ಬ್ರೇಕಿಂಗ್ ನ್ಯೂಸ್
03-06-21 12:09 pm Headline Karnataka News Network ದೇಶ - ವಿದೇಶ
Photo credits : tv9kannada
ಚೆನ್ನೈ, ಜೂನ್ 3: ಮಹಾಮಾರಿ ಕೊರೊನಾ ಸೋಂಕು ತಗುಲಿರಬಹುದು ಎಂಬ ಭಯಕ್ಕೆ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಕೊರೊನಾ ಭಯಕ್ಕೆ ಮಗಳೊಂದಿಗೆ ತಂದೆ, ತಾಯಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದು 2-3ದಿನಗಳಿಂದ ಕುಟುಂಬಸ್ಥರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಹಾಗೂ ಜ್ವರ ಕಡಿಮೆಯಾಗದ್ದಿದ್ದರಿಂದ ಕೊರೊನಾ ಬಂದಿರಬಹುದೆಂದು ಶಂಕಿಸಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. ಚೆನ್ನೈನ ತಿರುಮುಲ್ಲಾವಿಯೂಲ್ನ ದಿಲ್ಲಿ ಬಾಬು(70), ಆತನ ಪತ್ನಿ ಮಹೇಶ್ವರಿ, ಹಾಗೂ ಇವರ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿಯೇ ನೇಣು ಹಾಕಿಕೊಂಡು ಇಡೀ ಕುಟುಂಂಬ ಆತ್ಮಹತ್ಯೆ ಮಾಡಿಕೊಂಡಿದೆ. ತಿರುಮುಲ್ಲಾವಿಯೂಲ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಚೆನ್ನೈ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಇನ್ನು ಕೆಲ ತಿಂಗಳ ಹಿಂದೆ ತಮಿಳುನಾಡಿನ ಚೆನ್ನೈನಲ್ಲಿ ಮಕ್ಕಳಿಲ್ಲದ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಕೊರೊನಾ ಸೋಂಕಿನಿಂದಾಗಿ ಗಂಡ-ಹೆಂಡತಿ ಬೇರೆ ಉಳಿಯುವ ಪರಿಸ್ಥಿತಿ ಬರಬಹುದು ಎಂಬ ಭಯಕ್ಕೆ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ತಮ್ಮ ಕೋಣೆಯ ಮನೆಯ ಚಾವಣಿಗೆ ನೀರಿಯ ಮೂಲಕ ಇಬ್ಬರೂ ನೇಣಿಗೆ ಶರಣಾಗಿದ್ದರು. ಅರ್ಜುನನ್ (70) ಮತ್ತು ಅಂಜಲಿ (60) ಮೃತ ದಂಪತಿ. ಮೊದಲಿಗೆ ಅರ್ಜುನನ್ಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದರು. ಆದ್ರೆ ಕೊರೊನಾ ವರದಿ ಇನ್ನೂ ಬಂದಿರಲಿಲ್ಲ. ಆದರೆ ಕೊರೊನಾ ಸೋಂಕು ಇರುವುದು ದೃಢಪಟ್ಟರೆ ಇಬ್ಬರೂ ಬೇರೆ ಇರಬೇಕಾಗುತ್ತೆ ಎಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.
Family Commits to Suicide over Corona Fear in Chennai
09-04-25 11:25 am
HK News Desk
ಮೇ 1ರ ಬಳಿಕ ಪೌರ ಕಾರ್ಮಿಕರ ಸೇವೆ ಖಾಯಂ, ಗುತ್ತಿಗೆ ವ...
07-04-25 11:04 pm
Hubballi Accident: ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ...
07-04-25 08:49 pm
DK Shivakumar, HD Kumaraswamy: ಅಕ್ರಮವಾಗಿ ಭೂಮಿ...
06-04-25 11:56 am
Suicide, Chamarajanagar: ಮಾನಸಿಕ ಖಿನ್ನತೆ ; 14...
05-04-25 10:17 pm
07-04-25 10:53 pm
HK News Desk
ರಾಜ್ಯದ ಬಳಿಕ ಕೇಂದ್ರ ಸರ್ಕಾರದಿಂದಲೂ ಜನರಿಗೆ ಬೆಲೆ ಏ...
07-04-25 10:01 pm
Karnataka Bhavan, Sujay Kumar Shetty: ದಿಲ್ಲಿಯ...
06-04-25 09:23 pm
Waqf land in India: ದೇಶದಲ್ಲಿ ಒಟ್ಟು ಎಷ್ಟು ವಕ್ಫ...
06-04-25 06:39 pm
Annamalai, Bjp: ತಮಿಳಿನಾಡಿನಲ್ಲಿ ಅಣ್ಣಾಮಲೈ ಇಳಿಸಲ...
04-04-25 09:29 pm
08-04-25 08:58 pm
Mangalore Correspondent
PUC Results 2025, Mangalore Udupi topper: ಪಿಯ...
08-04-25 03:00 pm
Praveen Nettaru, Shafi Bellare, SDPI, Mangalo...
07-04-25 07:01 pm
Mangalore Rishab Shetty, Kantara, Daiva: ಮತ್ತ...
07-04-25 05:32 pm
Dr Kalladka Prabhakar Bhat, Mangalore, Digant...
07-04-25 03:38 pm
08-04-25 11:04 pm
Mangalore Correspondent
Fake Note, Dandeli: ದಾಂಡೇಲಿ ; ಖಾಲಿ ಮನೆಯಲ್ಲಿ 1...
08-04-25 10:01 pm
Raichur, Bank of Maharashtra, Gold fraud: 30...
08-04-25 09:26 pm
Pastor John Jebaraj, Sexual Assault, Arrest:...
08-04-25 03:27 pm
Kalaburagi theft: ಅಳಿಯ ಮನೆ ತೊಳಿಯ ; ಕಲಬುರಗಿಯಲ್...
07-04-25 10:51 pm