ಬ್ರೇಕಿಂಗ್ ನ್ಯೂಸ್
01-06-21 04:46 pm Headline Karnataka News Network ದೇಶ - ವಿದೇಶ
ನವದೆಹಲಿ, ಜೂನ್ 1: ಕೊರೊನಾ ಸೋಂಕಿನ ಅಟ್ಟಹಾಸದ ಮಧ್ಯೆ ಸಿಬಿಎಸ್ಐ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾಡಬೇಕೇ, ಬೇಡವೇ ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. ಈಗಾಗ್ಲೇ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರಿಂದ ಅಭಿಪ್ರಾಯಗಳನ್ನು ಪಡೆದಿದ್ದು, ಆ ಬಗ್ಗೆ ಅಧಿಕಾರಿಗಳಿಂದ ಪರಾಮರ್ಶೆ ನಡೆದಿದೆ.
ಇಂದು ರಾತ್ರಿ 9 ಗಂಟೆಗೆ ಪ್ರಮುಖ ಸಚಿವರು ಮತ್ತು ಅಧಿಕಾರಿಗಳ ಜೊತೆ ಮೋದಿ ಚರ್ಚೆ ನಡೆಸಲಿದ್ದು, ಅಂತಿಮ ನಿರ್ಧಾರಕ್ಕೆ ಬಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನ್ಯೂಸ್ 18 ರಾಷ್ಟ್ರೀಯ ವಾಹಿನಿಯಲ್ಲಿ ವರದಿ ದೃಢಪಡಿಸಲಾಗಿದೆ. ಪರೀಕ್ಷೆ ನಡೆಸುವ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರತಿನಿಧಿಗಳ ಸಭೆ ಮತ್ತು ಚರ್ಚೆಯ ಬಳಿಕ ಮೂರು ವಿಚಾರಗಳಲ್ಲಿ ಅಂತಿಮ ನಿರ್ಣಯಕ್ಕೆ ಬರಲಾಗಿತ್ತು.

ಕಳೆದ ಬಾರಿಯೂ ಪರೀಕ್ಷೆ ನಡೆಸದೇ ಪಾಸ್ ಮಾಡಿದ್ದರಿಂದ ಈ ಬಾರಿ ಸರಳವಾಗಿಯಾದರೂ ಪರೀಕ್ಷೆ ನಡೆಸಬೇಕೆಂಬ ಅಭಿಪ್ರಾಯವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮೂರು ವಿಚಾರಗಳ ಬಗ್ಗೆ ನಿರ್ಧಾರಕ್ಕೆ ಬರಲಾಗಿತ್ತು. ಅವುಗಳೆಂದರೆ, ಎ. ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸುವುದು, ಬಿ. ಅಬ್ಜೆಕ್ಟಿವ್ ಮಾದರಿಯಲ್ಲಿ ನೇರ ಉತ್ತರದ ಪರೀಕ್ಷೆ ನಡೆಸುವುದು, ಸಿ. ಹಿಂದಿನ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ನಿರ್ವಹಣೆ ಆಧರಿಸಿ, ಅಂಕ ನೀಡುವುದು. ಈ ಬಗ್ಗೆ ಕೇಂದ್ರ ಸರಕಾರ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದು, ನಿರ್ಣಯವನ್ನು ಸುಪ್ರೀಂ ಕೋರ್ಟಿಗೆ ಜೂನ್ 3ರಂದು ಸಲ್ಲಿಸಲಿದೆ.
ಈಗಾಗ್ಲೇ ಸಿಬಿಎಸ್ ಐ ಬೋರ್ಡ್ ಜುಲೈ 15ರಿಂದ 26ರ ವರೆಗೆ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಪ್ರಕಟಿಸಿತ್ತು. ಆದರೆ, ಕೊರೊನಾ ಮಿತಿಮೀರಿದ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಯ ನೆಪದಲ್ಲಿ ಪ್ರಯೋಗಕ್ಕೆ ಒಡ್ಡುವುದು ಬೇಡ ಎಂದು ಪೋಷಕರು ಕೋರ್ಟ್ ಕದ ತಟ್ಟಿದ್ದರು. ಇದರ ಮಧ್ಯದಲ್ಲೇ ಸಿಐಎಸ್ ಇ ಬೋರ್ಡ್, ವಿದ್ಯಾರ್ಥಿಗಳ ಕಳೆದ ಮೂರು ವರ್ಷಗಳ ನಿರ್ವಹಣೆಯ ಬಗ್ಗೆ ವರದಿ ಸಂಗ್ರಹಿಸಲು ಶಾಲೆಗಳಿಗೆ ಸೂಚನೆ ನೀಡಿದೆ. ಅದರ ವರದಿಯನ್ನು ಜೂನ್ 7ರ ಒಳಗೆ ಸಲ್ಲಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೆ ಹಿಂದಿನ ಸಾಧನೆಯನ್ನು ಪರಿಗಣಿಸಿ ಅಂಕ ನೀಡುವುದಕ್ಕೇ ಸರಕಾರ ಒತ್ತು ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
CBSE Class 12 board exam 2021 Live Updates: PM Modi will chair a key meeting to discuss options. Education minister Ramesh Pokhriyal has been admitted to AIIMS due to post-COVID complications.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
18-04-26 11:31 pm
HK News Desk
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
18-04-26 10:37 pm
HK News Staffer
180 ಅಪ್ರಾಪ್ತ ಬಾಲಕಿಯರ 350 ಅಶ್ಲೀಲ ವಿಡಿಯೋ ವೈರಲ್...
18-04-26 03:50 pm
ಟಿಸಿಎಸ್ ಕಂಪನಿಯಲ್ಲಿ ಕಾರ್ಪೊರೇಟ್ ಜಿಹಾದ್ ; ತಲೆಮರೆ...
17-04-26 06:48 pm
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm