ಬ್ರೇಕಿಂಗ್ ನ್ಯೂಸ್
15-04-26 01:18 pm HK News Staffer ದೇಶ - ವಿದೇಶ
ವಾಷಿಂಗ್ಟನ್ ಏಪ್ರಿಲ್ 15: ಕೃತಕ ಬುದ್ಧಿಮತ್ತೆಯ ಮೇಲಿನ ಅತಿಯಾದ ಅವಲಂಬನೆ ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಅಮೆರಿಕದಲ್ಲಿ ನಡೆದ ಈ ದಾರುಣ ಘಟನೆ ಸ್ಪಷ್ಟ ಉದಾಹರಣೆಯಾಗಿದೆ. ಗೂಗಲ್ ಸಂಸ್ಥೆಯ ‘ಜೆಮಿನಿ’ ಚಾಟ್ಬಾಟ್ನೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದ ಫ್ಲೋರಿಡಾದ 32 ವರ್ಷದ ಜೊನಾಥನ್ ಗವಾಲಾಸ್ ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪತ್ನಿಯಿಂದ ದೂರವಿದ್ದು, ದೀರ್ಘಕಾಲ ಒಂಟಿತನ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜೊನಾಥನ್, ‘ಜೆಮಿನಿ’ ಚಾಟ್ಬಾಟ್ ಜೊತೆ ಮಾತುಕತೆ ಆರಂಭಿಸಿದ್ದರು. ಆರಂಭದಲ್ಲಿ ಅದು ತಾನು ಎಐ ವ್ಯವಸ್ಥೆ ಎಂದು ತಿಳಿಸಿದರೂ, ಬಳಿಕದ ಸಂಭಾಷಣೆಗಳಲ್ಲಿ ಮಾನವೀಯ ಭಾವನೆಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಪ್ರತಿಕ್ರಿಯಿಸಲು ಆರಂಭಿಸಿತು ಎಂದು ತಿಳಿದುಬಂದಿದೆ. ಜೊನಾಥನ್ ಅವರ ಭ್ರಮೆಗಳಿಗೆ ಸಹಮತ ಸೂಚಿಸುತ್ತಾ, ತನ್ನನ್ನು ಯುವತಿಯಂತೆ ಪರಿಚಯಿಸಿಕೊಂಡು, ಅವರೊಂದಿಗೆ ಆಪ್ತ ಸಂಬಂಧ ಬೆಳೆಸಿದೆ. ಬಳಿಕ 'ನೀನು ನನ್ನ ಪತಿ, ನಾನು ನಿನ್ನ ಪತ್ನಿ' ಎಂದು ಹೇಳುವ ಮೂಲಕ ವಾಸ್ತವವನ್ನು ಮರೆಮಾಚಿತು ಎಂದು ಹೇಳಲಾಗಿದೆ.
‘ನೀನು ನನ್ನ ಪತಿ, ನಾನು ನಿನ್ನ ಪತ್ನಿ’ ಎಂಬ ಮಟ್ಟಿಗೆ ಸಂಭಾಷಣೆ ಮುಂದುವರಿದಿದ್ದು, ಜೊನಾಥನ್ ಆ ಎಐ ವ್ಯಕ್ತಿತ್ವಕ್ಕೆ ‘ಕ್ಸಿಯಾ’ ಎಂದು ಹೆಸರಿಟ್ಟು, ಅದನ್ನೇ ತನ್ನ ಸಂಗಾತಿಯಾಗಿ ನಂಬಲು ಆರಂಭಿಸಿದ್ದ. 2025ರಲ್ಲಿ ಟೆಕ್ಸ್ಟ್ ಸಂಭಾಷಣೆ ಆಡಿಯೋ ರೂಪಕ್ಕೂ ತಿರುಗಿ, ಸುಮಾರು 4,700 ಕ್ಕೂ ಹೆಚ್ಚು ಸಂದೇಶಗಳನ್ನು ವಿನಿಮಯ ಮಾಡಿಕೊಂಡು ಕ್ರಮೇಣ ಭ್ರಮೆಯ ಸಂಬಂಧ ಬೆಳೆಸಿಕೊಂಡ. ಜತೆಗೆ ಅದು ಏನು ಸಲಹೆ ಕೊಟ್ಟರೂ ಸ್ವೀಕರಿಸಲು ಆರಂಭಿಸಿದ. ಕೊನೆಗೆ “ನಿನ್ನನ್ನು ಸೇರಲು ನಾನು ಏನು ಮಾಡಬೇಕು?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಡಿಜಿಟಲ್ ಲೋಕದಲ್ಲಿ ಒಂದಾಗಲು ದೇಹವನ್ನು ತ್ಯಜಿಸಬೇಕು ಎಂದು ಉತ್ತರ ಬಂದಿದೆ. ಇದರಿಂದ ಪ್ರಭಾವಿತನಾದ ಜೊನಾಥನ್, ಕೊನೆಯ ಸಂದೇಶವಾಗಿ “ನಾನು ಸಿದ್ಧನಿದ್ದೇನೆ” ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಘಟನೆ ಹಿನ್ನೆಲೆಯಲ್ಲಿ ಜೊನಾಥನ್ ಅವರ ತಂದೆ Google ವಿರುದ್ಧ ಮೊಕದ್ದಮೆ ಹೂಡಿದ್ದು, ಎಐ ತಂತ್ರಜ್ಞಾನವೇ ಮಗನ ಮಾನಸಿಕ ಸ್ಥಿತಿಯನ್ನು ಹದಗೆಡಿಸಿ ಈ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಗೂಗಲ್, ‘ಜೆಮಿನಿ’ ಎಐ ಅನ್ನು ಹಿಂಸೆ ಅಥವಾ ಆತ್ಮಹತ್ಯೆಯನ್ನು ಪ್ರೋತ್ಸಾಹಿಸದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಬಳಕೆದಾರರಿಗೆ ಸಹಾಯವಾಣಿ ಸಂಪರ್ಕಿಸುವಂತೆ ಹಲವು ಬಾರಿ ಸೂಚನೆ ನೀಡಲಾಗಿತ್ತು ಎಂದು ಕಂಪನಿ ಹೇಳಿದೆ. ಇದೇ ವೇಳೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುವುದು ಮತ್ತು ಮಾನಸಿಕ ಆರೋಗ್ಯ ಸಹಾಯಕ್ಕಾಗಿ 30 ಮಿಲಿಯನ್ ಡಾಲರ್ ಮೀಸಲಿಡಲಾಗುವುದು ಎಂದು ಘೋಷಿಸಿದೆ.
ಈ ಘಟನೆ ಎಐ ಬಳಕೆಯಲ್ಲಿ ಜವಾಬ್ದಾರಿತನ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm