ಬ್ರೇಕಿಂಗ್ ನ್ಯೂಸ್
31-05-21 05:22 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 31:ವಾತಾವರಣದಲ್ಲಿ ತಾಪಮಾನದ ಹೆಚ್ಚಳ ಜಗತ್ತಿನ ಜೀವ ಸಂಕುಲಕ್ಕೆ ಗಂಡಾಂತರ ತಂದೊಡ್ಡಲಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮತ್ತು ಗಾಳಿಯಲ್ಲಿ ತೇವಾಂಶ ತೇವಾಂಶ ಕಡಿಮೆಯಾಗುತ್ತಿರುವುದರಿಂದ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
2003ರಿಂದ 2019ರ ವರೆಗಿನ 17 ವರ್ಷಗಳ ಸುದೀರ್ಘ ಪರಿಸರ ಅಧ್ಯಯನದಲ್ಲಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗುವುದು, ಉಷ್ಣಾಂಶ ಹೆಚ್ಚುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಸಾಗರ ಮತ್ತು ಭೂಭಾಗದ ಪ್ರದೇಶದಲ್ಲಿ ನಡೆಸಿದ ಅಧ್ಯಯನದಲ್ಲಿ ಗಾಳಿಯಲ್ಲಿ ನೀರಿನಂಶದ ಪ್ರಮಾಣದಲ್ಲಿ ಹತ್ತು ಶೇಕಡಾದಷ್ಟು ಬದಲಾವಣೆ ಆಗಿರುವುದನ್ನು ಪತ್ತೆ ಮಾಡಿದ್ದಾರೆ.
Evapotranspiration (ಬಾಷ್ಪೀಕರಣ) ಎಂದು ಕರೆಯಲಾಗುವ ಈ ಪ್ರಕ್ರಿಯೆಯಿಂದ ಜಗತ್ತಿನ ಜಲ ವೃತ್ತದಲ್ಲಿ ತೀವ್ರ ಏರಿಳಿತ ಆಗಿರುವುದು ಕಂಡುಬಂದಿದೆ. ಇದರಿಂದ ಭೂಮಿಯಲ್ಲಿ ಜೀವ ಸಂಕುಲದ ಬದುಕಿಗೆ ತೀವ್ರ ಪರಿಣಾಮ ಎದುರಾಗುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳು ಗಮನ ಸೆಳೆದಿದ್ದಾರೆ. ನಾಸಾ ಸಂಸ್ಥೆಯ ಪಾಸ್ಕೋಲಿನಿ ಮತ್ತು ಕ್ಯಾಂಬೆಲ್ ಜೋಡಿ ನಡೆಸಿರುವ ಅಧ್ಯಯನದ ವರದಿ ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಭೂಮಿಯಲ್ಲಿ ಜಲ ವೃತ್ತವು ಸಂಕೀರ್ಣ ಜಾಲವನ್ನು ಹೊಂದಿದ್ದು ನೆಲದ ಮೇಲಿರುವ ನೀರು ಆವಿಯಾಗಿ ತೇವಾಂಶ ಹೆಚ್ಚುಗೊಂಡು ಮಳೆಯ ರೂಪದಲ್ಲಿ ಮತ್ತೆ ನೆಲಕ್ಕೆ ಸುರಿಯುವುದು. ಇದರಿಂದ ಮನುಷ್ಯ ಸೇರಿದಂತೆ ಸಕಲ ಜೀವ, ಸಸ್ಯ ಸಂಕುಲ ಬದುಕಲು ಕಾರಣವಾಗುತ್ತದೆ. ಆದರೆ, ಈ ರೀತಿಯ ಪ್ರಾಕೃತಿಕ ಜಲ ವೃತ್ತಕ್ಕೇ ಕೇಡು ಬಂದರೆ, ಸಕಾಲದಲ್ಲಿ ಮಳೆಯಾಗದೆ ಪರಿಣಾಮ ಎದುರಾದರೆ ಜೀವ ಸಂಕುಲಕ್ಕೇ ಆಪತ್ತು ಎದುರಾಗುತ್ತದೆ. ಕೆಲವು ಕಡೆ ಮಳೆಯಾಗದೇ ಅಲ್ಲಿನ ಭೂಭಾಗ ತೀವ್ರ ಬರಕ್ಕೆ ಸಾಕ್ಷಿಯಾಗುತ್ತದೆ. ಹಾಗಾದಲ್ಲಿ, ಅಲ್ಲಿ ಜೀವ ಸಂಕುಲ ಉಳಿಯುವುದಕ್ಕೂ ಸಾಧ್ಯವಾಗಲ್ಲ. ಅಂತಹದ್ದೇ ಸ್ಥಿತಿ ಅಲ್ಲಲ್ಲಿ ಎದುರಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ತಾಪಮಾನದ ಹೆಚ್ಚಳದಿಂದಾಗಿ ಧ್ರುವ ಪ್ರದೇಶಗಳಲ್ಲಿ ಹಿಮಗಡ್ಡೆಗಳು ಕರಗುವುದು ಕಣ್ಣಿಗೆ ಕಾಣುವ ರೀತಿಯ ಬದಲಾವಣೆಗಳಾಗಿದ್ದರೆ, ಭೂಮಿಯಲ್ಲಿ ಇದಕ್ಕಿಂತ ತೀವ್ರ ರೀತಿಯ ಬದಲಾವಣೆಗಳು ಕಣ್ಣಿಗೆ ಕಾಣದ ರೀತಿ ಘಟಿಸುತ್ತಿರುತ್ತವೆ. ಜಲ ವೃತ್ತದಲ್ಲಿ ಬದಲಾವಣೆ ಆಗುತ್ತಿರುವುದೂ ಇದರಲ್ಲೊಂದು. ನೆಲಕ್ಕೆ ಬಿದ್ದ ನೀರು ನದಿಗೆ ಸೇರುವ ಬದಲು ಆವಿಯಾಗುವುದು ಕೂಡ ದೊಡ್ಡ ರೀತಿಯ ಪರಿಸರ ಬಾಧಕ ಬದಲಾವಣೆ ಎಂದು ತಮ್ಮ ವರದಿಯಲ್ಲಿ ಪಾಸ್ಕೊಲಿನಿ ಮತ್ತು ಕ್ಯಾಂಬೆಲ್ ಹೇಳಿದ್ದಾರೆ.
Cyclones Yaas and Tauktae have caused enormous damage on Indian coasts. They won’t be the last cyclones to maraud us as climate change intensifies. We have been dealt an unfair hand, but we must face it.
04-04-25 10:54 pm
HK News Desk
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
04-04-25 11:07 pm
Mangalore Correspondent
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm