ಬ್ರೇಕಿಂಗ್ ನ್ಯೂಸ್
19-06-21 02:36 pm Headline Karnataka News Network ದೇಶ - ವಿದೇಶ
Photo credits : barandbench.com
ದೆಹಲಿ, ಜೂನ್ 19 : ಕಳೆದ ವರ್ಷ ಕೊರೊನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಾಗ, ತಬ್ಲಿಘಿ ಜಮಾತ್ ಅನ್ನು ಗುರಿಯಾಗಿಸಿ ದ್ವೇಷಪೂರಿತ ವರದಿ ಪ್ರಸಾರ ಮಾಡಿರುವುದನ್ನು ಉಲ್ಲೇಖಿಸಿ ಕನ್ನಡದ ಎರಡು ಖಾಸಗಿ ಸುದ್ದಿ ವಾಹಿನಿಗಳು ಹಾಗೂ ಒಂದು ಇಂಗ್ಲಿಷ್ ನ್ಯೂಸ್ ಚಾನಲ್ ವಿರುದ್ಧ ನೇಷನಲ್ ಬ್ರಾಡ್ಕ್ಯಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (NBSA) ಕಠಿಣ ಕ್ರಮಕ್ಕೆ ಮುಂದಾಗಿದೆ. ದ್ವೇಷ ಹರಡುವ ರೀತಿಯ ಕಾರ್ಯಕ್ರಮಗಳ ಬಗ್ಗೆ ದೂರಿನ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕೊರೊನಾ ಮೊದಲನೇ ಅಲೆ ಕಂಡುಬಂದ ಸಂದರ್ಭದಲ್ಲಿ ಈ ಖಾಸಗಿ ವಾರ್ತಾ ವಾಹಿನಿಗಳು ತಬ್ಲಿಘಿ ಜಮಾತ್ ಹಾಗೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ವರದಿ ಮಾಡಿದ್ದ ಬಗ್ಗೆ ನೀಡಿದ್ದ ದೂರು ಆಧರಿಸಿ ಎನ್ಬಿಎಸ್ಎ ಈ ಕ್ರಮ ಕೈಗೊಂಡಿದೆ.
ಕನ್ನಡದ ನ್ಯೂಸ್ 18 ವಾಹಿನಿಗೆ ಒಂದು ಲಕ್ಷ ರೂ. ಮತ್ತು ಸುವರ್ಣ ವಾಹಿನಿಗೆ 50 ಸಾವಿರ ದಂಡ ವಿಧಿಸಲಾಗಿದೆ. ಎರಡೂ ವಾಹಿನಿಗಳಲ್ಲಿ ತಬ್ಲಿಘಿ ಜಮಾತ್ ಗುರಿಯಾಗಿಸಿ ಮಾಡಿದ್ದ ವರದಿಯ ಯೂಟ್ಯೂಬ್ ಕ್ಲಿಪಿಂಗ್, ಕಾರ್ಯಕ್ರಮಗಳು ಮತ್ತು ವರದಿಗಳನ್ನು ಏಳು ದಿನಗಳ ಒಳಗೆ ತೆಗೆದು ಹಾಕುವಂತೆ ಸೂಚಿಸಿದೆ. ಅಲ್ಲದೆ, ವರದಿಗೆ ಸಂಬಂಧಿಸಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
ಸುವರ್ಣ ವಾಹಿನಿಯು, ಸುದ್ದಿ ಪ್ರಸಾರದ ಮೂಲಭೂತ ಅಂಶಗಳಾದ ನಿಷ್ಪಕ್ಷಪಾತ, ತಟಸ್ಥ ಧೋರಣೆ ಸೇರಿದಂತೆ ಧಾರ್ಮಿಕ ಸಾಮರಸ್ಯದ ಅಂಶಗಳನ್ನು ಉಲ್ಲಂಘಿಸಿದ್ದಾಗಿ ಎನ್ ಬಿಎಸ್ ಎ ಹೇಳಿದೆ.
ಇದಲ್ಲದೆ, ತಮ್ಮ ಸುದ್ದಿ ವಾಹಿನಿಗಳಲ್ಲಿ ಜೂನ್ 23ರ ಒಳಗೆ ಈ ಬಗ್ಗೆ ವಿಷಾದ ಪ್ರಕಟಣೆಯನ್ನೂ ನೀಡಬೇಕು. ಅದು ಟೆಕ್ಸ್ಟ್ ಮತ್ತು ವಾಯ್ಸ್ ಓವರ್ ಎರಡನ್ನೂ ಒಳಗೊಂಡಿರಬೇಕು ಎನ್ನುವ ಷರತ್ತನ್ನೂ ನೀಡಲಾಗಿದೆ.
ಸುದ್ದಿ ವಾಹನಿಗಳು ತಬ್ಲಿಘಿ ಬಗ್ಗೆ ಪ್ರಸಾರ ಮಾಡಿದ ಕಾರ್ಯಕ್ರಮಗಳಲ್ಲಿ ಆಕ್ಷೇಪಾರ್ಹ ರೀತಿ ವರ್ತಿಸಿದ್ದವು. ಅಲ್ಲದೆ, ಕಾರ್ಯಕ್ರಮವನ್ನು ದುರುದ್ದೇಶಪೂರಿತವಾಗಿ ಮತ್ತು ಸದಭಿರುಚಿ ಇಲ್ಲದ ರೀತಿ ಹಾಗೂ ಒಂದು ಸಮುದಾಯಕ್ಕೆ ನೋವಾಗುತ್ತದೆ ಎನ್ನುವ ಕಾಳಜಿಯನ್ನು ಮರೆತು ಮಾಡಲಾಗಿತ್ತು ಎಂದು ಎನ್ ಬಿಎಸ್ ಎ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕ್ಯಾಂಪೇನ್ ಅಗೈನ್ಸ್ಟ್ ಹೇಟ್ ಸ್ಪೀಚ್ (CAHS) ಎನ್ನುವ ವಿಂಗ್ 2020ರ ಫೆಬ್ರವರಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಮಾಧ್ಯಮದಲ್ಲಿ ವರದಿಯಾಗುವ ಧ್ವೇಷಪೂರಿತ ಸುದ್ದಿಗಳನ್ನು ಗಮನಿಸಿ, ಆಯಾ ಸಂಸ್ಥೆಗಳಿಗೆ ದೂರು ನೀಡುತ್ತದೆ. ಸಿಎಎಚ್ಎಸ್ ದೂರಿನ ಅನ್ವಯ ಒಟ್ಟು ಮೂರು ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ನ್ಯೂಸ್ 18 ಕನ್ನಡ ವಾಹಿನಿಯಲ್ಲಿ ಏಪ್ರಿಲ್ 1, 2020ರಂದು ಹಾಗೂ ಸುವರ್ಣ ನ್ಯೂಸ್ನಲ್ಲಿ ಮಾರ್ಚ್ 31, 2020 ರಿಂದ ಏಪ್ರಿಲ್ 4ರ ವರೆಗೆ ಪ್ರಸಾರವಾಗಿದ್ದ ತಬ್ಲಿಘಿ ಜಮಾತ್ ಗುರಿಯಾಗಿಸಿದ ಕಾರ್ಯಕ್ರಮಗಳ ಬಗ್ಗೆ ದೂರು ನೀಡಲಾಗಿತ್ತು. ಇದಲ್ಲದೆ, ಟೈಂಸ್ ನೌ ಇಂಗ್ಲಿಷ್ ವಾಹಿನಿಯೂ ಇದೇ ರೀತಿ ಸುದ್ದಿ ಪ್ರಸಾರ ಮಾಡಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು.
National Broadcasting Standards Authority (NBSA) of News Broadcasters Association (NBA) has fined Kannada channels News18 Kannada and Suvarna News and English channel Times Now has been censured for gaps in reporting news targeting Tablighi Jamaat members last year, complainant Campaign Against Hate Speech (CAHS) said on Thursday.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm