ಬ್ರೇಕಿಂಗ್ ನ್ಯೂಸ್
12-07-21 05:25 pm Headline Karnataka News Network ದೇಶ - ವಿದೇಶ
ನವದೆಹಲಿ, ಜುಲೈ 12: ಸೂರ್ಯನಿಂದ ಪ್ರಬಲ ಸೌರಗಾಳಿ ಬಿಡುಗಡೆಯಾಗಿದ್ದು, ಇನ್ನೆರಡು ದಿನ (ಮಂಗಳವಾರ, ಬುಧವಾರ) ಇದರ ಪರಿಣಾಮ ಭೂಮಿಯ ಮೇಲಾಗಲಿದೆ. ಪ್ರಬಲ ಸೌರಗಾಳಿ ಅಪ್ಪಳಿಸುವ ಕಾರಣ ಭೂಮಿಯ ಕಾಂತಶಕ್ತಿಯ ಮೇಲೆ ಪರಿಣಾಮ ಬೀರಲಿದ್ದು, ಇನ್ನೆರಡು ದಿನಗಳಲ್ಲಿ ಭೂಮಿಯ ಉತ್ತರ ಪ್ರದೇಶಗಳಲ್ಲಿ ಇದರ ಎಫೆಕ್ಟ್ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಸೌರ ಜ್ವಾಲೆಯಿಂದಾಗಿ ಭೂಮಿಯ ಕಾಂತಕ್ಷೇತ್ರಕ್ಕೆ ಪರಿಣಾಮ ಎದುರಾಗಲಿದೆ. ಇದರಿಂದ ಪ್ರಮುಖವಾಗಿ ಭೂಮಿಯಿಂದ ನೇರ ಸಂಪರ್ಕ ಹೊಂದಿರುವ ಸ್ಯಾಟಲೈಟ್ ಆಪರೇಟಿಂಗ್ ಸಿಸ್ಟಂಗೆ ಪೆಟ್ಟು ಬೀಳಲಿದೆ. ಜಿಪಿಎಸ್ ನೇವಿಗೇಶನ್, ಮೊಬೈಲ್ ಫೋನ್ ಸಿಗ್ನಲ್, ಸ್ಯಾಟಲೈಟ್ ಟಿವಿ, ವಿದ್ಯುತ್ ಗ್ರಿಡ್ ಗಳಲ್ಲಿ ವೈಪರೀತ್ಯ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಅಲ್ಲದೆ, ಭೂಮಿಯ ಕಾಂತಕ್ಷೇತ್ರದ ವ್ಯಾಪ್ತಿಯಲ್ಲಿ ಭಾರೀ ವೇಗದಲ್ಲಿ ಗಾಳಿ ಬೀಸಲಿದ್ದು, ಬಿರುಗಾಳಿ ರೂಪ ಪಡೆಯುವ ಸಾಧ್ಯತೆಯಿದೆ ಎಂದಿದ್ದಾರೆ.
ಪ್ರಬಲ ಸೌರ ಗಾಳಿಯಿಂದಾಗಿ ಅಂತರಿಕ್ಷದಲ್ಲಿ ಜಿಯೋ ಮ್ಯಾಗ್ನಿಟಿಕ್ ಸ್ಟಾರ್ಮ್ (ಕಾಂತ ಮಾರುತ) ಉಂಟಾಗಲಿದ್ದು, ಇದು ಭೂಮಿಯ ಕಾಂತ ಶಕ್ತಿಯ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ. ಅಂತರಿಕ್ಷದಲ್ಲಿ ಸೂರ್ಯನ ಜ್ವಾಲೆಯಿಂದಾಗಿ ಅಪಾರ ವಿದ್ಯುತ್ ಅಯಸ್ಕಾಂತೀಯ ಶಕ್ತಿ ಮತ್ತು ಪ್ಲಾಸ್ಮಾ ಉತ್ಪತ್ತಿಯಾಗಲಿದ್ದು, ಇದರ ಪರಿಣಾಮ ಕಾಂತಶಕ್ತಿ ಪ್ರೇರಕಗೊಂಡು ಸೌರ ಬಿರುಗಾಳಿ ಏಳಲಿದೆ. ಇದು ಭೂಮಿಯ ಅಯಸ್ಕಾಂತ ಪ್ರಭಾ ವಲಯಕ್ಕೆ ಧಕ್ಕೆ ಮಾಡಲಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.


ಏನಿದು ಸೌರಜ್ವಾಲೆ, ಸೌರ ಬಿರುಗಾಳಿ ?
ಸೂರ್ಯನಲ್ಲಿ ಅಡಕವಾಗಿರುವ ಅಪಾರ ಪ್ರಮಾಣದ ದ್ರವ್ಯರಾಶಿ ಒಮ್ಮೆಲೇ ಸ್ಫೋಟಗೊಂಡು ಈ ರೀತಿಯ ಸೌರ ಬಿರುಗಾಳಿ ಏಳುತ್ತದೆ. ಇದರಲ್ಲಿ ಅಪಾರ ಪ್ರಮಾಣದ ಕಾಂತಶಕ್ತಿಯ ಬಲ ಮತ್ತು ರೇಡಿಯೇಶನ್ ಕೂಡ ಏಕಕಾಲದಲ್ಲಿ ಬಿಡುಗಡೆಯಾಗುತ್ತದೆ. ಎಕ್ಸ್ ರೇ ಮತ್ತು ಗಾಮಾ ಕಿರಣಗಳ ಜೊತೆಗೆ ವಿಭಿನ್ನ ರೀತಿಯ ವಿಕಿರಣಗಳು ಹೊರ ಸೂಸಲಿದ್ದು ಇದು ಸೌರ ಮಂಡಲಕ್ಕೆ ಬಿಡುಗಡೆಯಾಗಿ ಬೇರೆ ಬೇರೆ ರೀತಿಯ ಪರಿಣಾಮಕ್ಕೆ ಕಾರಣವಾಗಲಿದೆ.
ಈ ರೀತಿಯ ಸೌರಜ್ವಾಲೆ ಸೂರ್ಯನಿಂದ ಕೆಲವೊಮ್ಮೆ ಬಿಡುಗಡೆಯಾಗುತ್ತಿದ್ದು ವಿಜ್ಞಾನಿಗಳು ಇದರ ಪರಿಣಾಮದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಇಸ್ರೋ ವಿಜ್ಞಾನಿಗಳು ಇತ್ತೀಚೆಗೆ ಸೂರ್ಯನಿಂದ ಬಿಡುಗಡೆಯಾಗಿರುವ ನೂರು ರೀತಿಯ ಸೌರಜ್ವಾಲೆಯನ್ನು ಗುರುತಿಸಿದ್ದಾರೆ.
The massive solar flare is expected to hit satellites operating in the Earth’s upper atmosphere, impact GPS navigation, mobile phone signal, and satellite TV.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 03:30 pm
HK News Staffer
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm