ಬ್ರೇಕಿಂಗ್ ನ್ಯೂಸ್
26-06-21 09:04 pm Headline Karnataka News Network ದೇಶ - ವಿದೇಶ
Photo credits : khaleej Times
ದುಬೈ, ಜೂನ್ 26: ಭಾರತದ ಜೊತೆಗಿನ ವಿಮಾನ ಸಂಚಾರ ನಿರ್ಬಂಧವನ್ನು ಯುಎಇ ಮತ್ತೆ ಮುಂದುವರಿಸಿದ್ದು, ಮುಂದಿನ ಆದೇಶದ ವರೆಗೂ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದೆ. ಯುಎಇ ಪ್ರಜೆಗಳು, ರಾಜತಾಂತ್ರಿಕ ಅಧಿಕಾರಿಗಳು, ಬಿಸಿನೆಸ್ ಉದ್ದೇಶಿತ ಉದ್ಯಮದಾರರ ವಿಮಾನಗಳು ಮತ್ತು ಗೋಲ್ಡನ್ ವೀಸಾ ಹೊಂದಿರುವರ ವಿಮಾನ ಸಂಚಾರ ಹೊರತುಪಡಿಸಿ ಉಳಿದೆಲ್ಲ ರೀತಿಯ ವೈಮಾನಿಕ ಸಂಚಾರವನ್ನು ನಿರ್ಬಂಧಿಸಿ ಯುಎಇ ಜನರಲ್ ಸಿವಿಲ್ ಏವಿಯೇಶನ್ ಅಥಾರಿಟಿ ಆದೇಶ ಮಾಡಿದೆ.
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿದ ಕಾರಣ ಕಳೆದ ಎಪ್ರಿಲ್ 24ರಿಂದ ಯುಎಇ ಭಾರತದ ಜೊತೆಗೆ ವಿಮಾನ ಸಂಚಾರವನ್ನು ನಿರ್ಬಂಧಿಸಿ ಆದೇಶ ಮಾಡಿತ್ತು. ಜೂನ್ 19ರಂದು ಯುಎಇ ವಿಪತ್ತು ನಿರ್ವಹಣಾ ಕಮಿಟಿ ಸಭೆ ಸೇರಿ ಭಾರತ, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ನಡುವೆ ಜೂನ್ 23ರಿಂದ ಪ್ಯಾಸೆಂಜರ್ ವಿಮಾನಗಳ ಸಂಚಾರಕ್ಕೆ ಕೆಲವು ಷರತ್ತಿನ ಮೇರೆಗೆ ಅನುವು ಮಾಡಿತ್ತು. ಅದರಂತೆ, ಜೂನ್ 24ರಂದು ಏರ್ ಇಂಡಿಯಾ ಕಮರ್ಶಿಯಲ್ ವಿಮಾನ ಸಂಚಾರವನ್ನು ಆರಂಭಿಸಿತ್ತು. ಆದರೆ, ಈಗ ಮತ್ತೆ ಯುಎಇ ವಿಮಾನ ಪ್ರಾಧಿಕಾರವು ಭಾರತದ ಜೊತೆಗಿನ ವೈಮಾನಿಕ ಸಂಚಾರಕ್ಕೆ ನಿರ್ಬಂದ ವಿಧಿಸಿದೆ.
ಷರತ್ತಿನ ಪ್ರಕಾರ, ಯುಎಇಗೆ ಆಗಮಿಸುವ ಪ್ರಯಾಣಿಕರು ರೆಸಿಡೆನ್ಶಿಯಲ್ ವೀಸಾ ಹೊಂದಿರಬೇಕು. ಅಲ್ಲದೆ, ಯುಎಇ ಅಂಗೀಕಾರ ನೀಡಿರುವ ಲಸಿಕೆಯನ್ನು ಎರಡೂ ಡೋಸ್ ಹಾಕಿಸಿಕೊಂಡಿರಬೇಕು. ಫೈಜರ್, ಸ್ಪುಟ್ನಿಕ್ ವಿ, ಆಸ್ಟ್ರಾಜೆನೆಕಾ, ಸಿನೋಫಾರ್ಮ್ ಇವುಗಳಲ್ಲಿ ಒಂದನ್ನು ಲಸಿಕೆಯಾಗಿ ಪಡೆದಿರಬೇಕು. ಅಲ್ಲದೆ, ಪ್ರಯಾಣಿಕರು ತಮಗೆ ಕೋವಿಡ್ ಇಲ್ಲವೆಂದು ಖಚಿತಪಡಿಸಲು 48 ಗಂಟೆ ಒಳಗೆ ಪರೀಕ್ಷೆ ಮಾಡಿರುವ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಯುಎಇ ತಲುಪಿದ ಬಳಿಕ ಮತ್ತೆ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು ಹತ್ತು ದಿನಗಳ ಕ್ವಾರಂಟೈನ್ ಇರಬೇಕೆಂದು ಷರತ್ತು ವಿಧಿಸಲಾಗಿತ್ತು.
UAE’s General Civil Aviation Authority (GCAA) has announced that inbound passenger traffic from India would remain suspended until further notice. Referring to this, an official in the know-how stated, “As far as inbound passenger traffic from India is concerned, the status quo remains.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
16-07-26 07:25 pm
HK News Staffer
ದೆಹಲಿಯಿಂದ ಕಾರಿನಲ್ಲಿ 5 ಕೋಟಿ ಮೌಲ್ಯದ ಎಂಡಿಎಂಎ ಡ್ರ...
16-07-26 05:10 pm
ಗುರುವಾಯನಕೆರೆ ವಿದ್ಯುತ್ ಸಬ್ ಸ್ಟೇಶನ್ ಬಳಿ ಶವ ಪತ್ತ...
16-07-26 02:29 pm
ಬೃಹತ್ ಖೋಟಾ ನೋಟು ಜಾಲ ಬಯಲಿಗೆ ; ಉಪ್ಪಿನಂಗಡಿ ಬಳಿ ಫ...
16-07-26 02:02 pm
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ; ಒಂದು ವರ್ಷದ ಬಳಿಕ...
15-07-26 07:40 pm