆ ನಿರ್ಧಾರ ಆಗಬೇಕು. ಸೌದಿ ಅರೇಬಿಯಾದಲ್ಲಿ ಮದೀನಾ ಇದ್ದ ರೀತಿ ನಮಗೆ ಎಲ್ಲ ಮಸೀದಿಗಳೂ ಪವಿತ್ರ. ಮಸ್ಜಿದ್ ಇ ನಬಿ ಎಲ್ಲವೂ.. ನಮಗೆ ಹೆಸರು ಮುಖ್ಯ ಅಲ್ಲ. ಅಲ್ಲಾನ ಪ್ರಕಾರ, ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸುವುದಷ್ಟೇ ಮುಖ್ಯ ಎಂದು ಅಥರ್ ಹುಸೇನ್ ಹೇಳಿದ್ದಾರೆ.
ಸಿಎಂ ಯೋಗಿಗೆ ಪೀಕಲಾಟ ತಂದಿಟ್ಟ ಮಸೀದಿ ಕರೆ !
ಇದೇ ವೇಳೆ, ಸಮಾಜವಾದಿ ಪಾರ್ಟಿ ವಕ್ತಾರ ಪವನ್ ಪಾಂಡೆ, ಸಿಎಂ ಯೋಗಿ ಆದಿತ್ಯನಾಥ್ ಮಸೀದಿ ಸಮುಚ್ಚಯ ಶಿಲಾನ್ಯಾಸಕ್ಕೆ ಹೇಗೆ ಹೋಗುತ್ತಾರೆ. ಅವರು ಮಂದಿರ ಶಿಲಾನ್ಯಾಸ ಸಂದರ್ಭದಲ್ಲಿ ಮಸೀದಿ ಕಾರ್ಯಕ್ಕೆ ಹೋಗಲ್ಲ ಎಂದಿದ್ದರಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ರಾಮ ಮಂದಿರದ ಭೂಮಿಪೂಜನ ಕಾರ್ಯಕ್ರಮದ ಬಳಿಕ ಟಿವಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಮಾತು ಟೀಕೆಗೆ ಗುರಿಯಾಗಿತ್ತು.
"ನಾನೊಬ್ಬ ಸಂತನಾಗಿ ಮತ್ತು ಒಬ್ಬ ಹಿಂದುವಾಗಿ" ಮಸೀದಿ ಉದ್ಘಾಟನೆಗೆ ಹೋಗುವುದಿಲ್ಲ ಎಂದಿದ್ದರು. "ನೀವು ನನ್ನನ್ನು ಮುಖ್ಯಮಂತ್ರಿಯ ನೆಲೆಯಲ್ಲಿ ಕರೆದರೆ ನಂಬಿಕೆ ವಿಚಾರ ಬರಲ್ಲ. ನನ್ನ ಧರ್ಮ, ನಂಬಿಕೆ ಅಡ್ಡಿಯೂ ಆಗಲ್ಲ. ನೀವು ನನ್ನನ್ನು ಯೋಗಿಯಾಗಿ ಕರೆಯುವುದಿದ್ದರೆ ನಾನೊಬ್ಬ ಹಿಂದುವಾಗಿ ಖಂಡಿತವಾಗಿಯೂ ಮಸೀದಿ ಕಾರ್ಯಕ್ಕೆ ಹೋಗಲ್ಲ. ನನ್ನ ನಂಬಿಕೆ ಮತ್ತು, ಆರಾಧನ ಕ್ರಮ ಪಾಲಿಸಲು ನಾನು ಹಕ್ಕು ಹೊಂದಿದ್ದೇನೆ " ಎಂದಿದ್ದರು. ಈ ಕುರಿತ ಪ್ರಶ್ನೆಗೆ, ಖಡಕ್ಕಾಗೇ ಉತ್ತರಿಸಿದ್ದ ಆದಿತ್ಯನಾಥ್, ನಾನು ವಾದಿಯೂ ಅಲ್ಲ. ಪ್ರತಿವಾದಿಯೂ ಅಲ್ಲ. ಹೀಗಾಗಿ ನನ್ನನ್ನು ಕರೆಯದಿದ್ದರೆ ಮಸೀದಿ ಕಾರ್ಯಕ್ರಮಕ್ಕೆ ಹೋಗುವ ಪ್ರಮೇಯ ಬರಲ್ಲ. ನನ್ನನ್ನು ಅವರು ಕರೆಯೋದೂ ಇಲ್ಲ ಅಂದ್ಕೊಂಡಿದ್ದೇನೆ. ಒಂದ್ವೇಳೆ ಆಹ್ವಾನ ನೀಡಿದರೆ, ಈಗಿನ ದಿನಗಳಲ್ಲಿ ಸೆಕ್ಯುಲರಿಸಮ್ ತುಂಬ ಅಪಾಯದಲ್ಲಿದೆ ಎನ್ನಲಾಗುತ್ತಿದೆ. ಆದರೆ, ನನ್ನನ್ನು ಆಹ್ವಾನಿಸಿದರೆ ಅವರಲ್ಲಿ ಜಾತ್ಯತೀತ ಭಾವನೆ ಜಾಗೃತವಾಗಿದೆ ಅಂದ್ಕೊಳ್ತೇನೆ. ಯಾವುದೇ ತಾರತಮ್ಯ ಇಲ್ಲದೆ ಮಾಡಿಕೊಂಡು ಬರ್ತಿರೋ ಕೆಲಸವನ್ನು ಮುಂದೆನೂ ಮುಂದುವರಿಸ್ತೀನಿ ಎಂದಿದ್ದರು. ಈ ಬಗ್ಗೆ ಟೀಕಿಸಿದ್ದ ಸಮಾಜವಾದಿ ಪಕ್ಷದ ವಕ್ತಾರ ಪವನ್ ಪಾಂಡೆ, ಯೋಗಿ ಹಿಂದುಗಳಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಎಲ್ಲ ಸಮುದಾಯಕ್ಕೂ ಮುಖ್ಯಮಂತ್ರಿ. ಇಂಥ ಮಾತು ಮುಖ್ಯಮಂತ್ರಿಯ ಘನತೆಯನ್ನು ಕುಂದಿಸುತ್ತದೆ. ಸಿಎಂ ಆಗಿ ತೆಗೆದುಕೊಳ್ಳುವ ಪ್ರತಿಜ್ಞೆಯನ್ನು ಉಲ್ಲಂಘಿಸಿದಂತೆ. ಯೋಗಿ ಈ ಬಗ್ಗೆ ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಹೇಳಿದ್ದರು. ಇವೆಲ್ಲ ಟೀಕೆ- ಟಿಪ್ಪಣಿಗಳ ಬಳಿಕ ಈಗ ಮುಸ್ಲಿಂ ಟ್ರಸ್ಟ್ ಯೋಗಿಯನ್ನು ಮಸೀದಿ ಕಾರ್ಯಕ್ಕೆ ಕರೆಯುವುದಾಗಿ ಹೇಳಿ ಅಚ್ಚರಿ ಮೂಡಿಸಿದೆ.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 01:47 pm
HK News Desk
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
29-08-25 03:48 pm
Mangalore Correspondent
Puttur Tahsildar, Lokayukta Raid: ಜಮೀನು ಪರಭಾರ...
28-08-25 11:00 pm
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm