ಬ್ರೇಕಿಂಗ್ ನ್ಯೂಸ್
30-08-20 05:51 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 30: ಭಾರತವು ವಿಶ್ವ ರಾಷ್ಟ್ರಗಳಿಗೆ ಆಟದ ಸಾಮಾನುಗಳನ್ನು ಪೂರೈಸುವ 'ಟಾಯ್ ಹಬ್' ಆಗಬಲ್ಲ ಸಾಮರ್ಥ್ಯ ಪಡೆದಿದೆ. ಸ್ಥಳೀಯ ಮಟ್ಟದ ಆಟಿಕೆಗಳನ್ನು ವಿಶ್ವ ಮಟ್ಟಕ್ಕೆ ಒಯ್ಯಲು ಈಗ ಸಕಾಲ. ಇದನ್ನು ಬಳಸಿಕೊಳ್ಳಲು ಸ್ಟಾರ್ಟ್ ಅಪ್ ಉದ್ಯಮಿಗಳು ಶ್ರಮ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಮೋದಿ, ಜಗತ್ತಿನ ಟಾಯ್ ಇಂಡಸ್ಟ್ರೀ ಏಳು ಲಕ್ಷ ಕೋಟಿಯಷ್ಟು ವಹಿವಾಟು ಹೊಂದಿದೆ. ಆದರೆ, ಇದರಲ್ಲಿ ಭಾರತದ ಪಾಲು ಇರುವುದು ಅತಿ ಸಣ್ಣದು. ಸ್ಟಾರ್ಟ್ ಅಪ್ ಉದ್ಯಮಿಗಳು ಈ ಬಗ್ಗೆ ಕಾರ್ಯತತ್ಪರ ಆಗಬೇಕು. "ವೋಕಲ್ ಫಾರ್ ಲೋಕಲ್ ಟಾಯ್ಸ್" ಆಗುವಲ್ಲಿ ಯೋಜನೆ ರೂಪಿಸಬೇಕು. ನಮ್ಮ ಹಳ್ಳಿಗಳ ಆಟಿಕೆಗಳು ವಿಶ್ವ ಮಟ್ಟಕ್ಕೆ ಪರಿಚಯ ಆಗಬೇಕು. ಜನರನ್ನು ಸೆಳೆಯಬಲ್ಲ ಆಟಿಕೆಗಳನ್ನು ತಯಾರಿಸಬೇಕು ಎಂದು ಕರೆ ನೀಡಿದ್ದಾರೆ. ಸದ್ಯಕ್ಕೆ ಇಡೀ ಜಗತ್ತಿಗೆ ಚೀನಾ ನಿರ್ಮಿತ ಆಟಿಕೆಗಳ ಪೂರೈಕೆ ಆಗುತ್ತಿದೆ. ಕೊರೊನಾ ಬಳಿಕ ಚೀನಾ ನಿರ್ಮಿತ ವಸ್ತುಗಳಿಗೆ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ನಿರ್ಬಂಧ ವಿಧಿಸಿವೆ. ಇಂಥ ಸನ್ನಿವೇಶದಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತದಲ್ಲಿ ಆಟಿಕೆಗಳ ತಯಾರಿ ಆದರೆ ಟಾಯ್ ಹಬ್ ಆಗಬಹುದು ಎಂದು ಪರೋಕ್ಷವಾಗಿ ಈ ವಿಚಾರ ಎತ್ತದೆ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ. ಇದಲ್ಲದೆ, ಕಂಪ್ಯೂಟರ್ ಗೇಮ್ಸ್ ಅಭಿವೃದ್ಧಿ ಪಡಿಸಲು ಕೂಡ ಯುವ ಉದ್ಯಮಿಗಳು ಮುಂದಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಈಗ ದೇಶದಲ್ಲಿ ಹಬ್ಬಗಳ ಸಮಯ. ನಮ್ಮ ಹಬ್ಬಗಳಿಗೂ ಪ್ರಕೃತಿಗೂ ಹತ್ತಿರದ ಸಂಬಂಧ ಇದೆ. ಇಂಥ ಸಂದರ್ಭದಲ್ಲೇ ಕೊರೊನಾ ನಮ್ಮನ್ನು ಸಂಕಷ್ಟಕ್ಕೀಡು ಮಾಡಿದೆ. ಹಬ್ಬಗಳನ್ನು ಆಚರಿಸುವ ವೇಳೆಯೂ ಜನ ಕೊರೊನಾ ಶಿಸ್ತನ್ನು ಪಾಲಿಸಬೇಕಿದೆ. ಕೃಷಿಕರು ಥರಾವರಿ ಬೆಳೆಗಳನ್ನು ಬೆಳೆಯಬೇಕು. ವಿವಿಧ ಧಾನ್ಯಗಳನ್ನು ಬೆಳೆದು ಸಮೃದ್ಧಿ ಗಳಿಸಬೇಕು ಎಂದು ಹೇಳಿದ್ದಾರೆ.
2022ಕ್ಕೆ ದೇಶ ಸ್ವಾತಂತ್ರ್ಯ ಗಳಿಸಿ 75 ಸಂವತ್ಸರಗಳನ್ನು ಪೂರೈಸಲಿದೆ. ಇಂಥ ಸಂದರ್ಭದಲ್ಲಿ ನಮ್ಮ ಶಿಕ್ಷಕರಿಗೆ ಹೊಸ ಜವಾಬ್ದಾರಿಯನ್ನು ಕೊಡುತ್ತಿದ್ದೇನೆ. ಸ್ವಾತಂತ್ರ್ಯಕ್ಕಾಗಿ ತೆರೆಮರೆಯಲ್ಲಿ ದುಡಿದ 'ಅನ್ ಸಂಗ್ ಹೀರೋ'ಗಳನ್ನ ಬೆಳಕಿಗೆ ತರುವಂತಾಗಲು ಕೊಡುಗೆ ನೀಡಬೇಕು. ನಮ್ಮ ಯುವಜನರು ಇಂಥ ಎಲೆಮರೆಯ ಕಾಯಿಗಳ ಬಗ್ಗೆ ಅರಿವು ಹೊಂದುವ ಅಗತ್ಯವಿದೆ ಎಂದು ಮೋದಿ ಸೂಚ್ಯವಾಗಿ ಹೇಳಿದ್ದಾರೆ.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm