ಬ್ರೇಕಿಂಗ್ ನ್ಯೂಸ್
11-05-21 06:49 pm Headline Karnataka News Network ದೇಶ - ವಿದೇಶ
ಕೊರೊನಾ ಕೂಪದಿಂದ ಹೊರ ಬರುತ್ತಿರುವ ಅಮೆರಿಕನ್ನರಿಗೆ ಭೀಕರ ಸೈಬರ್ ದಾಳಿ ದೊಡ್ಡ ಶಾಕ್ ನೀಡಿದೆ. ಅಮೆರಿಕದ ಇಂಧನ ಪೂರೈಕೆಯ ಬಹುದೊಡ್ಡ ಜಾಲ ಕಲೋನಿಯಲ್ ಪೈಪ್ಲೈನ್ ಸಂಸ್ಥೆಯ ಕಂಪ್ಯೂಟರ್ ವ್ಯವಸ್ಥೆ ಮೇಲೆ ಸೈಬರ್ ಅಟ್ಯಾಕ್ ನಡೆದಿದೆ. ತಕ್ಷಣ ಎಚ್ಚೆತ್ತುಕೊಂಡ ಅಮೆರಿಕದ ಅಧಿಕಾರಿಗಳು ಪೈಪ್ಲೈನ್ ಬಂದ್ ಮಾಡಿದ್ದಾರೆ. ಹೀಗಾಗಿ ಅಮೆರಿಕದ ದಕ್ಷಿಣ ಹಾಗೂ ಪೂರ್ವ ಕರಾವಳಿಗೆ ಇಂಧನ ಪೂರೈಸುವಲ್ಲಿ ಭಾರಿ ಅಡೆತಡೆ ಎದುರಾಗಿದೆ.
ಅಮೆರಿಕದ ಮೇಲೆ ಕೆಲವು ತಿಂಗಳಿಂದ ನಿರಂತರವಾಗಿ ಸೈಬರ್ ದಾಳಿ ನಡೆಯುತ್ತಿದೆ. ಈ ಹಿಂದೆ ಅಮೆರಿಕ ಹಣಕಾಸು ಇಲಾಖೆ, ಅಣುಸ್ಥಾವರ ಸೇರಿದಂತೆ ಇಂಧನ ಇಲಾಖೆ ಮೇಲೂ ಹಲವಾರು ದಾಳಿಗಳು ನಡೆದಿದ್ದವು. ಈ ಕಾರಣಕ್ಕೆ ಅಮೆರಿಕ-ರಷ್ಯಾ ಮಧ್ಯೆ ತಿಕ್ಕಾಟ ಮುಂದುವರಿದಿರುವ ಸಂದರ್ಭದಲ್ಲೇ ಮತ್ತೊಮ್ಮೆ ಅಮೆರಿಕದ ಇಂಧನ ಇಲಾಖೆ ಮೇಲೆ ಸೈಬರ್ ಕಳ್ಳರು ದಾಳಿ ಮಾಡಿದ್ದಾರೆ.
ಸಹಜವಾಗಿಯೇ ಈ ಘಟನೆ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದು, ಅಮೆರಿಕ ಅಧ್ಯಕ್ಷ ಬೈಡನ್ ಕೆಂಡವಾಗಿದ್ದಾರೆ. ಸದ್ಯಕ್ಕೆ ಸೈಬರ್ ದಾಳಿ ನಡೆದಿರುವ ಸ್ಥಳ ಪತ್ತೆಹಚ್ಚುವಲ್ಲಿ ಅಮೆರಿಕದ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಮತ್ತೊಮ್ಮೆ ರಷ್ಯಾ ಕಡೆ ಅನುಮಾನದ ದೃಷ್ಟಿ ಹಾಯಿಸಿದೆ ಅಮೆರಿಕದ ಬೈಡನ್ ಆಡಳಿತ.
ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?
ಜಗತ್ತಿನಲ್ಲಿ ರಷ್ಯನ್ ಹ್ಯಾಕರ್ಸ್ ಹೆಸರು ಕೇಳಿದರೆ ಭಯ ಆವರಿಸಿಬಿಡುತ್ತದೆ. ಏಕೆಂದರೆ ರಷ್ಯಾದ ಹ್ಯಾಕರ್ಗಳು ಅಷ್ಟು ಖತರ್ನಾಕ್. ಚಿಟಿಕೆ ಹೊಡೆಯುವುದರ ಒಳಗಾಗಿ ಎಂಥ ಪ್ರಬಲ ಕಂಪ್ಯೂಟರ್ಗಳನ್ನು ಬೇಕಾದರೂ ಮುಳುಗಿಸಿಬಿಡುತ್ತಾರೆ. ಅದೆಷ್ಟೇ ಸೈಬರ್ ಸೆಕ್ಯೂರಿಟಿ ಕೊಟ್ಟಿದ್ದರೂ ರಷ್ಯನ್ ಹ್ಯಾಕರ್ಸ್ ಕೈಯಿಂದ ಬಚಾವ್ ಆಗುವುದು ತುಂಬಾನೇ ಕಷ್ಟ. ಅದರಲ್ಲೂ ಅಮೆರಿಕದ ಕಂಪ್ಯೂಟರ್ಗಳು ಎಂದರೆ ರಷ್ಯಾ ಹ್ಯಾಕರ್ಸ್ಗೆ ಬಲು ಪ್ರೀತಿ. ಹೀಗಾಗಿ ಪದೇ ಪದೆ ಅಮೆರಿಕದ ಮೇಲೆ ಸೈಬರ್ ದಾಳಿಗಳು ನಡೆಯುತ್ತಿವೆ ಎಂಬ ಆರೋಪವಿದೆ.
ಚುನಾವಣೆಗೆ ಮೊದಲು ಹೀಗೆ ಆಗಿತ್ತು..!
ಅಂದಹಾಗೆ 8 ತಿಂಗಳ ಅಂತರದಲ್ಲಿ ಅಮೆರಿಕದ ಸರ್ಕಾರಿ ಇಲಾಖೆಗಳ ಮೇಲೆ ನಡೆಯುತ್ತಿರುವ 4ನೇ ಸೈಬರ್ ದಾಳಿ ಇದಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 1 ವಾರ ಬಾಕಿ ಇರುವಾಗಲೇ ದಾಳಿ ನಡೆದಿತ್ತು. ಕಳೆದ ಅಕ್ಟೋಬರ್ ಅಂತ್ಯದಲ್ಲಿ ನಡೆದಿದ್ದ ಈ ಘಟನೆಯಲ್ಲಿ ಅಮೆರಿಕದ ಮತದಾರರ ಮಾಹಿತಿ ಕದ್ದಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ ಅಮೆರಿಕದ ನೀರು ಸರಬರಾಜು ಕೇಂದ್ರ, ಪವರ್ ಗ್ರೀಡ್ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್ಗಳನ್ನ ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿತ್ತು.
ಅಮೆರಿಕದ ಖಜಾನೆಗೂ ಗುನ್ನಾ..!
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಮಾತ್ರವಲ್ಲ, ಚುನಾವಣೆ ಮುಗಿದ ಮೇಲೂ ಹಲವು ಬಾರಿ ಅಮೆರಿಕದಲ್ಲಿ ಸೈಬರ್ ಅಟ್ಯಾಕ್ ಆಗಿದೆ. ಕಳೆದ ಡಿಸೆಂಬರ್ನಲ್ಲಿ ಅಮೆರಿಕ ಹಣಕಾಸು ಇಲಾಖೆ ಕಂಪ್ಯೂಟರ್ ಲಪಟಾಯಿಸಿರುವ ಆರೋಪ ಕೇಳಿಬಂದಿತ್ತು. ದೊಡ್ಡಣ್ಣ ಅಮೆರಿಕದ ಹಣಕಾಸು ಇಲಾಖೆಗೆ ಸಂಬಂಧಿಸಿದ ಬಹುಮುಖ್ಯ ದಾಖಲೆಗಳನ್ನು ಹ್ಯಾಕರ್ಗಳು ಕದ್ದಿದ್ದಾರೆ ಎನ್ನಲಾಗಿತ್ತು. ಹೀಗೆ ತಮ್ಮ ವಿರುದ್ಧ ಸೈಬರ್ ದಾಳಿ ನಡೆದಾಗಲೆಲ್ಲಾ ಅಮೆರಿಕ ರಷ್ಯಾ ಕಡೆಗೆ ಬೆರಳು ತೋರಿಸುತ್ತಾ ಬಂದಿದೆ. ಸೈಬರ್ ಅಟ್ಯಾಕ್ ರಷ್ಯಾ ಮೂಲದ ಹ್ಯಾಕರ್ಸ್ ಕೃತ್ಯ ಎಂದು ಅಮೆರಿಕ ಆರೋಪಿಸುತ್ತಾ ಬಂದಿದೆ. ಆದರೆ ಈವರೆಗೂ ರಷ್ಯಾ ಸೈಬರ್ ಅಟ್ಯಾಕ್ ಮಾಡಿದೆ ಎಂಬುದಕ್ಕೆ ಬಲವಾದ ಸಾಕ್ಷಿ ಸಿಕ್ಕಿಲ್ಲ.
ಏರ್ಪೋರ್ಟ್ ವೈ-ಫೈ ಕೂಡ ಅಬೇಸ್..!
ಅಮೆರಿಕದ ಫೆಡರಲ್ ಅಧಿಕಾರಿಗಳು ರಷ್ಯಾ ವಿರುದ್ಧ ನೀಡಿರುವ ಹ್ಯಾಕಿಂಗ್ ಆರೋಪ ಪಟ್ಟಿಯಲ್ಲಿ ಕೇವಲ ಮೂಲ ಸೌಕರ್ಯ ಹಾಗೂ ಮತದಾರರ ಮಾಹಿತಿ ಟಾರ್ಗೆಟ್ ಮಾಡಿಲ್ಲ. ಇದರ ಜೊತೆಯಲ್ಲೇ ಅಮೆರಿಕದ ಪ್ರತಿಷ್ಠಿತ ಏರ್ಪೋರ್ಟ್ಗಳ ವೈ-ಫೈ ಕೂಡ ಹ್ಯಾಕ್ ಮಾಡಲಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ವೈ-ಫೈ ಹ್ಯಾಕ್ ಮಾಡಲಾಗಿದ್ದು, ಅಲ್ಲಿಗೆ ಬಂದಿದ್ದ ಅನಾಮಿಕ ವ್ಯಕ್ತಿಯೊಬ್ಬನ ಚಹರ ಪತ್ತೆಗಾಗಿ ಪ್ರಯತ್ನಿಸಲಾಗಿತ್ತಂತೆ. ಹೀಗೆ ರಷ್ಯಾ ಹ್ಯಾಕರ್ಸ್ ಟೀಂ ಅಮೆರಿಕದ ಮೇಲೆ ವಿಷಕಾರುವ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿತ್ತು.
A major US fuel pipeline has been shut down after a ransomware attack, in an incident that underscores the vulnerabilities in America’s critical infrastructure.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
03-04-25 01:02 pm
HK News Desk
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm