ಬ್ರೇಕಿಂಗ್ ನ್ಯೂಸ್
29-05-21 05:25 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 29: ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಮೂಗುದಾರ ತೊಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ ಹೊಸ ರೀತಿಯ ಐಟಿ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ, ಸರಕಾರದ ಐಟಿ ಕಾನೂನುಗಳನ್ನು ಪಾಲನೆ ಮಾಡಲ್ಲ ಎಂದು ಟ್ವಿಟರ್ ಮತ್ತು ವಾಟ್ಸಪ್ ಕಂಪೆನಿಗಳು ಕೋರ್ಟ್ ಮೆಟ್ಟಿಲೇರಿವೆ. ಇದೇ ಸಂದರ್ಭದಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಇಂಡಿಯಾ ಟುಡೇ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸೋಶಿಯಲ್ ಮೀಡಿಯಾ ವಿಚಾರದಲ್ಲಿ ಕಟು ವಾಸ್ತವಗಳನ್ನು ಹೇಳಿಕೊಂಡಿದ್ದಾರೆ. ಅದರ ಅನುವಾದ ಇಲ್ಲಿದೆ ನೋಡಿ..
ಪ್ರಶ್ನೆ- ಸೋಶಿಯಲ್ ಮೀಡಿಯಾಗಳ ವಿಚಾರದ್ಲಲಿ ಯಾಕೆ ಹಗ್ಗಜಗ್ಗಾಟ ನಡೆಯುತ್ತಿದೆ. ಟ್ವಿಟರ್ ಮತ್ತು ಸರಕಾರದ ಪ್ರತಿನಿಧಿಗಳು ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಲ್ಲ..
ಉತ್ತರ – ಭಾರತದಲ್ಲಿ 130 ಕೋಟಿಯಷ್ಟು ಜನ ವಾಟ್ಸಪ್, ಟ್ವಿಟರ್, ಲಿಂಕ್ ಡಿನ್ ಹೀಗೆ ಹಲವಾರು ಜಾಲತಾಣಗಳನ್ನು ಬಳಕೆ ಮಾಡುತ್ತಿದ್ದಾರೆ. ಒಳ್ಳೆಯದೇ. ದೇಶದಲ್ಲಿ ವಿದೇಶಿ ಕಂಪನಿಗಳು ಜನರಿಗೆ ಸೇವೆ ಒದಗಿಸುವುದಕ್ಕೆ, ವ್ಯವಹಾರ ಮಾಡುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ನಾವಿದನ್ನು ಗೌರವಿಸುತ್ತೇವೆ. ಸೋಶಿಯಲ್ ಮೀಡಿಯಾ ಬಳಕೆ ಮಾಡುವುದರಲ್ಲಿ ಸಮಸ್ಯೆ ಇಲ್ಲ. ಆದರೆ, ಇದನ್ನು ಮಿಸ್ ಯೂಸ್ ಮಾಡಬಾರದು ಎಂಬುದಷ್ಟೇ ನಮ್ಮ ಕಾಳಜಿ. ಈ ರೀತಿಯ ಸಮಸ್ಯೆ ಆದಲ್ಲಿ ಜನರೇನು ಮಾಡಬೇಕಾಗುತ್ತದೆ. ಮಹಿಳೆಯರಿಗೆ ಧಕ್ಕೆ ಬರುವ ರೀತಿಯ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಕೆಲವರು ಸೋಶಿಯಲ್ ಮೀಡಿಯಾವನ್ನು ಉದ್ದೇಶಪೂರ್ವಕವಾಗೇ ಇಂಥವಕ್ಕೆ ಬಳಸುತ್ತಾರೆ. ಜನರು ಈ ಬಗ್ಗೆ ದೂರು ಹೇಳಿಕೊಂಡು ಬರುತ್ತಾರೆ. ಆ ಸಂದರ್ಭದಲ್ಲಿ ನಾವೇನು ಮಾಡೋಕೆ ಆಗುತ್ತದೆ. ಇದೇ ಕಾರಣಕ್ಕೆ ಹೊಸ ಐಟಿ ರೂಲ್ಸ್ ತಂದಿರೋದು. ಕಂಪನಿಯಿಂದ ಸೋಶಿಯಲ್ ಮೀಡಿಯಾ ಬಗ್ಗೆ ನಿಗಾ ಇಡಲು ಪ್ರತಿನಿಧಿಗಳನ್ನು ಇಟ್ಟುಕೊಳ್ಳಿ ಎಂದು ಹೇಳಿದ್ದು. ಅಮೆರಿಕಾದಲ್ಲಿ ಇವರಿಗೆ ತೊಂದರೆ ಆಗದ್ದು ಇಲ್ಲಿ ಯಾಕೆ ಸಮಸ್ಯೆ ಅನಿಸುತ್ತಿದೆ..?
ವಾಟ್ಸಪ್ ನಲ್ಲಿ ಟೆರರಿಸಂ, ಗಲಭೆ, ಕೋಮು ಹಿಂಸೆ, ಅತ್ಯಾಚಾರ, ದೇಶದ ಭದ್ರತೆಗೆ ತೊಡಕಾಗುವ ವಿಚಾರಗಳು ಹರಿದಾಡುತ್ತಿದ್ದರೆ ಅದರ ಒರಿಜಿನಲ್ ಕರ್ತೃ ಯಾರೆಂದು ಕೇಳಬೇಕಾಗುತ್ತದೆ. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಸ್ಪಷ್ಟ ನಿರ್ದೇಶನ ಕೊಟ್ಟಿದೆ. ಗಲಭೆ, ಸಮಾಜಘಾತುಕ ಅಂಶಗಳಿದ್ದಲ್ಲಿ ಅದರ ಮೂಲ ಕರ್ತೃ ಯಾರೆಂದು ತಿಳಿದುಕೊಳ್ಳುವ ಹಕ್ಕು ಸರಕಾರಕ್ಕಿದೆ. ಕಳೆದ ಬಾರಿ ದೆಹಲಿಯಲ್ಲಿ ಗಲಭೆಗಳಾದ ಸಂದರ್ಭ ಜನರೇ ಸೋಶಿಯಲ್ ಮೀಡಿಯಾದಲ್ಲಿನ ಸಾಕ್ಷಿಗಳನ್ನು ಒದಗಿಸಿದ್ದರು. ನಾವದನ್ನು ಅಭಿನಂದಿಸುತ್ತೇವೆ. ಡಿಜಿಟಲ್ ಫಾರೆನ್ಸಿಕ್ ವಿಚಾರದಲ್ಲಿ ಇವು ಸಾಕ್ಷಿಗಳಾಗಿದ್ದವು. ದೇಶದಲ್ಲಿ ಕಾನೂನು ಪಾಲನೆಗೆ ಸಹಕರಿಸುವುದು ಸೋಶಿಯಲ್ ಮೀಡಿಯಾ ಕಂಪನಿಗಳ ಕರ್ತವ್ಯವೂ ಆಗಿರುತ್ತದೆ. ಈ ರೀತಿಯ ಕಾನೂನು ಪಾಲನೆ ಮಾಡುವುದು ವಾಟ್ಸಪ್ ಬಳಕೆದಾರರ ಕರ್ತವ್ಯ ಕೂಡ.
ಪ್ರಶ್ನೆ – ಆದರೆ ವಾಟ್ಸಪ್ ಕಂಪನಿ, ಎಂಡ್ ಟು ಎಂಡ್ ಎಂಕ್ರಿಪ್ಶನ್ ಬಗ್ಗೆ ಹೇಳುತ್ತಿದೆ. ಇದನ್ನು ಬ್ರೇಕ್ ಮಾಡಿದರೆ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಆಗುವುದಂತೆ.. ?
ಉತ್ತರ – ನಾನು ಈ ಬಗ್ಗೆ ಒಂದು ಪ್ರಶ್ನೆ ಕೇಳಬೇಕಾಗುತ್ತದೆ. ಅಮೆರಿಕ, ಯುಕೆಗಳಲ್ಲಿ ಉಗ್ರವಾದದ ವಿಚಾರದಲ್ಲಿ ಸಮಾಜಘಾತುಕ ಸಂದೇಶಗಳು ಹರಿದಾಡಿದಾಗ ಮೂಲ ಕರ್ತೃಗಳನ್ನು ಪತ್ತೆ ಮಾಡುವಂತೆ ಅಲ್ಲಿನ ಸರಕಾರಗಳು ವಾಟ್ಸಪ್ ಕಂಪನಿಗಳಲ್ಲಿ ಕೇಳಿತ್ತು. ಆ ಸಂದರ್ಭದಲ್ಲಿ ಇದೇ ಕಂಪನಿಗಳು ಅವನ್ನು ಪತ್ತೆ ಮಾಡಿ ತನಿಖೆಗೆ ಸಹಕರಿಸಿದ್ದವು. ಇದೇ ನೀತಿ ಭಾರತದಲ್ಲಿ ಯಾಕೆ ಸಾಧ್ಯವಾಗಲ್ಲ ಎಂದು ಕೇಳುತ್ತೇನೆ.
ಅಮೆರಿಕದ ಸಂದರ್ಭದಲ್ಲಿ ವಾಟ್ಸಪ್ ಕಂಪನಿಗೆ ಎಂಕ್ರಿಪ್ಶನ್ ಸಮಸ್ಯೆ ಆಗಿರಲಿಲ್ಲವೇ.. ಆಗ ಅಲ್ಲಿನ ಕಾನೂನು ತೊಡಕಾಗಿ ಕಂಡಿಲ್ಲವೇ.. ಕಾನೂನು ಮಂತ್ರಿಯಾಗಿ ಎಲ್ಲ ಸೋಶಿಯಲ್ ಮೀಡಿಯಾ ಕಂಪನಿಗಳಿಗೂ ಒಂದು ವಿಚಾರ ಸ್ಪಷ್ಟ ಪಡಿಸುತ್ತೇನೆ. ದೇಶದ ಡಿಜಿಟಲ್ ಸಾರ್ವಭೌಮತ್ವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಲಾಭದ ಉದ್ದೇಶದ ಅಮೆರಿಕದ ಕಂಪನಿಗಳು ಭಾರತದಲ್ಲಿ ವ್ಯವಹಾರ ಮಾಡುವುದಕ್ಕೆ ಅಡ್ಡಿ ಇಲ್ಲ. ಆದರೆ, ಇಲ್ಲಿನ ಕಾನೂನು, ಸಂವಿಧಾನಕ್ಕೆ ಬೆಲೆ ಕೊಡಲೇಬೇಕಾಗುತ್ತದೆ. ದೇಶದ ಪಾರ್ಲಿಮೆಂಟ್ ಮತ್ತು ಇಲ್ಲಿನ ಎಲ್ಲ ರೀತಿಯ ಸಂಸ್ಥೆಗಳು ಇತರೇ ದೇಶದ ಸಂಸ್ಥೆಗಳಷ್ಟೇ ಮಹತ್ವದ್ದು.
ಪ್ರಶ್ನೆ – ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟೂಲ್ ಕಿಟ್ ಸಂಘರ್ಷದ ಸಂದರ್ಭದಲ್ಲೇ ಟ್ವಿಟರ್ ತಾಣಕ್ಕೆ ಕೇಂದ್ರ ಸರಕಾರ ಮೂಗುದಾರ ಹಾಕಲು ಮುಂದಾಗಿದೆ. ಇದರರ್ಥ ಹೊಸ ಐಟಿ ರೂಲ್ ಮೂಲಕ ಕೇಂದ್ರ ಸರಕಾರ ಟ್ವಿಟರ್ ಮೇಲೆ ‘’ಬ್ಯಾಕ್ ಡೋರ್ ಸೆನ್ಸರ್ ’’ ಹಾಕುವ ಅಜೆಂಡಾ ಇಟ್ಟುಕೊಂಡಿದೆಯೇ ?
ಉತ್ತರ – ಈ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಫೆಬ್ರವರಿ 25ರಂದೇ ಬಿಡುಗಡೆ ಮಾಡಲಾಗಿತ್ತು. ಮೂರು ತಿಂಗಳ ಒಳಗೆ ಎಲ್ಲ ಸೋಶಿಯಲ್ ಮೀಡಿಯಾ ಕಂಪನಿಗಳು ಇದನ್ನು ಪಾಲಿಸುವಂತೆ ಷರತ್ತನ್ನೂ ವಿಧಿಸಲಾಗಿತ್ತು. ಇದರ ಬಗ್ಗೆ ಕಂಪನಿಗಳಿಗೂ ಅರಿವಿತ್ತು. ಆ ಸಂದರ್ಭದಲ್ಲಿ ಯಾವುದೇ ಟೂಲ್ ಕಿಟ್ ಸಂಘರ್ಷ ಇರಲಿಲ್ಲ.
ಟೂಲ್ ಕಿಟ್ ಪ್ರಕರಣದಲ್ಲಿ ಪೊಲೀಸರ ಜೊತೆಗೆ ಜಟಾಪಟಿ ಇರುವುದು. ನಮ್ಮ ದೇಶದ ಕಾನೂನು ಪ್ರಕಾರ, ಪೊಲೀಸರ ಯಾವುದೇ ತನಿಖೆಗೂ ಜನರು ಸಹಕರಿಸಬೇಕಾಗುತ್ತದೆ. ಟ್ವಿಟರ್ ನಲ್ಲಿ ಟ್ವೀಟ್ ಆಗಿರುವ ಬಗ್ಗೆ ಸಾಕ್ಷಿಗಳಿದ್ದಲ್ಲಿ ಅದನ್ನು ಪೊಲೀಸರ ತನಿಖೆಗಾಗಿ ಹಂಚಿಕೊಳ್ಳುವುದರಲ್ಲಿ ತಪ್ಪೇನಿದೆ. ಹೀಗೆ ಮಾಡುವುದರಿಂದ ಪೊಲೀಸರೇನು ಅರೆಸ್ಟ್ ಮಾಡುವುದಿಲ್ಲ. ಕರೆದಾಗ ಬರದಿದ್ದರೆ ಸಮನ್ಸ್ ಕಳಿಸುತ್ತಾರೆ ಅಷ್ಟೇ..
ಟ್ವಿಟರ್ ದೊಡ್ಡ ಸಾಮಾಜಿಕ ಜಾಲತಾಣವಾಗಿದ್ದು ಅದರಲ್ಲಿ ಯಾರು ಕೂಡ ತಮಗನಿಸಿದ್ದನ್ನು ಹೇಳಿಕೊಳ್ಳಬಹುದು. ಉಗ್ರವಾದಕ್ಕೆ ಪ್ರೇರಣೆ ಆಗುವ ರೀತಿ ಅಥವಾ ಮಹಿಳೆಯರ ಘನತೆಗೆ ಧಕ್ಕೆ ಆಗುವ ರೀತಿ ಸಂದೇಶಗಳು ಬಂದ ಸಂದರ್ಭದಲ್ಲಿ ಟ್ವಿಟರ್ ಕಂಪನಿಯಲ್ಲಿ ಯಾರು ಹೊಣೆ ಹೊತ್ತುಕೊಳ್ಳುತ್ತಾರೆ. ಒಮ್ಮೆ ಈ ರೀತಿಯ ಸಂದೇಶಗಳು ಹರಿದಾಡಿ ಮತ್ತೆ ಡಿಲೀಟ್ ಆದರೆ, ಅದನ್ನು ಪತ್ತೆ ಹಚ್ಚುವುದು ಯಾರು ? ಯಾರಾದ್ರೂ ಏನಾದ್ರೂ ಟೀಕಿಸಿ, ಬಳಿಕ ಆ ಖಾತೆಯನ್ನು ಡಿಲೀಟ್ ಮಾಡಬೇಕಂದ್ರೆ ಅದನ್ನು ಯಾರು ಮಾಡಬೇಕು? ಒಂದ್ಕಡೆ ಟ್ವಿಟರ್ ತಮ್ಮ ಅಭಿಪ್ರಾಯ, ಟೀಕೆಗಳನ್ನು ಹಂಚಿಕೊಳ್ಳಲು ವೇದಿಕೆ ನೀಡುತ್ತದೆ. ಅದೇ ವೇಳೆಗೆ, ಯಾವ ಖಾತೆಯನ್ನು ಬ್ಲಾಕ್ ಮಾಡಬೇಕೆಂಬುದನ್ನು ಅವರೇ ನಿರ್ಧರಿಸಬೇಕಾಗುತ್ತದೆ.
ಪ್ರಶ್ನೆ – ಕೇಂದ್ರ ಸರಕಾರ ಕೆಲವು ಸಂದರ್ಭಗಳಲ್ಲಿ ತನ್ನ ವಿರುದ್ಧ ಇದ್ದ ಟ್ವೀಟ್ ಗಳನ್ನು ತೆಗೆದುಹಾಕಲು ಹೇಳಿದಾಗ, ಅದನ್ನು ಪಾಲನೆ ಮಾಡಿದ್ದೆವು. ಕಳೆದ ಎಪ್ರಿಲ್ ತಿಂಗಳಲ್ಲಿ 50 ಟ್ವೀಟ್ ಗಳನ್ನು ತೆಗೆದು ಹಾಕಲಾಗಿತ್ತು. ಹಾಗಾದರೆ ಸರಕಾರ ಹೇಳಿದಂತೆ ಟ್ವಿಟರ್ ಕಂಪನಿ ಕೇಳುತ್ತಿದೆ ಎಂದಾಯಿತಲ್ಲಾ..
ಉತ್ತರ – ಟ್ವಿಟರ್ ಒಂದು ವೇದಿಕೆ. ಯಾವುದೇ ನಿಯಂತ್ರಕ ಸಂಸ್ಥೆ ಅಲ್ಲ. ಜಾಲತಾಣದ ಬಗ್ಗೆ ನಿಗಾ ಇಡಲು ಫ್ಯಾಕ್ಟ್ ಚೆಕ್ಕರ್ ಗಳನ್ನು ಇಟ್ಟುಕೊಂಡಿದ್ದಾರೆಂದು ಹೇಳುತ್ತಾರೆ. ಹಾಗಾದ್ರೆ ನಾವು ಆ ಫ್ಯಾಕ್ಟ್ ಚೆಕ್ಕರ್ಸ್ ಯಾರೆಂದು ತಿಳಿದುಕೊಳ್ಳಲು ಬಯಸುತ್ತೇವೆ. ಅವರ ಹೆಸರು ಮತ್ತು ಎಷ್ಟು ಮಂದಿಯನ್ನು ಅವರು ನೇಮಕ ಮಾಡಿಕೊಂಡಿದ್ದಾರೆ ಅಂತ ತಿಳಿಯಬೇಕು. ಈ ಫ್ಯಾಕ್ಟ್ ಚೆಕ್ಕರ್ ಗಳೆಲ್ಲ ಒಂದೇ ರೀತಿಯ ಮೋದಿ ವಿರೋಧಿ ಅಜೆಂಡಾ ಇಟ್ಟುಕೊಂಡಿದ್ದಾರೆ. ಇಷ್ಟು ದೊಡ್ಡ ದೇಶದಲ್ಲಿ ಟ್ವಿಟರ್ ತಟಸ್ಥವಾಗಿರುವಂಥ ಫ್ಯಾಕ್ಟ್ ಚೆಕ್ಕರ್ ಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲವೇ ?
ಟ್ವಿಟರ್ ಕಂಪನಿ ಭಾರತದ ಕಾನೂನನ್ನು ಗೌರವಿಸಬೇಕು. ಯಾವುದೇ ಸಾಮಾನ್ಯ ವ್ಯಕ್ತಿಯೂ ದೂರು ನೀಡಲು ಸಾಧ್ಯವಾಗುವ ರೀತಿ ಪಾರದರ್ಶಕವಾಗಿ ನಡೆದುಕೊಳ್ಳುವ ಅಧಿಕಾರಿಗಳನ್ನು ನೇಮಕ ಮಾಡಬೇಕು. ನಿಮ್ಮಿಂದ ಸಹಾಯ ಅಗತ್ಯವಿದ್ದಲ್ಲಿ ಯಾವುದೇ ತನಿಖಾ ಏಜನ್ಸಿಗಳು ಸಂಪರ್ಕಿಸಲು ಸಾಧ್ಯವಾಗುವ ರೀತಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು.
ಪ್ರಶ್ನೆ – ಫ್ಯಾಕ್ಟ್ ಚೆಕ್ಕರ್ ಗಳು ಸರಕಾರದ ಕಡೆಯಿದ್ದರೆ ಮಾತ್ರ ತಟಸ್ಥ ಎನ್ನುವ ಧೋರಣೆಯೇ ?
ಉತ್ತರ – ಇಲ್ಲ.. ಇಲ್ಲಿರುವ ಫ್ಯಾಕ್ಟ್ ಚೆಕ್ಕರ್ ಗಳು ಮೋದಿ ವಿರೋಧಿ ಅಜೆಂಡಾ ಇಟ್ಟುಕೊಂಡವರ ರೀತಿ ವರ್ತಿಸುತ್ತಿದ್ದಾರೆ. ನಾವು ಟೀಕೆಯನ್ನು ಗೌರವಿಸುತ್ತೇವೆ. ನಮ್ಮ ಪ್ರಧಾನಿ 2001ರಿಂದಲೂ ಟೀಕೆಗಳನ್ನು ಜಗತ್ತಿನ ಉದ್ದಗಲದಿಂದ ಕೇಳಿಕೊಂಡು ಬಂದಿದ್ದಾರೆ. ಹಾಗೆಂದು, ಸೋಶಿಯಲ್ ಮೀಡಿಯಾ ಕಂಪನಿಗಳು ಒಂದೇ ಕಡೆಗೆ ಪ್ರಮೋಟ್ ಮಾಡಬಾರದು.
ಪ್ರಶ್ನೆ – ಭಾರತದಲ್ಲಿ ಸರಕಾರದ ನಿಯಂತ್ರಣ ಹೊಂದಿರದೆ, ಅಂತರ್ಜಾಲದ ನಿಯಂತ್ರಣಕ್ಕೆ ಸ್ವತಂತ್ರ ಸಂಸ್ಥೆಯೊಂದನ್ನು ರಚಿಸಬೇಕಾದ ಅಗತ್ಯವಿದೆ ಎಂಬ ಸಲಹೆ ಕೇಳಿಬರುತ್ತಿದೆ. ಈ ಬಗ್ಗೆ ಏನಾದರೂ ಸರಕಾರದ ಒಳಗೆ ಚರ್ಚೆ ನಡೆದಿದೆಯೇ ?
ಉತ್ತರ – ನಾವು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಹೊಸತಾದ ನಿಯಮಗಳನ್ನು ಜಾರಿಗೆ ತರುತ್ತಿದ್ದೇವೆ. ಡಾಟಾ ಪ್ರೊಟೆಕ್ಷನ್ ಬಿಲ್ ಎನ್ನುವ ಹೆಸರಲ್ಲಿ ಇದು ಕಾಯ್ದೆಯಾಗಿ ಬರಲಿದೆ. ಆ ಕಾಯ್ದೆ ನಿಮ್ಮ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.
Ravi Shankar Prasad on said that India’s digital sovereignty will not be compromised at any cost. This comes amid the Centre’s row with Twitter over the new IT rules.
04-04-25 10:54 pm
HK News Desk
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
04-04-25 11:07 pm
Mangalore Correspondent
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm