ಬ್ರೇಕಿಂಗ್ ನ್ಯೂಸ್
24-06-21 11:11 am Headline Karnataka News Network ದೇಶ - ವಿದೇಶ
ಫಿಲಿಪೈನ್ಸ್, ಜೂನ್ 24: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಬಂಧಿಸಬೇಕಾಗುತ್ತದೆ. ಒಂದೋ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ. ಇಲ್ಲದಿದ್ದರೆ ಫಿಲಿಪೈನ್ಸ್ ಬಿಟ್ಟು ಹೋಗಿ. ಭಾರತಕ್ಕೋ, ಅಮೆರಿಕಕ್ಕೆ ಎಲ್ಲಾದ್ರೂ ಹೋಗಿ ಅಡಗಿಕೊಳ್ಳಿ.. ಹೀಗೆಂದು ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟ್ ಅಬ್ಬರಿಸಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಕೊರೊನಾ ಸೋಂಕಿಗೆ ಅತಿ ಹೆಚ್ಚು ಪೀಡಿತವಾಗಿರುವ ಫಿಲಿಪೈನ್ಸ್ ದೇಶದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಆದರೆ ಅಲ್ಲಿನ ಜನರು ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಿಟ್ಟಾಗಿರುವ ಅಧ್ಯಕ್ಷ ರೋಡ್ರಿಗೋ, ನನ್ನ ಕೈಯಲ್ಲಿ ತಪ್ಪು ಕೆಲಸ ಮಾಡಿಸಬೇಡಿ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿ ಎದುರಾಗಿದೆ. ಎಲ್ಲರೂ ವ್ಯಾಕ್ಸಿನ್ ಹಾಕಿಸ್ಕೊಳ್ಳಲೇಬೇಕು. ಇಲ್ಲದಿದ್ದರೆ ನಾನು ಬಂಧಿಸಬೇಕಾಗುತ್ತದೆ. ಬಲವಂತವಾಗಿ ವ್ಯಾಕ್ಸಿನ್ ಚುಚ್ಚಬೇಕಾಗುತ್ತದೆ. ನಾವು ಈಗಾಗ್ಲೇ ಕಷ್ಟದಲ್ಲಿದ್ದು, ಇನ್ನಷ್ಟು ಕಠಿಣ ಸ್ಥಿತಿಗೆ ನೂಕಬೇಡಿ ಎಂದಿದ್ದಾರೆ.
ಆದರೆ, ನನ್ನ ಕೈಗಳಲ್ಲಿ ಆ ರೀತಿಯ ಕೆಲಸ ಮಾಡಿಸಬೇಡಿ. ಬಲವಂತದಿಂದ ಚುಚ್ಚುಮದ್ದು ಹಾಕಿಸುವುದನ್ನು ನೀವು ಬಯಸುವುದಿಲ್ಲ ಎಂದು ಗೊತ್ತು. ಆದರೆ, ವ್ಯಾಕ್ಸಿನ್ ಹಾಕಿಸದೇ ಇದ್ದವರು ಇಲ್ಲಿ ಉಳಿಯಬೇಡಿ. ನೀವು ಭಾರತಕ್ಕೋ, ಅಮೆರಿಕಕ್ಕೋ ಹೋಗಿಬಿಡಿ. ನೀವು ಹೆಚ್ಚು ಕಾಲ ಲಸಿಕೆ ಪಡೆಯದೇ ಇಲ್ಲಿ ಉಳಿದುಕೊಂಡರೆ ನೀವೇ ಇಲ್ಲಿ ವೈರಸ್ ಹರಡುತ್ತೀರಿ. ಹಾಗಾಗಿ ಆದಷ್ಟು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ರೋಡ್ರಿಗೋ ಜನರನ್ನು ಬೆದರಿಸಿದ್ದಾರೆ.
ಕೆಲವು ಮೂರ್ಖರು ಲಸಿಕೆ ಪಡೆಯದೇ ಉಳಿದುಕೊಂಡಿದ್ದಾರೆ. ಅವರೇ ವೈರಸನ್ನು ಹೆಚ್ಚು ಹರಡುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳುವಾಗ, ಬೇರೆಯವರಿಗೆ ಹರಡುತ್ತಾರೆ. ಯಾರು ಲಸಿಕೆ ಹಾಕಿಸಿಕೊಳ್ಳದೆ, ಓಡಾಟ ಮಾಡ್ತೀರೋ ಅಂಥವರಿಗೆ ನಾನೇ ವ್ಯಾಕ್ಸಿನ್ ಹಾಕಿಸುತ್ತೇನೆ. ಅವರಿಗೆ ಹಂದಿಗಳಿಗೆ ಕೊಡುವ ivermectin ಇಂಜೆಕ್ಷನ್ ಚುಚ್ಚುತ್ತೇನೆ. ಅದು ನಿಮ್ಮಲ್ಲಿರುವ ವೈರಸ್ಸನ್ನೂ ಕೊಲ್ಲುತ್ತದೆ. ಜೊತೆಗೆ, ನಿಮ್ಮನ್ನೂ ಮುಗಿಸುತ್ತದೆ ಎಂದು ರೋಡ್ರಿಗೋ ಗುಡುಗಿದ್ದಾರೆ.
The Philippines President Rodrigo Duterte said during a public address that people who are not willing to get vaccinated will be arrested. He also asked the vaccine decliners to go to India or America.
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
15-04-25 09:57 pm
Mangalore Correspondent
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm