ಬ್ರೇಕಿಂಗ್ ನ್ಯೂಸ್
13-08-21 05:19 pm Headline Karnataka Political Bureau ದೇಶ - ವಿದೇಶ
ನವದೆಹಲಿ, ಆಗಸ್ಟ್ 13: ಪೋಕ್ಸೋ ಕಾಯ್ದೆಯಡಿ ಸಂತ್ರಸ್ತ ಯುವತಿಯ ಫೋಟೋ, ಆಕೆಯ ಮನೆಯವರ ಫೋಟೋ, ವಿವರಗಳನ್ನು ತೋರಿಸುವಂತಿಲ್ಲ. ಹೇಳುವಂತಿಲ್ಲ. ಆದರೆ, ಈ ಕಾಯ್ದೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉಲ್ಲಂಘನೆ ಮಾಡಿದ್ದಾರೆ. ರೇಪ್ ಪ್ರಕರಣದಲ್ಲಿ ಬಾಲಕಿಯ ಮನೆಗೆ ತೆರಳಿ, ಸಾಂತ್ವನ ಹೇಳಿದ ಫೋಟೋ, ವಿಡಿಯೋಗಳನ್ನು ಟ್ವಿಟರ್ ಮತ್ತು ಇನ್ ಸ್ಟಾ ಗ್ರಾಮಿನಲ್ಲಿ ಹಾಕ್ಕೊಂಡಿದ್ದು ರಾಹುಲ್ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.
ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್, ರಾಹುಲ್ ಖಾತೆಯನ್ನೇ ಬ್ಲಾಕ್ ಮಾಡಿದ್ದರೆ, ಇನ್ ಸ್ಟಾ ಗ್ರಾಮ್ ಖಾತೆಯೂ ಬ್ಲಾಕ್ ಆಗುವ ಸಾಧ್ಯತೆ ಕಂಡುಬಂದಿದೆ. ಫೋಟೋಗಳನ್ನು ಟ್ವಿಟರ್ ನಲ್ಲಿ ಷೇರ್ ಮಾಡಿದ ಕೂಡಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಟ್ವಿಟರ್ ಕಂಪನಿಗೆ ನೋಟೀಸ್ ನೀಡಿತ್ತು. ನೋಟೀಸ್ ಆದ ಬೆನ್ನಲ್ಲೇ ಟ್ವಿಟರ್ ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿದೆ. ಅದಲ್ಲದೆ, ದೇಶಾದ್ಯಂತ ಕಾಂಗ್ರೆಸ್ ಹಲವು ಘಟಕಗಳ ಅಧಿಕೃತ ಟ್ವಿಟರ್ ಖಾತೆಗಳನ್ನೂ ಬ್ಲಾಕ್ ಮಾಡಲಾಗಿದೆ.
ಇನ್ ಸ್ಟಾ ಗ್ರಾಮಿನಲ್ಲಿ ಹಾಕ್ಕೊಂಡಿರುವ ವಿಡಿಯೋದಲ್ಲಿ ಸಂತ್ರಸ್ತ ಯುವತಿ ಸೇರಿ ಆಕೆಯ ಕುಟುಂಬಸ್ಥರು ಇದ್ದಾರೆ. ಇದರಿಂದಾಗಿ ಮಕ್ಕಳ ಹಕ್ಕುಗಳ ಆಯೋಗವು ಫೇಸ್ ಬುಕ್ ಸಂಸ್ಥೆಗೆ ನೋಟೀಸ್ ನೀಡಿದ್ದು ಕ್ರಮಕ್ಕೆ ಆಗ್ರಹ ಮಾಡಿದೆ. ಹೀಗಾಗಿ ರಾಹುಲ್ ಗಾಂಧಿಯ ಇನ್ ಸ್ಟಾ ಗ್ರಾಮ್ ಖಾತೆಯೂ ಬ್ಲಾಕ್ ಆಗುವ ಸಾಧ್ಯತೆ ಎದುರಾಗಿದೆ. ಬಾಲಕಿಯ ಕುಟುಂಬದ ಜೊತೆಗೆ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ರಾಹುಲ್ ಟ್ವಿಟರ್ ನಲ್ಲಿ ಹಾಕಿದ್ದಲ್ಲದೆ, ನಾವು ನ್ಯಾಯ ಸಿಗೋ ವರೆಗೂ ಹಿಂದೆ ಸರಿಯುವುದಿಲ್ಲ ಎಂದು ಬರೆದುಕೊಂಡಿದ್ದರು. ಇದೀಗ ಈ ರೀತಿಯ ನಡೆಯೇ ರಾಹುಲ್ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ. ಪೋಕ್ಸೋ ಕಾಯ್ದೆಯಡಿ ಸಂತ್ರಸ್ತರ ಮಾಹಿತಿಯನ್ನು ಪ್ರಸಾರಿಸುವುದು ಅಪರಾಧವಾಗಿರುತ್ತದೆ.
ರಾಹುಲ್ ಗಾಂಧಿಯ ಟ್ವಿಟರ್ ಖಾತೆ ಬ್ಲಾಕ್ ಆದ ಬೆನ್ನಲ್ಲೇ ದೇಶಾದ್ಯಂತ 21 ಮಂದಿ ಪ್ರಮುಖ ನಾಯಕರು, ಐಎನ್ ಸಿ ಇಂಡಿಯಾ (ಕಾಂಗ್ರೆಸ್ ಪಕ್ಷದ ಪ್ರಮುಖ ಖಾತೆ) ಸೇರಿ ವಿವಿಧ ರಾಜ್ಯಗಳ ಅಧಿಕೃತ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ. ನಿಯಮಾವಳಿ ಉಲ್ಲಂಘನೆ ಆರೋಪದಲ್ಲಿ ಈ ಎಲ್ಲ ಖಾತೆಗಳನ್ನು ಬ್ಲಾಕ್ ಮಾಡಿದ್ದಾಗಿ ಟ್ವಿಟರ್ ಹೇಳಿಕೊಂಡಿದೆ.
ಐಎನ್ ಸಿ ಇಂಡಿಯಾ, ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದಾಮನ್ ಆಂಡ್ ದಿಯು, ತಮಿಳುನಾಡು ಕಾಂಗ್ರೆಸ್ ಸಮಿತಿಗಳ ಖಾತೆ ಬಂದ್ ಆಗಿವೆ. ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲಾ, ಅಜಯ್ ಮಾಕೇನ್, ಕೆ.ಸಿ. ವೇಣುಗೋಪಾಲ್, ಮಣಿಕ್ಕನ್ ಟಾಗೋರ್, ಸುಶ್ಮಿತಾ ದೇವ್, ಹರೀಶ್ ರಾವತ್ ಸೇರಿ 21 ನಾಯಕರ ಖಾತೆಗಳು ಬ್ಲಾಕ್ ಆಗಿವೆ. ರಾಹುಲ್ ಖಾತೆ ಬ್ಲಾಕ್ ಆದ ಬೆನ್ನಲ್ಲೇ ರಾಹುಲ್ ಗಾಂಧಿಯ ಫೋಟೋಗಳನ್ನು ಬಹುತೇಕ ನಾಯಕರು ತಮ್ಮ ಪ್ರೊಫೈಲ್ ನಲ್ಲಿ ಹಾಕ್ಕೊಂಡು ಪ್ರತಿಭಟನೆ ಸೂಚಿಸಿದ್ದಾರೆ.
The official Twitter handles of the Congress and around 5,000 of its leaders and workers have been locked, the party claimed Thursday, amid growing controversy over "selective" action against Rahul Gandhi and others for posting photographs that show Mr Gandhi interacting with the family of the nine-year-old Dalit girl who was allegedly raped and killed in Delhi last week.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm