ಬ್ರೇಕಿಂಗ್ ನ್ಯೂಸ್
25-05-21 12:45 pm Headline Karnataka News Network ದೇಶ - ವಿದೇಶ
ಚೆನ್ನೈ, ಮೇ 24 : ಕೊರೊನಾ ಲಾಕ್ಡೌನ್ ನಡುವೆ ಯುವ ಜೋಡಿ ವಿಮಾನದಲ್ಲಿ ಮದುವೆಯಾಗಿರುವುದು ಈಗ ವಿಮಾನ ಕಂಪನಿಯ ಕುತ್ತಿಗೆ ಹಿಡಿಯುವಂತಾಗಿದೆ. ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವಿಮಾನ ಹಾರಾಟದ ವೇಳೆ ಜೋಡಿ ಮದುವೆಯಾಗಿರುವ ವಿಚಾರದಲ್ಲಿ ಸ್ಪೈಸ್ ಜೆಟ್ ಚಾರ್ಟರ್ಡ್ ವಿಮಾನ ಸಿಬ್ಬಂದಿಯನ್ನು ಡಿಜಿಸಿಎ ಕರ್ತವ್ಯದಿಂದ ಅಮಾನತುಗೊಳಿಸಿದೆ.
ಮೇ 23ರಂದು ಮಧುರೈನ ರಾಕೇಶ್ ಹಾಗೂ ದಕ್ಷಿಣಾ ಜೋಡಿ ಮಧುರೈ- ಬೆಂಗಳೂರು ವಿಮಾನವನ್ನು ಬುಕ್ ಮಾಡಿ, ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸುಮಾರು 160 ಜನ ವಿಮಾನದಲ್ಲಿದ್ದರು ಎನ್ನಲಾಗಿದ್ದು, ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ವಿಮಾನದಲ್ಲಿ ಪ್ರಯಾಣಿಕರು ಕೋವಿಡ್ ನಿಯಮ ಉಲ್ಲಂಘನೆ ಮಾಡಲು ಕಾರಣವಾದ ವಿಮಾನ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಯಾಣಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ಮಧುರೈನ ಟ್ರಾವಲ್ ಏಜೆಂಟ್ ಒಬ್ಬರ ಮೂಲಕ ಮೇ 23ರಂದು ಸ್ಪೈಸ್ ಜೆಟ್ ಬೋಯಿಂಗ್ 737 ಚಾರ್ಟರ್ಡ್ ವಿಮಾನವನ್ನು ಬುಕ್ ಮಾಡಲಾಗಿತ್ತು. ವಿವಾಹದ ನಂತರ ಜಾಲಿ ರೈಡ್ಗೆ ವಿಮಾನ ಬುಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ವಿಮಾನದಲ್ಲಿ ಪ್ರಯಾಣಿಸುವವರಿಗೆ ಕೊರೊನಾ ಮಾರ್ಗಸೂಚಿ ಕುರಿತು ವಿವರಿಸಿದ್ದೆವು. ಫೋಟೊ, ವಿಡಿಯೊ ಚಿತ್ರೀಕರಣ ಮಾಡಬಾರದು ಎಂದು ಕೂಡ ತಿಳಿಸಿದ್ದೆವು. ಆದರೂ ನಿಯಮಗಳನ್ನು ಪಾಲಿಸಿಲ್ಲ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೈಸ್ ಜೆಟ್ ತಿಳಿಸಿದೆ.
Read: ಲಾಕ್ಡೌನ್ ಭಯ ; ವಿಮಾನದಲ್ಲಿ ಹಾರಾಡುತ್ತಲೇ ಯುವ ಜೋಡಿಯ ಕಲ್ಯಾಣೋತ್ಸವ !
A wedding on a chartered flight has won full marks for ingenuity but is under investigation over the violation of Covid-safety rules. The aviation regulator has asked for a report and the crew of the SpiceJet flight has been taken off duty for the inquiry, according to ANI. The bride, groom, and their families may face action as SpiceJet says passengers did not follow rules despite repeated requests.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm