ಬ್ರೇಕಿಂಗ್ ನ್ಯೂಸ್
14-07-21 04:10 pm Headline Karnataka News Network ದೇಶ - ವಿದೇಶ
ಇಸ್ಲಮಾಬಾದ್, ಜುಲೈ 14: ಬಸ್ ಸ್ಫೋಟಗೊಂಡು 13 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ವಾಯುವ್ಯ ಪಾಕಿಸ್ತಾನದ ಬಸ್ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 9 ಮಂದಿ ಚೀನಾದ ಕಾರ್ಮಿಕರು ಮತ್ತು ಪಾಕಿಸ್ತಾನ ಇಬ್ಬರು ಸೈನಿಕರು ಸೇರಿ 13 ಮಂದಿ ಮೃತಪಟ್ಟಿದ್ದಾರೆ.
ಚೀನಾದ ಎಂಜಿನಿಯರ್ಗಳು, ಸರ್ವೇಯರ್ಗಳು ಮತ್ತು ಮೆಕ್ಯಾನಿಕಲ್ ಸಿಬ್ಬಂದಿ ಸೇರಿದಂತೆ ಒಟ್ಟು 30 ಮಂದಿಯನ್ನು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದಸು ಅಣೆಕಟ್ಟು ನಿರ್ಮಾಣ ಸ್ಥಳಕ್ಕೆ ಬಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಸ್ಫೋಟದಿಂದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಬಸ್ ಕಂದಕಕ್ಕೆ ಬಿದ್ದಿತು' ಎಂದು ಅವರು ಹೇಳಿದ್ದಾರೆ.
ಚೀನಾದ ಇನ್ನೂ 28 ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಹ ಈ ಘಟನೆಯನ್ನು ದೃಢಪಡಿಸಿದ್ದು, 'ಇದು ಭಾರಿ ಸ್ಫೋಟವಾಗಿದೆ ಆದರೆ ಸ್ಫೋಟದ ಸ್ವರೂಪ ಇನ್ನೂ ತಿಳಿದುಬಂದಿಲ್ಲ' ಎಂದು ಹೇಳಿದ್ದಾರೆ.
ಬಸ್ ನೊಳಗೆ ಅಥವಾ ರಸ್ತೆ ಬದಿ ಸ್ಫೋಟಕ ಇಟ್ಟು ಉಡಾಯಿಸಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದರೆ, ಇಸ್ಲಾಮಾಬಾದ್ನ ಚೀನಾದ ರಾಯಭಾರ ಕಚೇರಿ ತನ್ನ ದೇಶದ ಪ್ರಜೆಗಳು ದಾಳಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
Nine Chinese workers were among 13 people killed on Wednesday when a blast on a bus sent it careening down a ravine in northwestern Pakistan, government and police officials said.
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
15-04-25 09:57 pm
Mangalore Correspondent
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm