ಬ್ರೇಕಿಂಗ್ ನ್ಯೂಸ್
26-06-21 12:46 pm Headline Karnataka News Network ದೇಶ - ವಿದೇಶ
ರಾಯಗಢ, ಜೂನ್ 26: ವ್ಯಾಕ್ಸಿನ್ ಕಾರಣದಿಂದ ಕುವೈಟಿಗೆ ತೆರಳಲು ವೀಸಾ ಸಿಗಲಿಲ್ಲ ಎಂಬ ಚಿಂತೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹದ್ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸಿರಾಜ್ ಮಾಪ್ಕರ್ ಎಂದು ಗುರುತಿಸಲಾಗಿದೆ.
ಕುವೈಟಿನಲ್ಲಿ ತೈಲ ಕಂಪನಿಯಲ್ಲಿ ಕೆಲಸಕ್ಕಿದ್ದ 45 ವರ್ಷದ ಸಿರಾಜ್ ಮಾಪ್ಕರ್ ಕಳೆದ ಮಾರ್ಚ್ ತಿಂಗಳಲ್ಲಿ ರಜೆಯ ನಿಮಿತ್ತ ಊರಿಗೆ ಬಂದಿದ್ದರು. ಬಳಿಕ ಕೋವಿಡ್ ಲಾಕ್ಡೌನ್ ಕಾರಣದಿಂದ ಇಲ್ಲೇ ಉಳಿದುಕೊಂಡಿದ್ದರು. ಕುವೈಟಿಗೆ ಮರಳುವ ಕಾರಣದಿಂದ ಬೇಗನೆ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು. ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ಸಿರಾಜ್ ಗೆ ಎರಡು ಡೋಸ್ ಕೂಡ ಆಗಿತ್ತು. ಆದರೆ, ಜೂನ್ ಆರಂಭದಲ್ಲಿ ಕುವೈಟಿಗೆ ಮರಳಲು ವೀಸಾಗೆ ಅರ್ಜಿ ಸಲ್ಲಿಸಿದಾಗ, ಕುವೈಟಿನಿಂದ ನಿರಾಕರಣೆ ಆಗಿತ್ತು.


ಕುವೈಟ್ ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ಇಲ್ಲದಿರುವುದರಿಂದ ವೀಸಾ ನಿರಾಕರಣೆ ಆಗಿತ್ತು. ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಸಿರಾಜ್, ತಾನಿನ್ನು ಕುವೈಟ್ ದೇಶಕ್ಕೆ ಹೋಗಲು ಸಾಧ್ಯವಾಗಲ್ಲ ಎಂದು ಚಿಂತೆಗೆ ಒಳಗಾಗಿದ್ದರು. ಅಲ್ಲದೆ, ಕುವೈಟಿಗೆ ತೆರಳಿ ತೀರಿಸುತ್ತೇನೆಂದು ಸಾಲವನ್ನೂ ಮಾಡಿಕೊಂಡಿದ್ದರು ಎಂದು ಸಿರಾಜ್ ಕುಟುಂಬಸ್ಥರು ತಿಳಿಸಿದ್ದಾರೆ.
ಕುವೈಟಿಗೆ ಬೇಗ ಹೋಗಬೇಕೆಂದು ಎರಡೂ ಡೋಸನ್ನು ಆದಷ್ಟುವ ಬೇಗ ಪಡೆದಿದ್ದರು. ಆದರೆ, ಇತ್ತೀಚೆಗೆ ಕೋವ್ಯಾಕ್ಸಿನ್ ಲಸಿಕೆ ಕುವೈಟಿನಲ್ಲಿ ಮಾನ್ಯತೆ ಇಲ್ಲವೆಂದು ಗೊತ್ತಾಗಿತ್ತು. ಆನಂತರ ಸಿರಾಜ್ ತೀವ್ರ ಚಿಂತೆಗೆ ಒಳಗಾಗಿದ್ದರು ಎಂದು ಅವರ ಸೋದರ ನಾಸಿರ್ ಹೇಳಿದ್ದಾರೆ.
Unable to fly back to Kuwait from Maharashtra, a man of Indian origin allegedly hanged himself to death. The man was unable to return to Kuwait as the COVID-19 vaccine he had taken is not valid in the Gulf country. The 45-year-old man took his life at his residence in Mahad city in Raigad district.
01-03-26 09:20 pm
HK News Staffer
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
ಖಮೇನಿ ಹತ್ಯೆ ಖಂಡನೀಯ, ಇರಾನ್ ಮೇಲಿನ ಅಮೆರಿಕ ಯುದ್ಧ...
01-03-26 04:51 pm
02-03-26 03:10 pm
HK News Staffer
ಇರಾನ್ ಸಂಘರ್ಷ; ಭಾರತದಲ್ಲಿ ಹಿಂಸಾಚಾರ ಸಾಧ್ಯತೆ, ತುರ...
02-03-26 02:26 pm
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ; ಸೆನ್ಸೆಕ್ಸ್ 1,000...
02-03-26 01:34 pm
ಖಮೇನಿ ಯುಗಾಂತ್ಯ; ಹಂಗಾಮಿ ಸುಪ್ರೀಂ ಲೀಡರ್ ಸ್ಥಾನಕ್ಕ...
02-03-26 01:30 pm
Ayatollah Khamenei Killed: ಇರಾನ್ ಪರಮೋಚ್ಚ ನಾಯಕ...
01-03-26 09:52 am
01-03-26 08:37 pm
HK News Staffer
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm