ಬ್ರೇಕಿಂಗ್ ನ್ಯೂಸ್
12-05-21 12:18 pm Headline Karnataka News Network ದೇಶ - ವಿದೇಶ
Photo credits : pharmaceutical
ನವದೆಹಲಿ,ಮೇ 12: ಭಾರತ್ ಬಯೋಟೆಕ್ನ 'ಕೋವ್ಯಾಕ್ಸಿನ್' ಕೋವಿಡ್–19 ಲಸಿಕೆಯನ್ನು ಎರಡು ವರ್ಷ ವಯಸ್ಸಿನಿಂದ 18 ವರ್ಷ ವಯೋಮಾನದವರಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲು ತಜ್ಞರ ಸಮಿತಿಯು ಮಂಗಳವಾರ ಶಿಫಾರಸು ಮಾಡಿದೆ.
ದೆಹಲಿಯ ಏಮ್ಸ್ , ಪಟನಾದ ಏಮ್ಸ್ ಹಾಗೂ ನಾಗ್ಪುರದ ಮೆಡಿಟ್ರಿನಾ ಇನ್ಸ್ಟಿಟ್ಯೂಟ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತದೆ.
'ಮೂರನೇ ಹಂತದ ಪ್ರಯೋಗಕ್ಕೂ ಮುನ್ನ, ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ನ ಮಧ್ಯಂತರ ಅಧ್ಯಯನ ವರದಿ (ಸುರಕ್ಷತೆಗೆ ಸಂಬಂಧಿಸಿದ ದತ್ತಾಂಶ) ಜೊತೆಗೆ ಡಿಎಸ್ಎಂಬಿ ಶಿಫಾರಸುಗಳನ್ನು ಸಿಡಿಎಸ್ಸಿಒಗೆ ಸಲ್ಲಿಸಬೇಕು' ಎಂದು ಕೇಂದ್ರ ಔಷಧ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್ಸಿಒ) ಕೋವಿಡ್–19 ತಜ್ಞರ ಸಮಿತಿಯು ಶಿಫಾರಸು ಮಾಡಿರುವುದಾಗಿ ವರದಿಯಾಗಿದೆ. ಎರಡು ವರ್ಷ ವಯಸ್ಸಿನ ಮಕ್ಕಳಿಂದ 18 ವರ್ಷದ ವಯೋಮಾನದವರ ಮೇಲೆ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತ್ ಬಯೋಟೆಕ್ ಮನವಿ ಸಲ್ಲಿಸಿತ್ತು.
ಫೆಬ್ರುವರಿ 24ರಂದು ಈ ಪ್ರಸ್ತಾವನೆಯ ಬಗ್ಗೆ ಚರ್ಚಿಸಲಾಗಿತ್ತು ಹಾಗೂ ಕ್ಲಿನಿಕಲ್ ಟ್ರಯಲ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಷ್ಕೃತ ವಿವರ ಸಲ್ಲಿಸುವಂತೆ ತಿಳಿಸಲಾಗಿತ್ತು. ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಸಹಯೋಗದಲ್ಲಿ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿ ಪಡಿಸಲಾಗಿದೆ.
Bharat Biotech's COVID-19 vaccine Covaxin was on Tuesday recommended by an expert panel for phase II/III clinical trial on those aged between two to 18 years, official sources said.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 11:34 am
Mangalore Correspondent
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm