ಬ್ರೇಕಿಂಗ್ ನ್ಯೂಸ್
06-08-21 02:32 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 6: ಕ್ರೀಡಾ ಕ್ಷೇತ್ರದಲ್ಲಿ ಸಾಧಕರಿಗೆ ನೀಡಲಾಗುವ ದೇಶದ ಅತ್ಯುನ್ನತ ಪುರಸ್ಕಾರ ಎಂದು ಪರಿಗಣಿಸಲ್ಪಟ್ಟಿರುವ ರಾಜೀವ ಗಾಂಧಿ ಖೇಲ್ ರತ್ನ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮರು ನಾಮಕರಣ ಮಾಡಿದ್ದಾರೆ. ದೇಶದ ಹಾಕಿ ಕ್ಷೇತ್ರದಲ್ಲಿ ದಂತಕತೆ ಎಂದೇ ಹೆಸರು ಮಾಡಿರುವ ಮೇಜರ್ ಧ್ಯಾನ್ ಚಂದ್ ಹೆಸರಲ್ಲಿ ಖೇಲ್ ರತ್ನ ಪುರಸ್ಕಾರ ನೀಡುವುದಾಗಿ ಪ್ರಕಟಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ದೇಶಾದ್ಯಂತ ಅಸಂಖ್ಯಾತ ಜನರು ಈ ಬಗ್ಗೆ ನನಗೆ ಮನವಿ, ಸಲಹೆಗಳನ್ನು ನೀಡಿದ್ದರು. ಖೇಲ್ ರತ್ನ ಪುರಸ್ಕಾರದ ಹೆಸರನ್ನು ಮೇಜರ್ ಧ್ಯಾನ್ ಚಂದ್ ಹೆಸರಲ್ಲಿ ಮಾಡುವಂತೆ ಸಲಹೆ ಮಾಡಿದ್ದರು. ದೇಶದ ಜನರ ಭಾವನೆ ಮತ್ತು ದೃಷ್ಟಿಕೋನಕ್ಕೆ ಅಭಿನಂದಿಸುತ್ತೇನೆ. ಜನರ ಭಾವನೆಗೆ ಸ್ಪಂದಿಸಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಅವಾರ್ಡ್ ಎಂದು ಬದಲಿಸಲಾಗಿದೆ. ಜೈಹಿಂದ್ ಎಂದು ಹೇಳಿದ್ದಾರೆ.


1991-92ರಲ್ಲಿ ಖೇಲ್ ರತ್ನ ಅವಾರ್ಡ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಅದನ್ನು ಮಾಜಿ ಪ್ರಧಾನಿ ರಾಜೀವ ಗಾಂಧಿ ಹೆಸರಲ್ಲಿ ಮೊದಲಿಗೆ ಚೆಸ್ ಚಾಂಪ್ಯನ್ ವಿಶ್ವನಾಥನ್ ಆನಂದ್ ಅವರಿಗೆ ನೀಡಲಾಗಿತ್ತು. ಆನಂತರ ಲಿಯಾಂಡರ್ ಪೇಸ್, ಸಚಿನ್ ತೆಂಡುಲ್ಕರ್, ಧನರಾಜ್ ಪಿಳ್ಳೆ, ಪುಲ್ಲೇಲ ಗೋಪಿಚಂದ್, ಅಭಿನವ್ ಬಿಂದ್ರಾ, ಅಂಜು ಬಾಬಿ ಜಾರ್ಜ್, ಮೇರಿ ಕೋಮ್ ಮತ್ತು 2020ರಲ್ಲಿ ರಾಣಿ ರಾಮ್ ಪಾಲ್ ಅವರಿಗೆ ಖೇಲ್ ರತ್ನ ಪುರಸ್ಕಾರ ಈವರೆಗೆ ನೀಡಲಾಗಿದೆ.
ಖೇಲ್ ರತ್ನ ಪುರಸ್ಕಾರ ಇನ್ನು ಮೇಜರ್ ಧ್ಯಾನ್ ಚಂದ್ ಹೆಸರಲ್ಲಿ ನೀಡಲಿದ್ದು, ಪ್ರಶಸ್ತಿ ಮೊತ್ತವನ್ನು 25 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಒಲಿಂಪಿಕ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದ್ದ ಮೇಜರ್ ಧ್ಯಾನ್ ಚಂದ್ ಹಾಕಿ ಕ್ಷೇತ್ರದಲ್ಲಿ ದಂತಕತೆ ಎಣಿಸಿರುವ ಹೆಸರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ 1926 ರಿಂದ 1949ರ ವರೆಗೆ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ಧ್ಯಾನ್ ಚಂದ್, 400 ಗೋಲ್ ಗಳಿಸುವ ಮೂಲಕ ಯಾರೂ ಮಾಡದ ಸಾಧನೆಯನ್ನು ಮಾಡಿದ್ದರು. ಅಲ್ಲದೆ, 1928, 1932 ಮತ್ತು 1936ರಲ್ಲಿ ಭಾರತದ ಹಾಕಿ ತಂಡ ಒಲಿಂಪಿಕ್ ನಲ್ಲಿ ಚಿನ್ನದ ಸಾಧನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
I have been getting many requests from citizens across India to name the Khel Ratna Award after Major Dhyan Chand. I thank them for their views.
— Narendra Modi (@narendramodi) August 6, 2021
Respecting their sentiment, the Khel Ratna Award will hereby be called the Major Dhyan Chand Khel Ratna Award!
Jai Hind! pic.twitter.com/zbStlMNHdq
India's highest sporting honour Khel Ratna Award, which was named after former prime minister Rajiv Gandhi, was on Friday rechristened in the honour of hockey wizard Dhyan Chand following the admirable performance of both men's and women's hockey teams in the Tokyo Olympics.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
18-04-26 11:31 pm
HK News Desk
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
19-04-26 10:20 am
HK News Staffer
ಹೇಯ್ ಮಟನ್ ಸರಿಯಾಗಿ ಬೆಂದಿಲ್ಲ ಎಂದು ಸ್ನೇಹಿತನ ಮುಂದ...
18-04-26 10:37 pm
180 ಅಪ್ರಾಪ್ತ ಬಾಲಕಿಯರ 350 ಅಶ್ಲೀಲ ವಿಡಿಯೋ ವೈರಲ್...
18-04-26 03:50 pm
ಟಿಸಿಎಸ್ ಕಂಪನಿಯಲ್ಲಿ ಕಾರ್ಪೊರೇಟ್ ಜಿಹಾದ್ ; ತಲೆಮರೆ...
17-04-26 06:48 pm
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm