ಬ್ರೇಕಿಂಗ್ ನ್ಯೂಸ್
11-06-21 04:15 pm Headline Karnataka News Network ದೇಶ - ವಿದೇಶ
ಪಾಲಕ್ಕಾಡ್, ಜೂನ್ 11: ಹನ್ನೊಂದು ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವತಿ ನೆರೆಮನೆಯ ಯುವಕನ ಜೊತೆ ಮನೆ ಒಳಗಿನ ಕೊಠಡಿ ಒಳಗೇ ವಾಸ ಮಾಡುತ್ತಿದ್ದ ನಿಗೂಢ ಪ್ರೇಮ ಪ್ರಕರಣ ಕೇರಳದ ಪಾಲ್ಘಾಟ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
2010 ರ ಫೆಬ್ರವರಿ ತಿಂಗಳಲ್ಲಿ ಒಂದು ದಿನ ರಾತ್ರಿ ಸಜಿತಾ ಎಂಬ ಯುವತಿ ದಿಢೀರ್ ನಾಪತ್ತೆಯಾಗಿದ್ದಳು. ಈ ಬಗ್ಗೆ ಸ್ಥಳೀಯ ಆಯಿಲೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಲ್ಲಿ ಹುಡುಕಾಡಿದ್ರೂ ಯುವತಿ ಪತ್ತೆಯಾಗಿರಲಿಲ್ಲ.
ಇದೀಗ ಸಜಿತಾಗೆ 28 ವರ್ಷ. ಕಾಣೆಯಾದ 11 ವರ್ಷಗಳನ್ನು ತನ್ನ ಮನೆಯಿಂದ ಕೇವಲ 500 ಮೀಟರ್ ಅಂತರದಲ್ಲಿರುವ ಮನೆಯಲ್ಲೇ ರಹಸ್ಯವಾಗಿ ಪ್ರೇಮಿಯ ಜೊತೆಗೆ ಜೀವನ ನಡೆಸುತ್ತಿದ್ದುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಪಾಲಕ್ಕಾಡ್ನ ಅಯಿಲುರ್ ಗ್ರಾಮದ ಮನೆಯಲ್ಲಿ ಸಜಿತಾ ರಹಸ್ಯವಾಗಿ ರೆಹ್ಮಾನ್ ಎಂಬ ಯುವಕನೊಂದಿಗೆ ಸಹಜೀವನ ನಡೆಸುತ್ತಿದ್ದಳು ಎನ್ನುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದು ಬಯಲಾಗಲು ಕಾರಣವಾಗಿದ್ದು ಯುವಕ ರೆಹ್ಮಾನ್ ನಾಪತ್ತೆ ಪ್ರಕರಣ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ರೆಹ್ಮಾನ್, ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ. ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಹೊರಗೆ ತೆರಳಿದ್ದ ಬಗ್ಗೆ ಆತನ ತಂದೆ ಅಬ್ದುಲ್ ಬಶೀರ್ ಪೊಲೀಸರಿಗೆ ದೂರು ನೀಡಿದ್ದರು.
ಆದರೆ, ಮೂರು ತಿಂಗಳ ನಂತರ ರೆಹ್ಮಾನ್ ಪಕ್ಕದ ಗ್ರಾಮ ಒಂದರಲ್ಲಿ ಇರುವುದು ಸೋದರನಿಗೆ ಗೊತ್ತಾಗಿದ್ದು ಪೊಲೀಸರಿಗೆ ತಿಳಿಸಿದ್ದಾನೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ, ಸಜಿತಾಳ ಜೊತೆ ಹೊಸ ಮನೆ ಮಾಡಿರುವುದು ಬಯಲಾಗಿದೆ. ಅಲ್ಲದೆ, ಹಿಂದಿನ ಮನೆಯಲ್ಲೇ ಕಳೆದ 11 ವರ್ಷಗಳಿಂದ ರೆಹ್ಮಾನ್ ಕೊಠಡಿ ಒಳಗೇ ಸಜಿತಾ ಜೀವಿಸುತ್ತಿದ್ದ ವಿಚಾರವೂ ತಿಳಿದುಬಂದಿದೆ. ಅಚ್ಚರಿ ಅಂದ್ರೆ, ರೆಹ್ಮಾನ್ ಜೊತೆಗೆ ಸಜಿತಾ ಅದೇ ಮನೆಯಲ್ಲಿ ಇದ್ದುದು ಹನ್ನೊಂದು ವರ್ಷಗಳಿಂದಲೂ ಗೊತ್ತಿರಲಿಲ್ಲವಂತೆ.
'ರೆಹ್ಮಾನ್ ತನ್ನ ಕೊಠಡಿಯ ಹತ್ತಿರ ಯಾರನ್ನು ಸುಳಿಯಲು ಬಿಡುತ್ತಿರಲಿಲ್ಲ. ಕುಟುಂಬದ ಸದಸ್ಯರ ಪೈಕಿ ಯಾರಾದರು ಆತನ ರೂಮಿಗೆ ಹೋದರೆ ತುಂಬಾ ಸಿಟ್ಟಾಗುತ್ತಿದ್ದ. ಮನೆಯಲ್ಲಿದ್ದಾಗ ರೂಮ್ನಲ್ಲೇ ಊಟ ಮಾಡುತ್ತಿದ್ದ. ಯುವಕನ ವರ್ತನೆ ಬಗ್ಗೆ ಮನೆಯವರಿಗೂ ಗಾಬರಿ ಹುಟ್ಟಿಸಿತ್ತು.
ರಾತ್ರಿ ವೇಳೆ ಮನೆಯವರೆಲ್ಲ ಮಲಗಿದ ಬಳಿಕ ಸಜಿತಾ ಮನೆಯಿಂದ ಹೊರಗೆ ಬರುತ್ತಿದ್ದಳು. ಕಿಟಕಿಯನ್ನು ಹಾರಿ ರಾತ್ರಿ ವೇಳೆಯೇ ಟಾಯ್ಲೆಟ್ ಹೋಗುತ್ತಿದ್ದಳು. ಇದರಿಂದ ಬಿಡುಗಡೆ ಆಗುವ ಬಗ್ಗೆ ಯೋಚನೆ ಮಾಡಿದ್ದ ಪ್ರೇಮಿಗಳು ಬೇರೆ ಮನೆ ಮಾಡಲು ಪ್ಲಾನ್ ಹಾಕಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದ ಅದು ಸಾಧ್ಯವಾಗಿರಲಿಲ್ಲ. ಸಜಿತಾಗೆ ಬೋರ್ ಆಗದಿರಲಿ ಎಂದು ರೂಮ್ ಒಳಗೆ ಸಣ್ಣ ಟಿವಿಯನ್ನು ಅಳವಡಿಸಿದ್ದ. ಅದರಲ್ಲಿ ಇಯರ್ ಫೋನ್ ಹಾಕ್ಕೊಂಡೇ ಟಿವಿ ನೋಡುತ್ತಾ ಮನೆಯೊಳಗೆ ಕಾಲಕಳೆಯುತ್ತಿದ್ದಳು.
ಇವರಿಬ್ಬರ ಧರ್ಮ ಬೇರೆಯಾಗಿದ್ದರಿಂದ ಹೇಳಿಕೊಳ್ಳಲು ಹೆದರಿದ್ದರು. ಯುವತಿ ಕಾಣೆಯಾಗಿ ಹತ್ತು ವರ್ಷ ಕಳೆದಿದ್ದರಿಂದ ಗ್ರಾಮದ ಜನರೂ ಮರೆತಿದ್ದರು. ಆಕೆ ಬದುಕಿದ್ದಾಳೋ, ಎಲ್ಲಿದ್ದಾಳೋ ಎಂದು ತಿಳಿಯದೆ ಮನೆಯವರೂ ಬಿಟ್ಟಿದ್ದರು.
ಇದೀಗ ನಾಪತ್ತೆಯಾಗಿದ್ದ ಯುವತಿ ಸಜಿತಾ ಸ್ವತಃ ರೆಹ್ಮಾನ್ ಜೊತೆಗೆ ಬದುಕುವುದಾಗಿ ಠಾಣೆಯಲ್ಲಿ ಹೇಳಿಕೆ ನೀಡಿದ್ದಾಳೆ. ಹೇಳಿಕೆಯನ್ನು ಸ್ವೀಕರಿಸಿದ ಪೊಲೀಸರು ಇಬ್ಬರನ್ನು ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ರೆಹ್ಮಾನ್ ಜೊತೆ ಜೀವಿಸುವುದಾಗಿ ಸಜಿತಾ ಕೋರ್ಟ್ಗೆ ಸ್ಪಷ್ಟಪಡಿಸಿದ ನಂತರ ಆಕೆಯನ್ನು ರೆಹ್ಮಾನ್ ಜೊತೆ ಕಳುಹಿಸಿಕೊಡಲಾಗಿದೆ.
ಹನ್ನೊಂದು ವರ್ಷಗಳ ನಿಗೂಢ ಪ್ರೇಮ ಪ್ರಕರಣ ಕೊನೆಗೂ ಹೊರಗೆ ಬಂದಿದ್ದಲ್ಲದೆ, ಇಡೀ ಗ್ರಾಮದ ಜನರನ್ನು ದಂಗುಬಡಿಸಿದೆ. ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿದ್ದ ತಂದೆ ಅಬ್ದುಲ್ ಬಶೀರ್ ಕೂಡ, ರೆಹ್ಮಾನ್ ಮತ್ತು ಸಜಿತಾರನ್ನು ಕಂಡು ಅಚ್ಚರಿಗೊಂಡಿದ್ದಾರೆ.
An 18-year-old who went missing from Ayalur village in Palakkad 11 years ago has been found living just 500 meters from her parent’s home, spending the past decade in a room with the man she was in love with. While his parents shared the house with him, they were reportedly unaware of the woman’s presence.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm