ಬ್ರೇಕಿಂಗ್ ನ್ಯೂಸ್
25-06-21 05:46 pm Headline Karnataka News Network ದೇಶ - ವಿದೇಶ
ನವದೆಹಲಿ, ಜೂನ್ 25: ಹೊಸ ಐಟಿ ನಿಯಮ ಹೇರಿಕೆ ವಿಚಾರದಲ್ಲಿ ಟ್ವಿಟರ್ ಮತ್ತು ಕೇಂದ್ರ ಸರಕಾರದ ನಡುವೆ ಜಟಾಪಟಿ ಎದ್ದಿರುವಾಗಲೇ ಕೇಂದ್ರ ಐಟಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಅವರ ಟ್ವಿಟರ್ ಖಾತೆಯನ್ನು ಟ್ವಿಟರ್ ಕಂಪನಿ ಬ್ಲಾಕ್ ಮಾಡಿರುವ ಪ್ರಸಂಗ ನಡೆದಿದೆ. ಅಮೆರಿಕದ ಡಿಜಿಟಲ್ ಕಾಪಿರೈಟ್ ಆಕ್ಟ್ ಉಲ್ಲಂಘನೆಯಾಗಿದೆ ಎಂದು ಹೇಳಿ ಒಂದು ಗಂಟೆ ಕಾಲ ರವಿಶಂಕರ್ ಪ್ರಸಾದ್ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿ, ಮತ್ತೆ ಅನುವು ಮಾಡಿಕೊಟ್ಟಿದೆ.
ಈ ಬಗ್ಗೆ ಭಾರತೀಯ ಮೂಲದ ಟ್ವಿಟರ್ ಮಾದರಿಯ ಕೂ ಖಾತೆಯಲ್ಲಿ ಸಚಿವ ರವಿಶಂಕರ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಟ್ವಿಟರ್ ಖಾತೆಯಲ್ಲಿ ಇಂದು ಕೆಲವು ವಿಲಕ್ಷಣ ಘಟನೆಗಳು ನಡೆದವು. ಅಮೆರಿಕದ ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್ ಉಲ್ಲಂಘನೆ ಆಗಿದೆಯೆಂದು ಆರೋಪಿಸಿ ಒಂದು ಗಂಟೆ ಕಾಲ ಖಾತೆಯನ್ನು ಬ್ಲಾಕ್ ಮಾಡಿತ್ತು. ಆನಂತರ ಒಂದು ಗಂಟೆಯ ಬಳಿಕ ಮರಳಿ ಖಾತೆಯನ್ನು ಉಳಿಸಿಕೊಂಡಿದೆ ಎಂದು ಕೂ ಏಪ್ ನಲ್ಲಿ ಬರೆದುಕೊಂಡಿದ್ದಾರೆ.

ಟ್ವಿಟರ್ ಕಂಪನಿಯ ಈ ರೀತಿಯ ನಡೆಯನ್ನು ನೋಡಿದರೆ, ಇವರು ನಮ್ಮ ಅಭಿಪ್ರಾಯ ಸ್ವಾತಂತ್ರ್ಯ ಗೌರವಿಸುವ ರೀತಿ ಕಾಣುವುದಿಲ್ಲ. ಇವರು ತಮ್ಮದೇ ಅಜೆಂಡಾವನ್ನು ನಮ್ಮ ಮೇಲೆ ಹೇರಲು ಆಸಕ್ತಿ ತೋರುತ್ತಿದ್ದಾರೆ. ತಾವು ಹಾಕಿದ ಗೆರೆಯನ್ನು ದಾಟಿದರೆ, ನಿಮ್ಮನ್ನು ಟ್ವಿಟರ್ ವೇದಿಕೆಯಿಂದಲೇ ಕಿತ್ತು ಹಾಕುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಟ್ವಿಟರ್ ವಿರುದ್ಧ ಹರಿಹಾಯ್ದಿದ್ದಾರೆ.
ಸೋಶಿಯಲ್ ಮೀಡಿಯಾ ವಿಚಾರದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆ ಬಗ್ಗೆ ಉಲ್ಲೇಖಿಸಿ, ಸೋಶಿಯಲ್ ಮೀಡಿಯಾದ ಯಾವುದೇ ವೇದಿಕೆ ಇರಲಿ. ಹೊಸ ಐಟಿ ನಿಯಮಗಳನ್ನು ಗೌರವಿಸಲೇಬೇಕು. ಅದರಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಟ್ವಿಟರ್ ಖಾತೆಯನ್ನು ಉಲ್ಲಂಘಿಸುವ ಮೂಲಕ ಭಾರತದ ಕಾನೂನನ್ನು ಉಲ್ಲಂಘಿಸಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮ 4(8)ರ ಉಲ್ಲಂಘನೆಯಾಗಿದೆ. ಇದರ ಪ್ರಕಾರ ಯಾವುದೇ ವ್ಯಕ್ತಿಯ ಖಾತೆಯನ್ನು ಆತನ ಗಮನಕ್ಕೆ ತರದೆ ಅಥವಾ ನೋಟೀಸ್ ನೀಡದೇ ಡಿಲೀಟ್ ಮಾಡುವುದು ನಿಯಮದ ಉಲ್ಲಂಘನೆಯಾಗುತ್ತದೆ. ನನ್ನ ಹೇಳಿಕೆ, ಟೀವಿ ಹೇಳಿಕೆ, ಇಂಟರ್ವ್ಯೂ ಹೀಗೆ ಎಲ್ಲವನ್ನೂ ಒಳಗೊಂಡಿದ್ದ ಖಾತೆಯನ್ನು ಒಮ್ಮೆಗೆ ಇಲ್ಲವಾಗಿಸುವುದಂದ್ರೆ, ಟ್ವಿಟರ್ ಉದ್ದೇಶಪೂರ್ವಕವಾಗೇ ಕಿರುಕುಳ ನೀಡಿದಂತಿದೆ ಎಂದು ಕಿಡಿಕಾರಿದ್ದಾರೆ.
Friends! Something highly peculiar happened today. Twitter denied access to my account for almost an hour on the alleged ground that there was a violation of the Digital Millennium Copyright Act of the USA and subsequently they allowed me to access the account. pic.twitter.com/WspPmor9Su
— Ravi Shankar Prasad (@rsprasad) June 25, 2021
Union IT Minister Ravi Shankar Prasad hit out at Twitter for denying him access to his account for almost an hour, saying that his statements "calling out the high-handedness and arbitrary actions of Twitter have clearly ruffled its feathers".
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm