ಬ್ರೇಕಿಂಗ್ ನ್ಯೂಸ್
11-05-21 09:28 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 11: ಭಾರತದಲ್ಲಿ ಕಂಡುಬಂದಿರುವ ಕೊರೊನಾ ರೂಪಾಂತರಿ ವೈರಸ್ ಅತಿ ವೇಗವಾಗಿ ಹರಡುತ್ತಿದ್ದು, ಈಗಾಗ್ಲೇ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡುಬಂದಿದೆ. ಹೀಗಾಗಿ ಬಿ 1617 ಮಾದರಿಯ ಈ ವೈರಸನ್ನು ಜಗತ್ತಿನಲ್ಲಿ ಕಳವಳ ಮೂಡಿಸಿದ ರೂಪಾಂತರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.
ಭಾರತದ ಹಲವೆಡೆ ಕಂಡುಬಂದಿರುವ ಬಿ1617 ಹೆಸರಿನ ವೈರಸ್, ಮೂಲ ವೈರಸಿಗಿಂತ ತುಂಬ ವೇಗವಾಗಿ ಮತ್ತು ಸುಲಭದಲ್ಲಿ ಹರಡುತ್ತಿದೆ. 30ಕ್ಕೂ ಹೆಚ್ಚು ದೇಶಗಳಿಗೆ ಈಗಾಗ್ಲೇ ಈ ವೈರಸ್ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಈಗಾಗ್ಲೇ ಡಬ್ಲ್ಯುಎಚ್ ಓ, ಯುಕೆಯಲ್ಲಿ (ಬಿ117), ದಕ್ಷಿಣ ಆಫ್ರಿಕಾ (ಬಿ1351), ಬ್ರಿಜಿಲ್ (ಪಿ1) ದೇಶಗಳಲ್ಲಿ ಕೊರೊನಾ ವೈರಸಿನ ರೂಪಾಂತರಿಗಳನ್ನು ಪತ್ತೆ ಮಾಡಿದ್ದು ಅವುಗಳಿಗೆ ಪ್ರತ್ಯೇಕ ಹೆಸರನ್ನೂ ಇಟ್ಟಿದೆ. ಭಾರತದಲ್ಲಿ ಕಂಡುಬಂದಿರುವ ಪ್ರಭೇದ ವಿಭಿನ್ನವಾಗಿದ್ದು, ಸುಲಭದಲ್ಲಿ ಹರಡುವುದು, ಗಂಭೀರ ಪರಿಣಾಮಗಳಿಗೆ ಕಾರಣವಾಗುವುದು, ರೋಗ ನಿರೋಧಕ ಶಕ್ತಿಯನ್ನು ನಾಶ ಮಾಡುವುದು, ಚಿಕಿತ್ಸೆ ಅಥವಾ ಲಸಿಕೆಯ ಪರಿಣಾಮಗಳನ್ನು ಕುಂಠಿತಗೊಳಿಸುವುದನ್ನು ಪತ್ತೆ ಮಾಡಲಾಗಿದೆ. ಇವೆಲ್ಲ ಕಾರಣಗಳಿಂದಾಗಿ ಜಾಗತಿಕ ಮಟ್ಟದಲ್ಲಿ ತುಂಬ ವಿಭಿನ್ನ ತಳಿಯೆಂದು ಗುರುತಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ 19 ಟೆಕ್ನಿಕಲ್ ಮುಖ್ಯಸ್ಥೆ ಮರಿಯಾ ವೆನ್ ಕೆರ್ಕೋವ್ ಹೇಳಿದ್ದಾರೆ.
ಹಾಗಿದ್ದರೂ, ಈಗ ಲಭ್ಯವಿರುವ ಲಸಿಕೆಗಳು ಹೊಸ ಮಾದರಿಯ ವೈರಸ್ ದಾಳಿಯ ಪರಿಣಾಮಗಳಿಂದ ಮತ್ತು ಅದರಿಂದ ಸಾವು ಸಂಭವಿಸುವುದನ್ನು ತಪ್ಪಿಸುವಷ್ಟು ಶಕ್ತವಾಗಿದೆ ಎಂದಿದ್ದಾರೆ. ಜಗತ್ತಿನಲ್ಲೀಗ ಕೋವಿಡ್ 19 ವೈರಸ್ಸಿನ ಹತ್ತು ರೂಪಾಂತರಿ ವೈರಸ್ ಗಳನ್ನು ಪತ್ತೆ ಮಾಡಲಾಗಿದೆ. ಅದರಲ್ಲಿ ಬಿ1617 ಮಾದರಿಯ ವೈರಸ್ ವಿಭಿನ್ನವಾಗಿರುವುದು ಕಂಡುಬಂದಿದೆ. ಇದರ ಬಗ್ಗೆ ಅರಿತುಕೊಳ್ಳಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದಿದ್ದಾರೆ.
A World Health Organization official said Monday it is reclassifying the highly contagious triple-mutant Covid variant spreading in India as a “variant of concern,” indicating that it’s become a global health threat.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 10:45 pm
HK News Staffer
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm