ಬ್ರೇಕಿಂಗ್ ನ್ಯೂಸ್
11-07-21 03:55 pm Headline Karnataka News Network ದೇಶ - ವಿದೇಶ
ಮುಂಬೈ, ಜುಲೈ 11: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಅಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ಮತ್ತು ಅವರ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅಂತರ್ ಧರ್ಮ ವಿವಾಹದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಒಂದು ಸಮಯದಲ್ಲಿ ಪಂಜಾಬ್ನಲ್ಲಿ ಈ ರೀತಿ ಮದುವೆಗಳಾದರೆ ಒಂದು ಮಗುವನ್ನು ಹಿಂದು, ಇನ್ನೊಂದು ಮಗುವನ್ನು ಸಿಖ್ ಹೆಸರಲ್ಲಿ ಗುರುತಿಸಿ ಬೆಳೆಸುತ್ತಿದ್ದರು. ಆದರೆ ಹಿಂದು - ಮುಸ್ಲಿಮರ ಮಧ್ಯೆ ಈ ಟ್ರೆಂಡ್ ಯಾವತ್ತೂ ಕಂಡುಬಂದಿಲ್ಲ. ಅಥವಾ ಮುಸ್ಲಿಮರನ್ನು ಮದಯವೆಯಾದ ಬೇರೆ ಯಾವುದೆ ಧರ್ಮದ ಫ್ಯಾಮಿಯಲ್ಲೂ ಈ ಟ್ರೆಂಡ್ ಇಲ್ಲ. ಅಮೀರ್ ಖಾನ್ ಎರಡನೇ ವಿಚ್ಛೇದನದ ನಂತರ ನನಗೆ ಅಚ್ಚರಿಯಾಗಿ ಕಂಡುಬರುತ್ತಿರುವ ವಿಚಾರವಿದು. ಅಂತರ್ ಧರ್ಮ ವಿವಾಹದಲ್ಲಿ ಮಕ್ಕಳು ಮಾತ್ರ ಮುಸ್ಲಿಂ ಆಗಿ ಮಾತ್ರ ಗುರುತಿಸಲ್ಪಡೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
ಮಕ್ಕಳು ಹಿಂದೂಗಳಾಗಿರಲು ಏಕೆ ಸಾಧ್ಯವಿಲ್ಲ? ಬದಲಾಗುತ್ತಿರುವ ಸಮಯದೊಂದಿಗೆ ನಾವು ಇದನ್ನು ಕೂಡ ಬದಲಾಯಿಸಬೇಕಲ್ಲ. ಈ ಪದ್ಧತಿ ಹಳೆಯದಾಗಿದೆ. ಒಂದು ಕುಟುಂಬದಲ್ಲಿ ಹಿಂದೂ, ಜೈನ, ಬೌದ್ಧ, ಸಿಖ್ ಮತ್ತು ನಾಸ್ತಿಕರು ಒಟ್ಟಿಗೆ ಬದುಕಲು ಸಾಧ್ಯವಾದರೆ ಮುಸ್ಲಿಮರನ್ನು ಮದುವೆಯಾಗಲು ಒಬ್ಬರ ಧರ್ಮವನ್ನು ಏಕೆ ಬದಲಾಯಿಸಬೇಕು ಎಂದು ಕಂಗನಾ ಪ್ರಶ್ನಿಸಿದ್ದಾರೆ.
ಅಮೀರ್ ಮತ್ತು ಕಿರಣ್ ರಾವ್ ಮದುವೆಯಾದ 15 ವರ್ಷಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ವಿಚ್ಛೇದನೆ ಪ್ರಕಟಿಸಿದ್ದಾರೆ. “ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ. ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಇರುವುದಿಲ್ಲ. ಆದರೆ ಮಗುವಿಗೆ ಪೋಷಕರಾಗಿ ಮುಂದುವರಿಯಲಿದ್ದೇವೆ. ನಮ್ಮ ಮಗ ಆಜಾದ್ಗೆ ಪೋಷಕರಾಗಿ ಉಳಿದಿದ್ದೇವೆ. ಅವನನ್ನು ನಾವು ಒಟ್ಟಿಗೆ ಬೆಳೆಸುತ್ತೇವೆ ಎಂದಿದ್ದರು.
ಅಮಿರ್ ಖಾನ್ ಮೊದಲ ಪತ್ನಿಯಾಗಿ ಹಿಂದು ಯುವತಿಯನ್ನು ಮದುವೆಯಾಗಿದ್ದರು. ಅದರಲ್ಲಿ ಇಬ್ಬರು ಮಕ್ಕಳಿದ್ದು ಇಬ್ಬರ ಹೆಸರು ಕೂಡ ಖಾನ್ ಆಗಿಯೇ ಇದೆ. 2001ರ ಲಗಾನ್ ಚಿತ್ರ ಹಿಟ್ ಆಗುತ್ತಿದ್ದಂತೆ ಅದರಲ್ಲಿ ಸಣ್ಣ ಪಾತ್ರ ಮಾಡಿದ್ದ ಕಿರಣ್ ರಾವ್ ಅವರನ್ನು ಪ್ರೀತಿಸಿ 2002ರಲ್ಲಿ ಮದುವೆಯಾಗಿದ್ದರು. ಅವರಿಗೆ ಹುಟ್ಟಿದ ಮಗುವಿಗೆ ಆಜಾದ್ ಖಾನ್ ಎಂದು ಹೆಸರಿಡಲಾಗಿತ್ತು. ಈಗ ಎರಡನೇ ಪತ್ನಿಗೂ ಅಮೀರ್ ವಿಚ್ಚೇದನ ನೀಡಿದ್ದಾರೆ. ಈ ವಿಚಾರದಲ್ಲಿ ಕಂಗನಾ ಪ್ರಶ್ನೆ ಮಾಡಿದ್ದು ಬಾಲಿವುಡ್ ನಲ್ಲಿ ಬಹಳಷ್ಟು ಹಿಂದು - ಮುಸ್ಲಿಂ ಮದುವೆಗಳು ನಡೆದಿವೆ. ಆದರೆ ಮಕ್ಕಳ ಹೆಸರು ಮಾತ್ರ ಮುಸ್ಲಿಂ ಆಗಿಯೇ ಇರುವುದೇಕೆ. ಮದುವೆಯಾದ ಮಾತ್ರಕ್ಕೆ ಪತ್ನಿ ಮುಸ್ಲಿಂ ಆಗಿ ಮತಾಂತರ ಆಗುವುದೇಕೆ ಎಂದು ಮಾರ್ಮಿಕ ಪ್ರಶ್ನೆ ಪ್ರಶ್ನೆ ಎತ್ತಿದ್ದಾರೆ.
Bollywood actress Kangana Ranaut is known for speaking her mind, and more often than not it has landed her in trouble. On Aamir Khan and Kiran Rao's recent divorce announcement, the Queen actress shared her thoughts.
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
15-04-25 09:57 pm
Mangalore Correspondent
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm