ಬ್ರೇಕಿಂಗ್ ನ್ಯೂಸ್
23-06-21 04:19 pm Headline Karnataka News Network ದೇಶ - ವಿದೇಶ
ನವದೆಹಲಿ, ಜೂನ್ 23: ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ದೇಶ ಬಿಟ್ಟು ಓಡಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರಿಗೆ ಸೇರಿದ ವಿವಿಧ ಕಡೆ ಇರುವ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ. ಈಗಾಗ್ಲೇ 18,170 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದು, ಒಟ್ಟು ಸಾಲ ಬಾಬ್ತು ಮೌಲ್ಯದ 80 ಶೇಕಡಾ ಆಸ್ತಿಯನ್ನು ಜಪ್ತಿ ಮಾಡಿದಂತಾಗಿದೆ. ಇದರ ಭಾಗವಾಗಿ ಜಪ್ತಿ ಮಾಡಿರುವ ಆಸ್ತಿಯ ಒಟ್ಟು ಮೌಲ್ಯದ ಅರ್ಧದಷ್ಟನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿವಿಧ ಬ್ಯಾಂಕುಗಳಿಗೆ ಮರು ಪಾವತಿ ಮಾಡಿದ್ದಾರೆ.
ಸಾಲ ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ 9317 ಕೋಟಿ ರೂಪಾಯಿ ಮೊತ್ತವನ್ನು ಜಮಾ ಮಾಡಿದ್ದೇವೆ ಎಂದು ಇಡಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹುಲ್ ಚೋಕ್ಸಿ ಪ್ರತ್ಯೇಕವಾಗಿ ಒಟ್ಟು 22,585 ಕೋಟಿ ರೂ. ಸಾಲವನ್ನು ವಿವಿಧ ಬ್ಯಾಂಕುಗಳಿಂದ ಪಡೆದಿದ್ದು ಆಬಳಿಕ ಪಾವತಿಸದೆ ಮೋಸ ಮಾಡಿದ್ದರು. ಈ ಪೈಕಿ 18 ಸಾವಿರ ಕೋಟಿಯಷ್ಟು ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ದೇಶದ ವಿವಿಧ ಕಡೆಗಳಿಂದ ವಶಕ್ಕೆ ಪಡೆದಿದ್ದಾರೆ.
ನ್ಯಾಯಾಲಯದ ಆದೇಶ ಪ್ರಕಾರ, ಇಂದಿನ ವರೆಗೆ 8441 ಕೋಟಿ ರೂ. ಮೊತ್ತದ ಆಸ್ತಿಯನ್ನು ಬ್ಯಾಂಕುಗಳಿಗೆ ವರ್ಗಾಯಿಸಲಾಗಿದೆ. ಅಲ್ಲದೆ, ಜೂನ್ 25ರ ಒಳಗೆ ಮತ್ತೆ ರೂ. 800 ಕೋಟಿ ಮೊತ್ತವನ್ನು ವರ್ಗಾವಣೆ ಮಾಡುತ್ತೇವೆ. ಇದೇ ವೇಳೆ, ಷೇರು ಮೌಲ್ಯದ ಆಸ್ತಿಯನ್ನೂ ಸೇಲ್ ಮಾಡಿ ಮತ್ತೆ 800 ರೂ. ಮೊತ್ತವನ್ನು ಬ್ಯಾಂಕಿಗೆ ವರ್ಗಾಯಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಸ್ಪೆಷಲ್ ಕೋರ್ಟ್ ಆದೇಶದಂತೆ, ಸಾಲ ವಸೂಲಾತಿ ಪ್ರಾಧಿಕಾರವು ಈಗಾಗ್ಲೇ ಉದ್ಯಮಿ ವಿಜಯ್ ಮಲ್ಯಗೆ ಸೇರಿದ 5800 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದು, ಅದರಿಂದ ಬಂದ ಹಣವನ್ನು ಇಡಿಗೆ ವರ್ಗಾಯಿಸಿತ್ತು. ಇಡಿ ಅಧಿಕಾರಿಗಳು ಅದನ್ನೀಗ ಆಯಾ ಬ್ಯಾಂಕುಗಳಿಗೆ ಮರು ಪಾವತಿ ಮಾಡುತ್ತಿದ್ದಾರೆ.
Assets worth ₹ 9,371 crores belonging to fugitive businessmen Vijay Mallya, Nirav Modi, Mehul Choksi have been transferred by the Enforcement Directorate to state-run banks that will help them recover losses on account of the fraud.
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
15-04-25 09:57 pm
Mangalore Correspondent
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm